April 24, 2024

Bhavana Tv

Its Your Channel

ಪವಿತ್ರ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮಹದೇಶ್ವರರ ದೇವಾಲಯದ ಲೋಕಾರ್ಪಣೆಗೆ ಸಕಲ ಸಿದ್ಧತೆ

ಕೃಷ್ಣರಾಜಪೇಟೆ ತಾಲ್ಲೂಕಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಮಹದೇಶ್ವರರ ದೇವಾಲಯದ ಲೋಕಾರ್ಪಣೆಗೆ ಸಕಲ ಸಿದ್ಧತೆ..ಧಾನ್ಯವಾಸದಲ್ಲಿರುವ ಹುಲಿವಾಹನಧಾರಿ ಮಹದೇಶ್ವರರು, ಶಿವಲಿಂಗ ಹಾಗೂ ನಂದಿಯ ಶ್ರೀ ಕೃಷ್ಣಶಿಲಾ ವಿಗ್ರಹಗಳು .. ಕಣ್ಣು ಹಾಯಿಸಿದಷ್ಟು ವಿಶಾಲವಾದ ಜಲರಾಶಿಯ ಸೊಬಗಿನ ಪ್ರಕೃತಿಯ ರಮ್ಯ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳಲು ಕೈ ಬೀಸಿ ಕರೆಯುತ್ತಿರುವ ಪವಿತ್ರ ತ್ರಿವೇಣಿಸಂಗಮ ಕ್ಷೇತ್ರ ….

ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ಮೂರು ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊAಡAತೆ ನಿರ್ಮಿಸುತ್ತಿರುವ ಶ್ರೀ ಮಹದೇಶ್ವರರ ದೇವಾಲಯದ ನಿರ್ಮಾಣವು ಮುಕ್ತಾಯ ಹಂತದಲ್ಲಿದ್ದು ಹುಲಿವಾಹನಧಾರಿ ಮಹದೇಶ್ವರರು, ಶಿವಲಿಂಗ ಹಾಗೂ ಬಸವನ ಸಾಲಿಗ್ರಾಮ ಕೃಷ್ಣ ಶಿಲೆಯ ವಿಗ್ರಹಗಳನ್ನು ಧಾನ್ಯವಾಸದಲ್ಲಿ ಇಡಲಾಗಿದೆ…

ಕಣ್ಣು ಹಾಯಿಸಿದಷ್ಟು ವಿಶಾಲವಾದ ಭೂಪ್ರದೇಶದಲ್ಲಿ ಹರಡಿರುವ ಜಲರಾಶಿಯನ್ನು ಆವರಿಸಿರುವ ರಮ್ಯ ರಮಣೀಯ ತಾಣವಾಗಿರುವ, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಒಂದಾಗಿ ಸೇರುವ ಅಪರೂಪದ ತೀರ್ಥಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಬಾಲಕರಾದ ಮಹದೇಶ್ವರರು ಪ್ರಪ್ರಥಮ ಬಾರಿಗೆ ಸಂಗಮಕ್ಷೇತ್ರದಲ್ಲಿ ಪವಾಡ ಮಾಡಿ ತಾವು ಹೊದ್ದಿದ್ದ ಕೆಂಪು ವಸ್ತ್ರವನ್ನೇ ನೀರಿನ ಮೇಲೆ ಹಾಸಿ ತೆಪ್ಪವನ್ನಾಗಿ ಮಾಡಿಕೊಂಡು ವಿಶಾಲವಾದ ಜಲರಾಶಿಯನ್ನು ದಾಟಿ ಕಪ್ಪಡಿಕ್ಷೇತ್ರಕ್ಕೆ ಹೋಗಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಮಹದೇಶ್ವರರು ಪವಾಡ ಮಾಡಿದ ಸವಿನೆನಪಿಗಾಗಿ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ನಾರಾಯಣಗೌಡರು ಮತ್ತು ಭಕ್ತರ ಸಹಕಾರದಿಂದ ನಿರ್ಮಿಸುತ್ತಿರುವ ದೇವಾಲಯವು ಮುಕ್ತಾಯ ಹಂತಕ್ಕೆ ಬಂದಿದೆ ಎಂದು ತಿಳಿಸಿದ ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಂಚಾಲಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡರು ಫೆಬ್ರುವರಿ ಮೊದಲ ಅಥವಾ ಎರಡನೇ ವಾರದಲ್ಲಿ ಹರಗುರುಚರ ಮುನಿಗಳು ಹಾಗೂ ಸಚಿವರ ಸಮಕ್ಷಮದಲ್ಲಿ ದೇವಾಲಯದ ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿರುವ ಪವಿತ್ರ ತ್ರಿವೇಣಿ ಸಂಗಮವು ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಕಣ್ಣಿಗೆ ಬೀಳದೇ ಇಂದಿಗೂ ಗುಪ್ತವಾಗಿದ್ದು ನಿಗೂಢವಾಗಿಯೇ ಉಳಿದಿದೆ. ಆದ್ದರಿಂದ ಈ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತಾದಿಗಳು ಬಂದುಹೋಗುವ ನಿಟ್ಟಿನಲ್ಲಿ ಸುಸಜ್ಜಿತವಾದ ರಸ್ತೆಗಳು ನಿರ್ಮಾಣವಾಗಿ ಕೆ.ಆರ್.ಪೇಟೆ ಮತ್ತು ನೆರೆಯ ಕೆ.ಆರ್.ನಗರ ತಾಲ್ಲೂಕಿನಿಂದ ಬಸ್ಸುಗಳು ಬಂದು ಹೋಗುವಂತೆ ಅನುಕೂಲ ಕಲ್ಪಿಸಿ ಸಹಾಯ ಮಾಡಬೇಕು. ಶ್ರೀ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡುವ ವಿಶ್ರಾಂತ ಶಿಕ್ಷಕರೂ ಆಗಿರುವ ಡಾ.ಅಂಚಿ.ಸಣ್ಣಸ್ವಾಮಿ ಗೌಡ ಅವರು ತ್ರಿವೇಣಿ ಸಂಗಮದ ಅಭಿವೃದ್ಧಿಗೆ ಏಕಾಂಗಿ ಹೋರಾಟ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಪುರ, ಅಂಬಿಗರಹಳ್ಳಿ ಸಂಗಾಪುರ ಗ್ರಾಮಗಳ ಪಕ್ಕದಲ್ಲಿರುವ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಪ್ರಕೃತಿಯ ರಮ್ಯ ರಮಣೀಯ ತಾಣವಾಗಿರುವ ಪವಿತ್ರ ತ್ರಿವೇಣಿ ಸಂಗಮವು ಸಮಗ್ರವಾಗಿ ಅಭಿವೃದ್ಧಿಯಾಗಿ ಪ್ರತೀ ಮೂರು ವರ್ಷಗಳಿಗೊಮ್ಮೆ ಕುಂಭಮೇಳವು ನಡೆಯಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವು ವಿಶೇಷವಾದ ಗಮನ ಹರಿಸಬೇಕು. ಶ್ರೀ ಕ್ಷೇತ್ರದಲ್ಲಿ ಯಾತ್ರಿಭವನ, ಬಸ್ಸುಗಳ ಸೌಲಭ್ಯ, ಭಕ್ತಾದಿಗಳಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯಗಳು ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಸಹಾಯ ಮಾಡಬೇಕು ಎಂದು ಆಗ್ರಹಿಸಿದ ಸಣ್ಣಸ್ವಾಮಿಗೌಡ ತಾಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು….

ತ್ರಿವೇಣಿ ಸಂಗಮದಲ್ಲಿ ಹತ್ತು ಎಕರೆ ಭೂಮಿಯಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ವತಿಯಿಂದ ಸಾಹಸ ಕ್ರೀಡೆಗಳ ತರಬೇತಿ ಶಾಲೆಯು ಮಂಜೂರಾಗಿದ್ದು ಸಧ್ಯದಲ್ಲಿಯೇ ಜಲಸಾಹಸಗಳ ಕ್ರೀಡಾಶಾಲೆಯು ಉದ್ಘಾಟನೆಯಾಗಲಿದ್ದು ಸಂಗಮ ಕ್ಷೇತ್ರವು ನಾಡಿನ ಜನತೆಗೆ ಪರಿಚಯವಾಗಬೇಕಿದೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: