April 20, 2024

Bhavana Tv

Its Your Channel

ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ-ಕಿಕ್ಕೇರಿ ಸುರೇಶ್

ಕೃಷ್ಣರಾಜಪೇಟೆ :– ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ. ಆದ್ದರಿಂದ ಯುವಜನರು ಸತತವಾಗಿ ಅಭ್ಯಾಸ ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಮೂಲಕ ದೇಶದ ಕೀರ್ತಿಯನ್ನು ಬೆಳಗಬೇಕು ಎಂದು ಕೆ.ಆರ್.ಪೇಟೆ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಕರೆ ನೀಡಿದರು ..

ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಟ್ರೋಫಿಗಳು ಹಾಗೂ ನಗಧು ಬಹುಮಾನವನ್ನು ವಿತರಿಸಿ ಮಾತನಾಡಿದರು…

ಯುವಜನರಲ್ಲಿ ಲವಲವಿಕೆ ಹಾಗೂ ಉತ್ಸಾಹವನ್ನು ತುಂಬಲು ಕ್ರೀಡಾ ಚಟುವಟಿಕೆಗಳು ವರದಾನವಾಗಿವೆ. ಆದ್ದರಿಂದ ಯುವಜನರು ಕ್ರೀಡಾಸ್ಪೂರ್ತಿಯಿಂದ ಆಟೋಟಗಳ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು-ಗೆಲುವುಗಳಿಗೆ ತಲೆಕೆಡಿಸಿಕೊಳ್ಳದೇ ಇಂದಿನ ಸೋಲನ್ನು ಮುಂದಿನ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಳ್ಳಲು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ನಮ್ಮ ರಾಜ್ಯಕ್ಕೆ ಹಾಗೂ ನಮ್ಮ ದೇಶಕ್ಕೆ ಕೀರ್ತಿಯನ್ನು ತರುವ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಮೂಲಕ ಜೀವನೋತ್ಸಾಹವನ್ನು ರೂಢಿಸಿಕೊಂಡು ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಮನವಿ ಮಾಡಿದ ಸುರೇಶ್ ಯುವಜನರು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿನಯವಂತಿಕೆ ಹಾಗೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಗುರು ಹಿರಿಯರು ಹಾಗೂ ತಂದೆತಾಯಿಗಳನ್ನು ಭಕ್ತಿಯಿಂದ ಪೂಜಿಸಬೇಕು ಎಂದು ಕಿವಿಮಾತು ಹೇಳಿದರು..

ಕೆ.ಆರ್.ಪೇಟೆ ಮಹಿಳಾ ಪ್ರಥಮದರ್ಜೆ ಕಾಲೇಜಿನ ಅಧೀಕ್ಷಕರಾದ ಬಿ.ಎ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಪುರಸಭಾ ಸದಸ್ಯರಾದ ಡಿ.ಪ್ರೇಮಕುಮಾರ್, ಗಿರೀಶ್, ಗವಿಮಠದ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲರಾದ ಪ್ರಸನ್ನಕುದಯಾನಂದ, ಶಿಕ್ಷಕರಾದ ಆರ್.ಕೆ.ರಮೇಶ್, ಸಿಂದಘಟ್ಟ ನಾಗೇಶ್, ಡಾ.ದಿವಾಕರ್, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ನೀಲಕಂಠ, ನೀರಾವರಿ ಇಲಾಖೆಯ ವಿಶ್ರಾಂತ ಅಧಿಕಾರಿ ಪ್ರಕಾಶ್, ಶಂಕರ್ ಸ್ಪೋರ್ಟ್ಸ್ ಅಕಾಡೆಮಿಯ ವ್ಯವಸ್ಥಾಪಕಿ ದೀಪಶ್ರೀ ಶಂಕರ್, ಯುವಮುಖಂಡ ಶೀಳನೆರೆ ಭರತ್, ಶರತ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಗಳಾದ ಸುನಿಲ್, ಬಸವರಾಜು, ಉಧ್ಯಮಿ ವಿಶ್ವನಾಥ್, ಸಚಿವ ನಾರಾಯಣಗೌಡರ ಆಪ್ತಸಹಾಯಕ ದಯಾನಂದ ಸೇರಿದಂತೆ ನೂರಾರು ಕ್ರೀಡಾಪಟುಗಳು ಹಾಗೂ ಕ್ರೀಡಾ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ಬಹುಮಾನ ವಿಜೇತರು ..

ಶಟಲ್ ಬ್ಯಾಡ್ಮಿಂಟನ್ 45+ ಹಿರಿಯರ ವಿಭಾಗದಲ್ಲಿ ಬೆಂಗಳೂರಿನ ಅಮರ್ ಮತ್ತು ಕಿರಣ್ ಪ್ರಥಮ ಬಹುಮಾನ ಪಡೆದರೆ ಕೃಷ್ಣರಾಜಪೇಟೆಯ ಶಂಕರ್ ಮತ್ತು ಸುರೇಶ್ ದ್ವಿತೀಯ ಸ್ಥಾನ ಪಡೆದರು. 35+ ಮಧ್ಯಮ ವಯಸ್ಕರ ವಿಭಾಗದಲ್ಲಿ ಹಾಸನದ ಪ್ರಸನ್ನ ಮತ್ತು ಮಧು ಪ್ರಥಮ ಸ್ಥಾನ ಪಡೆದರೆ ಕೆ.ಆರ್.ಪೇಟೆಯ ಶಂಕರ್ ಮತ್ತು ಸುಹಾಸ್ ದ್ವಿತೀಯ ಸ್ಥಾನ ಗಳಿಸಿದರು. ಓಪನ್ ವಿಭಾಗದಲ್ಲಿ ತುಮಕೂರಿನ ದರ್ಶನ್ ಮತ್ತು ವಿನಯ್ ಪ್ರಥಮ ಸ್ಥಾನ ಪಡೆದರೆ ಬೆಂಗಳೂರಿನ ಲಿಖಿತ್ ಮತ್ತು ವರುಣ್ ದ್ವಿತೀಯ ಸ್ಥಾನ ಗಳಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: