March 29, 2024

Bhavana Tv

Its Your Channel

ಕೆ.ಆರ್.ಪೇಟೆಯ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜನ್ಮದಿನಾಚರಣೆ

ಕೆ.ಆರ್.ಪೇಟೆ ಪಟ್ಟಣದ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜನ್ಮದಿನಾಚರಣೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ..

ಮಂಡ್ಯ ವಿಭಾಗದ ರಸ್ತೆ ಸಾರಿಗೆ ಸಂಸ್ಥೆಯ ಸಂಚಾಲನಾ ಅಧಿಕಾರಿಗಳಾದ ದಿನೇಶ್ ಕುಮಾರ್ ಧರ್ಮಪ್ರಭು, ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಾರಿಗೆ ಇಲಾಖೆಯ ಕೆ.ಆರ್.ಪೇಟೆ ಘಟಕದ ಸಹ ಉಗ್ರಾಣಾಧಿಕಾರಿ ಮುತ್ತೇಶ್ ಮೆಣಸಿನಕಾಯಿ ಅವರು ರಚಿಸಿರುವ ಹೃದಯವಂತರು ರಸ್ತೆ ಸಾರಿಗೆ ಸಿಬ್ಬಂಧಿಗಳು ಕವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು..

ದೂರದೃಷ್ಟಿಯ ದಕ್ಷ ಆಡಳಿತಗಾರರಾಗಿದ್ದ ನಾಡಪ್ರಭು ಕೆಂಪೇಗೌಡರು ಪ್ರಜೆಗಳ ಯೋಗಕ್ಷೇಮ ಹಾಗೂ ನಾಡಿನ ಅಭಿವೃದ್ಧಿಯಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ. ರೈತರು ಹಾಗೂ ನಾಡಿನ ಕಲ್ಯಾಣಕ್ಕಾಗಿ ಕೆರೆ ಕಟ್ಟೆಗಳು, ದೇವಸ್ಥಾನಗಳು, ಕೋಟೆ ಕೊತ್ತಲಗಳು ಹಾಗೂ ಪೇಟೆಗಳನ್ನು ನಿರ್ಮಿಸುವ ಮೂಲಕ ಶ್ರೀ ಸಾಮಾನ್ಯರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಟ್ಟರು ಎಂದು ಸ್ಮರಿಸಿ ಧರ್ಮಪ್ರಭುಗಳಾದ ಮಾಗಡಿ ಕೆಂಪೇಗೌಡರ ಗುಣಗಾನ ಮಾಡಿದರು..

ಸಾರಿಗೆ ಇಲಾಖೆಯ ನೌಕರರಾಗಿದ್ದರೂ ಕವಿಮನಸ್ಸನ್ನು ಹೊಂದಿರುವ ಮುತ್ತೇಶ್ ಮೆಣಸಿನಕಾಯಿ ಅವರ ಸಾಹಿತ್ಯ ಕೃಷಿಯನ್ನು ಶ್ಲಾಘಿಸಿದ ದಿನೇಶ್ ಕುಮಾರ್ ನಮ್ಮ ಇತಿಹಾಸ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಸರ್ವಜನಾಂಗದ ಶಾಂತಿಯ ತೋಟಕ್ಕೆ ಪ್ರೇರೇಪಣೆ ನೀಡುವ ಕತೆ ಕವನಗಳ ರಚನೆಗೆ ಮುಂದಾಗುವAತೆ ದಿನೇಶ್ ಮನವಿ ಮಾಡಿದರು..

ಬಸ್ ಡಿಪೋ ವ್ಯವಸ್ಥಾಪಕ ವಿಪಿನ್ ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಮಾತನಾಡಿದರು..

ಬಸ್ ಡಿಪೋ ಅಧಿಕಾರಿಗಳು, ನೌಕರರು, ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: