April 20, 2024

Bhavana Tv

Its Your Channel

ರಸ್ತೆ ಬದಿಯ ಹಣ್ಣು ಮತ್ತು ಹೂವಿನ ವ್ಯಾಪಾರಿಗಳು ಆಯೋಜಿಸಿದ್ದ 75ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ

ಕೃಷ್ಣರಾಜಪೇಟೆ :- ರಾಷ್ಟ್ರಧ್ವಜವನ್ನು ಕೈಯ್ಯಲ್ಲಿ ಹಿಡಿದು ಓಡಾಡಿದರೆ ಸಾಕು ಬ್ರಿಟೀಷರಿಂದ ಕಠಿಣ ಶಿಕ್ಷೆ ಅನುಭವಿಸುತ್ತಿದ್ದ ಕಾಲವೊಂದಿತ್ತು ಆದರೆ ಇಂದು ಭಾರತ ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯ ಮೇಲೆ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಆರೋಹಣ ಮಾಡಲು ಕೇಂದ್ರ ಸರ್ಕಾರವು ಅವಕಾಶ ಮಾಡಿಕೊಟ್ಟಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ತಹಶೀಲ್ದಾರ್ ಎಂ.ವಿ.ರೂಪ ಅಭಿಮಾನದಿಂದ ಹೇಳಿದರು …

ಅವರು ಇಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ರಸ್ತೆ ಬದಿಯ ಹಣ್ಣು ಮತ್ತು ಹೂವಿನ ವ್ಯಾಪಾರಿಗಳು ಆಯೋಜಿಸಿದ್ದ 75ನೇ ವರ್ಷದ ಭಾರತ ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು..

ರಸ್ತೆ ಬದಿಯ ವ್ಯಾಪಾರಿಗಳೆಲ್ಲರೂ ಇಂದು ಒಗ್ಗೂಡಿಕೊಂಡು ಭಾರತ ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ರಾಷ್ಟ್ರಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂದಿನ ಒತ್ತಡದ ಜೀವನದಲ್ಲಿ ನಮ್ಮ ಹಿರಿಯರ ತ್ಯಾಗ ಬಲಿದಾನದ ಮೂಲಕ ಗಳಿಸಿದ ಸ್ವಾತಂತ್ರ‍್ಯವನ್ನು ರಾಷ್ಟ್ರದ ಪ್ರಗತಿಗೆ, ಕಾಯಕದ ಉನ್ನತಿಗೆ ಬಳಸಬೇಕು ಎಂದು ತಹಶೀಲ್ದಾರ್ ರೂಪ ಕರೆ ನೀಡಿದರು..

ಕುವೆಂಪು ಕನ್ನಡ ಗೆಳೆಯರ ಬಳಗ ಸೇವಾ ಟ್ರಸ್ಟ್ ಅಧ್ಯಕ್ಷ ಕೆಬಿಸಿ ಮಂಜುನಾಥ್ ಮಾತನಾಡಿ ರಸ್ತೆ ಬದಿ ವ್ಯಾಪಾರಿಗಳ ನಿಸ್ವಾರ್ಥ ಸೇವೆ, ರಾಷ್ಟ್ರಪ್ರೇಮವು ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ. ಕಾಯಕ ಜೀವಿಗಳಾಗಿ ಶ್ರಮದ ದುಡಿಮೆಯ ಮೂಲಕ ಜೀವನ ನಡೆಸುತ್ತಿರುವ ರಸ್ತೆ ಬದಿ ವ್ಯಾಪಾರಿಗಳು ಅದ್ದೂರಿಯಾಗಿ ಸ್ವಾತಂತ್ರ‍್ಯದ ಅಮೃತಮಹೋತ್ಸವ ಆಚರಿಸುತ್ತಿದ್ದಾರೆ. ಯುವಜನರು ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಮಂಜು ಕರೆ ನೀಡಿದರು..

ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್, ತಾಲ್ಲೂಕು ವಿತರಕರ ಸಂಘದ ಉಪಾಧ್ಯಕ್ಷ ಹರಿಹರಸ್ವಾಮಿ, ಆಗ್ರೋ ಕೇಂದ್ರದ ವ್ಯವಸ್ಥಾಪಕ ಪ್ರಕಾಶ್, ರಸ್ತೆ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ಸೈಯ್ಯದ್ ರೋಷನ್, ಬಾವಾಜಿಚಂದ್ರು, ಚಿನ್ನವೆಂಕಟಣ್ಣ, ಆನಂದ್, ಚಂದ್ರಶೇಖರ್, ಅಫ್ಸರ್, ಸುಹೈಲ್, ಜಬ್ಬಾರ್, ವಾಸೀಂ, ಶಶಿಕುಮಾರ್, ಹೂವಿನ ಮಂಜಣ್ಣ, ರತ್ನಮ್ಮ, ದ್ರಾಕ್ಷಾಯಿಣಿ, ಭರತ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣಕುಮಾರ್, ಸೈಯ್ಯದ್ ಖಲೀಲ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.. ಭಾರತ ಸ್ವಾತಂತ್ರ‍್ಯದ ಅಮೃತಮಹೋತ್ಸವ ಅಂಗವಾಗಿ ಒಂದು ಸಾವಿರಕ್ಕೂ ಹೆಚ್ಚಿನ ಜನರಿಗೆ ಉಚಿತ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು..

ವರದಿ. ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ .

error: