August 19, 2022

Bhavana Tv

Its Your Channel

ಪಿ.ಎಲ್.ಡಿ ಬ್ಯಾಂಕ್ ವಿಶ್ರಾಂತ ವ್ಯವಸ್ಥಾಪಕ ರಾಮೇಗೌಡ ನಿಧನ

ಕೆ.ಆರ್.ಪೇಟೆ ತಾಲ್ಲೂಕು ಸಿಂದಘಟ್ಟ ಗ್ರಾಮದ ಮುಖಂಡ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ನ ವಿಶ್ರಾಂತ ವ್ಯವಸ್ಥಾಪಕರಾದ ರಾಮೇಗೌಡ(71)ಅನಾರೋಗ್ಯದಿಂದ ನಿಧನರಾದರು..

ಮೃತರು ಪತ್ನಿ ಹೆಚ್.ಬಿ.ವಿಜಯಲಕ್ಷ್ಮಿ, ಪುತ್ರ ಕೃಷ್ಣಮೂರ್ತಿ(ಕಿರಣ್) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.. ಸಿಂದಘಟ್ಟ ಗ್ರಾಮದಲ್ಲಿ ಮೃತರ ಅಂತ್ಯಸAಸ್ಕಾರ ನಡೆಯಿತು….

ಪಿಎಲ್ ಡಿ ಬ್ಯಾಂಕಿನ ವ್ಯವಸ್ಥಾಪಕರಾಗಿ ಬದ್ಧತೆಯಿಂದ ಕೆಲಸ ಮಾಡಿ ರೈತರಿಗೆ ಸರ್ಕಾರದಿಂದ ದೊರೆಯುವ ಸಬ್ಸಿಡಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳನ್ನು ದೊರಕಿಸಿಕೊಡಲು ಶ್ರಮಿಸಿದ್ದ ರಾಮೇಗೌಡರು ಅಪಾರವಾದ ಜನ ಮನ್ನಣೆಗೆ ಪಾತ್ರವಾಗಿದ್ದರು..

ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾದ ನಂತರ ಪ್ರಗತಿಪರ ರೈತರಾಗಿ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಾಮೇಗೌಡ ಅವರ ನಿಧನಕ್ಕೆ ಸಚಿವ ಡಾ.ನಾರಾಯಣಗೌಡ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್, ಜಿಪಂ ಮಾಜಿಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಸಿಂದಘಟ್ಟ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ರವಿಕುಮಾರ್, ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಜಿ.ಚನ್ನೇಗೌಡ, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಸೇರಿದಂತೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

About Post Author

error: