April 25, 2024

Bhavana Tv

Its Your Channel

ಕೆ.ಆರ್.ಪೇಟೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವೆಂದು ಘೋಷಿಸಿ ಹೂವಿನ ಗಿಡಮರಗಳನ್ನು ನೆಟ್ಟು ನಗರದ ಹಸಿರೀಕರಣಕ್ಕೆ ಚಾಲನೆ ನೀಡಿದ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುoಡ ..

1500 ದೇವ ಕಣಗಲೆ ಹೂವಿನ ಗಿಡಗಳನ್ನು ಮುಖ್ಯರಸ್ತೆಯಲ್ಲಿ ಹಾಗೂ ವಿವಿಧ ಬಡಾವಣೆಗಳಲ್ಲಿ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ಕುಮಾರ್ ಹಾಗೂ ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ..

ಕೃಷ್ಣರಾಜಪೇಟೆ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವೆಂದು ಘೋಷಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಿರುವ ಪುರಸಭೆಯು ಇಂದು ಪಟ್ಟಣದಲ್ಲಿ ಒಂದೂವರೆ ಸಾವಿರ ಹೂವು ಮತ್ತು ಹಣ್ಣಿನ ಸಸಿಗಳನ್ನು ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದು ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು….

ಅವರು ಇಂದು ಪಟ್ಟಣದ ಮುಖ್ಯರಸ್ತೆಯ ರಸ್ತೆ ವಿಭಜಕದ ಮಧ್ಯದಲ್ಲಿ ಸಸಿ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಪಟ್ಟಣದ ಜನತೆ ಪರಿಸರ ಸಂರಕ್ಷಣೆಗೆ ಸಸಿಗಳನ್ನು ನೆಡುವ ಮೂಲಕ ಪುರಸಭೆಯು ಹಮ್ಮಿಕೊಂಡಿರುವ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಸಹಕರಿಸಬೇಕು. ನಿಮ್ಮ ನಿಮ್ಮ ಮನೆಯ ಮುಂಭಾಗದಲ್ಲಿ ಕಡ್ಡಾಯವಾಗಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಹಸಿರಿದ್ದರೆ ಉಸಿರು, ಕಾಡಿನಿಂದ ನಾಡಿನ ಸಂರಕ್ಷಣೆ ಸಾಧ್ಯವೆಂಬ ಸತ್ಯ ಅರಿತು ಪರಿಸರ ಪ್ರೇಮವನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು ಎಂದು ಮಹಾದೇವಿನಂಜುAಡ ಮನವಿ ಮಾಡಿದರು…

ಪಟ್ಟಣದ ಹಸುರೀಕರಣ ಹಾಗೂ ಗಿಡ ನೆಡುವ ಕಾರ್ಯದಲ್ಲಿ ಆರೋಗ್ಯ ಪರಿವೀಕ್ಷಕರಾದ ಅಶೋಕ್, ರಾಜೇಂದ್ರಕುಮಾರ್, ಪುರಸಭಾ ಸದಸ್ಯರಾದ ಕೆ.ಎಸ್.ರಾಜೇಶ್, ಕೆ.ಆರ್‌ನೀಲಕಂಠ, ತೇಜಸ್ವಿನಿ ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾಶೆಟ್ಟಿ, ಕಾವ್ಯಹರೀಶ್, ಅನ್ನಪೂರ್ಣ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಬಿ.ಬಸವೇಗೌಡ, ಪದಾಧಿಕಾರಿಗಳಾದ ವಿಶ್ರಾಂತ ಸೈನಿಕ ಸುಕುಮಾರ್, ಕರೀಗೌಡ, ಚಾಶಿ ಜಯಕುಮಾರ್, ತಾಲ್ಲೂಕು ಆಯುಷ್ ವೈದ್ಯಾಧಿಕಾರಿಗಳಾದ ಡಾ.ಲೋಕೇಶ್ ಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಹೆಚ್.ಬಿ.ಮಂಜುನಾಥ್, ಡಿ.ಬಿ.ಸತ್ಯ, ಡಿ.ಟಿ.ಪುಲಿಗೆರಯ್ಯ, ಮಂಟೆ ಮಂಜು, ನರಸಿಂಹಶೆಟ್ಟಿ, ಮೇಸ್ತ್ರಿ ಮುತ್ತಣ್ಣ, ಧನಂಜಯ, ರವಿ ಸೇರಿದಂತೆ ಪೌರಕಾರ್ಮಿಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಿದ್ದರು..

ವರದಿ:ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ
.

error: