March 29, 2024

Bhavana Tv

Its Your Channel

ನಾಳೆ ಮಾಜಿ ಸಂಸದ ಕೃಷ್ಣ ರವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿ , ವಿಶೇಷವಾಗಿ ಆಚರಿಸಲು ನಿರ್ಧಾರ

ಕೆ.ಆರ್.ಪೇಟೆ :- ಜುಲೈ 1 ರಂದು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ರಾಜ್ಯದ ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಆದ ಕೃಷ್ಣ ರವರ 83ನೇ ವರ್ಷದ ಹುಟ್ಟು ಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ , ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಕೃಷ್ಣ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ. ಅಂಚಿ. ಸಣ್ಣಸ್ವಾಮಿಗೌಡ ಅವರು ತಿಳಿಸಿದರು .

ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಹುಟ್ಟುಹಬ್ಬದ ಅಂಗವಾಗಿ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಸರಳ, ಸಜ್ಜನ ರಾಜಕಾರಣಿ, ಮಂಡ್ಯದ ಗಾಂಧಿ ಎಂದೇ ಬಿರುದಾಂಕಿತರಾಗಿರುವ ಕೆ ಆರ್ ಪೇಟೆ ಕೃಷ್ಣ ಅವರ 83 ನೇ ವರ್ಷದ ಹುಟ್ಟುಹಬ್ಬವನ್ನು ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನ ವತಿಯಿಂದ ಜುಲೈ.1ರಂದು ಬೆಳಿಗ್ಗೆ 9ಗಂಟೆಗೆ ಸಾಧುಗೋನಹಳ್ಳಿ ಬಳಿ ಇರುವ ಮಾತೃಭೂಮಿ ವೃದ್ಧಾಶ್ರಮದಲ್ಲಿರುವ ನಿರಾಶ್ರಿತರೊಂದಿಗೆ ಬೆಳಗಿನ ಉಪಾಹಾರ ಮಾಡಿ ಅಲ್ಲೇ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಕೆ.ಆರ್.ಪೇಟೆ ಪಟ್ಟಣದ ಸುಲೋಚನಮ್ಮ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಯುವಜನ ಸೇವಾ ಸಬಲೀಕರಣ ಕ್ರೀಡಾ ಹಾಗೂ ರೇಷ್ಮೆ ಸಚಿವರಾದ ಡಾ ಕೆ ಸಿ ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.

ಕಾರ್ಯಕ್ರಮಕ್ಕೆ ಕ್ಷೇತ್ರದ ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಬಿ.ಪ್ರಕಾಶ್, ಎಂ ಪುಟ್ಟಸ್ವಾಮಿಗೌಡ, ಮನ್ಮುಲ್ ನಿರ್ದೇಶಕರಾದ ಹೆಚ್ ಟಿ ಮಂಜು, ಡಾಲು ರವಿ,ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಹೊಸದಾದ ಅಶೋಕ್, ಬಸ್ ತಿಮ್ಮೇಗೌಡ ಸೇವಾ ಟ್ರಸ್ಟ್ ಅಧ್ಯಕ್ಷ ಬಸ್ ಸಂತೋಷ್ ಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರ 50 ವರ್ಷಗಳ ಕಾಲ ರಾಜಕಾರಣ ಹಾಗೂ ಹೋರಾಟಗಳನ್ನು ಮಾಡಿ ತಮ್ಮ ಸರಳತೆ, ಪ್ರಾಮಾಣಿಕತೆ ಹಾಗೂ ದಿಟ್ಟತನಗಳ ಮೂಲಕ ಮಂಡ್ಯ ಗಾಂಧಿ ಎಂದೇ ರಾಜ್ಯಾದ್ಯಂತ ಜನಪ್ರಿಯತೆಗಳಿಸಿದ್ದ ದಿವಂಗತ ಕೃಷ್ಣ ಅವರ ಬಗ್ಗೆ ವಿಚಾರವಂತ ಗಣ್ಯರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷ್ಣ ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 6ಮಂದಿ ಕಾಯಕ ಯೋಗಿಗಳಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕಾರ್ಯಕ್ರಮದಲ್ಲಿ ಕೃಷ್ಣ ಅವರ ಒಡನಾಡಿಗಳು,ಅಭಿಮಾನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನದ ಟ್ರಸ್ಟಿಗಳು ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಡಾ.ಅಂಚಿ ಸಣ್ಣಸ್ವಾಮಿಗೌಡ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೃಷ್ಣ ಪ್ರತಿಷ್ಠಾನದ ಟ್ರಸ್ಟಿಗಳಾದ ಬೂಕನಕೆರೆ ಜವರಾಯಿಗೌಡ, ಗೂಡೆಹೊಸಹಳ್ಳಿ ಚನ್ನಿಂಗೇಗೌಡ, ರಾಯಸಮುದ್ರ ಆರ್.ಎಸ್.
ಶಿವರಾಮೇಗೌಡ, ಹೆಮ್ಮನಹಳ್ಳಿ ರಮೇಶ್, ಹಾದನೂರು ಪರಮೇಶ್,ಕತ್ತರಘಟ್ಟ ವಾಸು, ಐಚನಹಳ್ಳಿ ಶಿವಣ್ಣ, ಮರಡಹಳ್ಳಿ ಎಂ.ಬಿ. ತಿಮ್ಮೇಗೌಡ, ಸಿಂಧುಘಟ್ಟ ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: