April 26, 2024

Bhavana Tv

Its Your Channel

ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ “ಗಂಗಾ ಹೋಂಸ್ಟೇ” ಆರಂಭ

ಕೃಷ್ಣರಾಜಪೇಟೆ :- ಕೃಷ್ಣರಾಜಪೇಟೆ ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಜಾಮಿಯಾ ಮಸೀದಿಯ ಪಕ್ಕದಲ್ಲಿ ದೇವೀರಮ್ಮಣ್ಣಿ ಕೆರೆಯ ದಡದ ಪ್ರಶಾಂತ ತೀರದಲ್ಲಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ “ಗಂಗಾ ಹೋಂಸ್ಟೇ” ಆರಂಭ .. ಪ್ರವಾಸಿಗರು ನೂತನವಾಗಿ ಆರಂಭವಾಗಿರುವ “ಗಂಗಾ ಹೋಂಸ್ಟೇ” ಅನ್ನು ಸದ್ಬಳಕೆ ಮಾಡಿಕೊಳ್ಳಲು ಮಾಲೀಕರಾದ ಗಂಗಾಧರ ಮನವಿ ಮಾಡಿದರು

ಕೆ.ಆರ್.ಪೇಟೆ ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಜಾಮಿಯಾ ಮಸೀದಿಯಿಂದ ಪುರಸಭಾ ಸದಸ್ಯ ರವೀಂದ್ರಬಾಬು ಅವರ ಮುಂಭಾಗ ತೆರಳಿ ಎಡಭಾಗಕ್ಕೆ ದೇವೀರಮ್ಮಣ್ಣಿ ಕೆರೆಗೆ ಹೋಗುವ ರಸ್ತೆಯಲ್ಲಿ 100 ಮೀಟರ್ ಮುಂದೆ ಸಾಗಿದರೆ ಸಾಕು ಗಂಗಾ ಹೋಂ ಸ್ಟೇ ಸಿಗುತ್ತದೆ. ಸುಸಜ್ಜಿತವಾದ ಈಜುಕೊಳ, ಅತ್ಯುತ್ತಮವಾದ ಕೈತೋಟ, ಅತ್ಯುತ್ತಮವಾದ ಕೊಠಡಿಗಳು, ಗ್ರಾಮೀಣ ಶೈಲಿಯ ಊಟ, ತಿಂಡಿ ಶಾಖಾಹಾರಿ ಮತ್ತು ಮಾಂಸಾಹಾರಿ ವಿಧಗಳಲ್ಲಿ ರುಚಿ ಶುಚಿಯಾಗಿ ದೊರೆಯುತ್ತದೆ. ಪ್ರಕೃತಿಯ ರಮ್ಯ ರಮಣೀಯವಾದ ಪ್ರಶಾಂತ ದೇವೀರಮ್ಮಣ್ಣಿ ಕೆರೆಯ ದಡದಲ್ಲಿರುವ ಗಂಗಾ ಹೋಂಸ್ಟೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರವಾಸೋದ್ಯಮ ಹಾಗೂ ಕ್ರೀಡಾ ಇಲಾಖೆಯ ಅನುಮತಿಯನ್ನು ಪಡೆದು ದೇವೀರಮ್ಮಣ್ಣಿ ಕೆರೆಯ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳು ಹಾಗೂ ಬೋಟಿಂಗ್ ಸೌಲಭ್ಯಗಳನ್ನು ದೊರಕಿಸಿಕೊಡುವ ಸಂಬAಧ ಈಗಾಗಲೇ ಸರ್ಕಾರದಿಂದ ಅನುಮತಿ ಪಡೆಯಲು ಮುಂದಾಗಿದ್ದೇನೆ. ವೀಕೆಂಡ್ ಗಳಲ್ಲಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಬಂದು ಉಳಿಯುವ ಹಾಗೂ ನಮ್ಮ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿಯೇ ಇರುವ ಪ್ರಸಿದ್ಧವಾದ ಭೂವರಹನಾಥ ದೇವಾಲಯ, ಪವಿತ್ರ ತ್ರಿವೇಣಿ ಸಂಗಮ, ಹೊಸಹೊಳಲು ಹೊಯ್ಸಳ ವಾಸ್ತುವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ, ಗೋವಿಂದನಹಳ್ಳಿಯ ಪಂಚಲಿAಗೇಶ್ವರ ದೇವಾಲಯ, ಹೇಮಗಿರಿ ಫಾಲ್ಸ್, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿನ ಗುಡ್ಡದ ಮೇಲೆ ಏಕಾಂಗಿಯಾಗಿ ನಿಂತಿರುವ 17 ಅಡಿ ಎತ್ತರದ ಬಸ್ತಿಯ ಗೊಮ್ಮಟಮೂರ್ತಿಯ ದರ್ಶನ ಸೇರಿದಂತೆ ವಿವಿಧ ಸ್ಥಳಗಳನ್ನು ಯಾತ್ರಾರ್ಥಿಗಳಿಗೆ ಪರಿಚಯಿಸಿ ಕೆ.ಆರ್.ಪೇಟೆಯಲ್ಲಿ ತಾಲ್ಲೂಕನ್ನು ಸುಪ್ರಸಿದ್ಧ ಯಾತ್ರಾಸ್ಥಳವನ್ನಾಗಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಆಲೋಚನೆಯನ್ನು ಹೊಂದಿರುವುದಾಗಿ ಗಂಗಾಧರ ತಿಳಿಸಿದರು..

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕೆಎಎಸ್ ಅಧಿಕಾರಿಗಳು, ಗಂಗಾಧರ ಅವರ ಮಿತ್ರರು, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಜೆ.ಪ್ರಕಾಶ್, ಅರೆಬೂವನಹಳ್ಳಿ ರಮೇಶ್, ಟಿಎಪಿಸಿಎಂಎಸ್ ರವಿ, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿ ಕುಮಾರ್, ಹಾಸನ ಪೋಲಿಸ್ ಇನ್ಸ್ ಪೆಕ್ಟರ್ ಕುಮಾರ್ ಸೇರಿದಂತೆ ಬಂಧುಗಳು ಹಾಗೂ ಹಿತೈಷಿಗಳು ಗಂಗಾ ಹೋಂಸ್ಟೇ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನೂತನ ಉಧ್ಯಮ ಆರಂಭಿಸಿರುವ ಗಂಗಾಧರ ಅವರಿಗೆ ಶುಭ ಹಾರೈಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: