April 20, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭಾ ಕಾರ್ಯಾಲಯದಲ್ಲಿ ನಾಡಪ್ರಭು, ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ 513ನೇ ಜಯಂತ್ಯೋತ್ಸವ ಆಚರಣೆ .

ಕೆ.ಆರ್.ಪೇಟೆ:- ಜಾತ್ಯಾತೀತ ಸಮಾಜದ ನಿರ್ಮಾಣ ಕ್ಕಾಗಿ ದುಡಿದು ಕೆರೆ ಕಟ್ಟೆಗಳನ್ನು ನಿರ್ಮಿಸಿ, ಎಲ್ಲಾ ಜಾತಿ ವರ್ಗಗಳ ಜನರ ಜೀವನ ನಿರ್ವಹಣೆ ಹಾಗೂ ವ್ಯವಹಾರಗಳಿಗಾಗಿ 60 ವಾಣಿಜ್ಯ ಪೇಟೆಗಳನ್ನು ನಿರ್ಮಿಸಿ ಪ್ರಜೆಗಳ ಕ್ಷೇಮ ಹಾಗೂ ನೆಮ್ಮದಿಯ ಜೀವನಕ್ಕಾಗಿ ಜನಪರವಾದ ಆಡಳಿತ ನಡೆಸಿದ ನಾಡಪ್ರಭುಗಳ ಆದರ್ಶಗಳನ್ನು ಇಂದಿನ ಜನಪ್ರತಿನಿಧಿಗಳು ಮೈಗೂಡಿಸಿಕೊಂಡು ದುಡಿಯಲು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದ ಪುರಸಭಾ ಅಧ್ಯಕ್ಷೆ ಮಹಾದೇವಿ ನಮ್ಮ ರಾಜ್ಯದ ರಾಜಧಾನಿಯಾದ ಕೆಂಪೇಗೌಡರು ಕಟ್ಟಿದ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆಯಲು ದೊರೆಗಳ ದೂರದರ್ಶಿತ್ವದ ಆಡಳಿತ ಮುಖ್ಯ ಕಾರಣವಾಗಿದೆ ಎಂದು ಮಹಾದೇವಿನಂಜುAಡ ಕೆಂಪೇಗೌಡರ ಗುಣಗಾನ ಮಾಡಿದರು..

ಪುರಸಭಾ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯಾಧಿಕಾರಿ ಕುಮಾರ್, ಸದಸ್ಯ ಕೆ.ಆರ್.ನೀಲಕಂಠ ಕೆಂಪೇಗೌಡರ ಜೀವನ ಸಾಧನೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಕೆ.ಸಿ.ಮಂಜುನಾಥ್, ಶಾಮಿಯಾನತಿಮ್ಮೇಗೌಡ, ಟೈಲರ್ ದಿನೇಶ್, ಹೆಚ್.ಎನ್.ಪ್ರವೀಣ್, ತೇಜಸ್ವಿನಿಮಂಜುನಾಥ್, ಗಿರೀಶ್, ಮಹೇಶ್, ಡಾ.ಕೆ.ಎಸ್.ರಾಜೇಶ್, ಶುಭ ಗಿರೀಶ್, ಸೌಭಾಗ್ಯ ಉಮೇಶ್, ಸುಗುಣರಮೇಶ್, ಕಲ್ಪನಾದೇವರಾಜ್, ಹೆಚ್.ಡಿ.ಅಶೋಕ್, ಶೋಭ, ಇಂದ್ರಾಣಿವಿಶ್ವನಾಥ್, ಪರಿಸರ ಎಂಜಿನಿಯರ್ ಅರ್ಚನಾ, ಸಹಾಯಕ ಎಂಜಿನಿಯರ್ ಮಧುಸೂದನ್, ಕಛೇರಿವ್ಯವಸ್ಥಾಪಕ ಚಂದ್ರಶೇಖರ್, ಆರೋಗ್ಯ ನಿರೀಕ್ಷಕರಾದ ಅಶೋಕ್, ರಾಜೇಂದ್ರಕುಮಾರ್, ಮಂಜುಳಾ, ಶಾರದಾ, ರತ್ನಮ್ಮ, ಭಾರತಿ, ಪೌರಕಾರ್ಮಿಕರು ಸೇರಿದಂತೆ ಕಛೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು…

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: