
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಹೊಯ್ಸಳ ಶಿಲ್ಪಕಲಾ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಯಶಸ್ವಿಯಾಗಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮ ..
ಕಳೆದ 10 -12 ತಿಂಗಳುಗಳಿAದ ಪಿಂಚಣಿ ಹಣ ಬರದೇ ಕಂಗಾಲಾಗಿದ್ದ ವಯೋವೃದ್ಧರು, ಅನಾಥ ವಿಧವೆಯರು ಹಾಗೂ ವಿಶೇಷಚೇತನರ ಸಮಸ್ಯೆಗಳನ್ನು ಆಲಿಸಿ ಆತ್ಮವಿಶ್ವಾಸ ತುಂಬಿದರು..
ಕೃಷ್ಣರಾಜಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ವಿಧವಾ, ಸಂಧ್ಯಾಸುರಕ್ಷಾ, ವಿಶೇಷಚೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಹಣವು ಖಾತೆಗೆ ಜಮಾ ಆಗುತ್ತಿಲ್ಲ. ಆದ್ದರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮತ್ತೆ ಆಧಾರ್ ಲಿಂಕ್ ಮಾಡಿಸಿ ಹಣವು ಎಂದಿನAತೆ ಜಮಾ ಆಗಲು ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಲಾಗುತ್ತಿದೆ. ಆದ್ದರಿಂದ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಸರ್ಕಾರದಿಂದ ನಿಮಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು ತಾಲೂಕು ಆಡಳಿತವು ಬದ್ಧವಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಹಣವು ಖಾತೆಗೆ ಜಮಾ ಆಗದ ಫಲಾನುಭವಿಗಳು ನಿಮ್ಮ ನಿಮ್ಮ ವೃತ್ತದ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ ಅವರಿಂದ ನಿಮ್ಮ ದಾಖಲಾತಿಯನ್ನು ಪರಿಶೀಲನೆ ಮಾಡಿಸಿ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಹಾಗೂ ಆದೇಶ ಮಂಜೂರಾತಿ ಪತ್ರದ ನಕಲನ್ನು ಕಂಪ್ಯೂಟರ್ ಶಾಖೆಗೆ ತಲುಪಿಸಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು..
ಕೃಷ್ಣರಾಜಪೇಟೆ ಪುರಸಭೆಯ ಸದಸ್ಯ ಹೆಚ್.ಆರ್.ಲೋಕೇಶ್ ನೊಂದ ಫಲಾನುಭವಿಗಳ ಪರವಾಗಿ ಮಾತನಾಡಿ ಆದಷ್ಟು ಜಾಗ್ರತೆ ಮಾಸಿಕ ಪಿಂಚಣಿ ಹಣದಿಂದ ವಂಚಿತರಾಗಿರುವ ಜನರ ಖಾತೆಗಳಿಗೆ ನೇರವಾಗಿ ಹಣವನ್ನು ತಲುಪಿಸುವ ಮೂಲಕ ಬಡಜನರ ಕಣ್ಣೀರನ್ನು ಒರೆಸುವ ಪುಣ್ಯದ ಕೆಲಸ ಮಾಡಬೇಕು ಎಂದು ಹೇಳಿದರು.
ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕುಮಾರ್, ಮಹಿಳಾ ಹೋರಾಟಗಾರ್ತಿ ಕೆ.ಮಂಜುಳಾ, ಸಚಿವ ನಾರಾಯಣಗೌಡರ ಆಪ್ತಸಹಾಯಕರಾದ ಸಾರಂಗಿ ಮಂಜುನಾಥಗೌಡ, ರಾಜಶ್ವನಿರೀಕ್ಷಕಿ ಚಂದ್ರಕಲಾ, ತಾಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ತಾಲೂಕು ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಸಾರಂಗಿ ನಾಗರಾಜು, ರೈತಮೋರ್ಚಾ ಅಧ್ಯಕ್ಷ ರಾಜು, ನಗರ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾರಮೇಶ್, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
More Stories
ಕೆ.ಆರ್.ಪೇಟೆ ತಾಲೂಕು ಜಾನಪದ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾವಿದರ ಸಂಘದ ಉದ್ಘಾಟನೆ .
ಮಡವಿನಕೋಡಿ ಮತ್ತು ಬೀರವಳ್ಳಿಯಲ್ಲಿ ವಿದ್ಯುತ್ ಸಬ್ ಸ್ಟೇಷನ್ ಗಳ ನಿರ್ಮಾಣಕ್ಕೆ ಸಚಿವ ನಾರಾಯಣಗೌಡ ರಿಂದ ಭೂಮಿಪೂಜೆ
ಸುಭದ್ರ ಜೀವನ ಹಾಗೂ ಆರ್ಥಿಕ ಸುಸ್ಥಿರತೆಗೆ ಟೈಲರಿಂಗ್ ವೃತ್ತಿಯು ವರದಾನ-
ಸಚಿವ ಡಾ.ನಾರಾಯಣಗೌಡ ಅಭಿಮತ