March 29, 2024

Bhavana Tv

Its Your Channel

75ನೇ ವರ್ಷದ ಸ್ವಾತಂತ್ರೋತ್ಸವ ಅಮೃತಮಹೋತ್ಸವದ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎಂ.ವಿ.ರೂಪ

ಕೃಷ್ಣರಾಜಪೇಟೆ :-ಭಾರತ ದೇಶವು ಬ್ರಿಟೀಷರ ವಿರುದ್ಧ ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ನಡೆಸಿದ ಅಹಿಂಸಾ ಹೋರಾಟವು ವಿಶ್ವಕ್ಕೇ ಮಾದರಿಯಾಗಿದೆ. ವಿವಿಧತೆಯಲ್ಲಿ ಏಕತೆಯ ಮಂತ್ರವನ್ನು ಸಾರುತ್ತಾ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಭಾರತವು ವಿಶ್ವಗುರುವಿನ ಸ್ಥಾನದತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಹಶೀಲ್ದಾರ್ ಎಂ.ವಿ.ರೂಪ ಹೇಳಿದರು ..

ಅವರು ಇಂದು ಕೃಷ್ಣರಾಜಪೇಟೆ ತಾಲ್ಲೂಕು ಆಡಳಿತವು ಖಾಸಿಂಖಾನ್ ಸಮುದಾಯ ಭವನದ ಪಕ್ಕದ ಪುರಸಭೆಯ ವಿಶಾಲವಾದ ಮೈದಾನದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ‍್ಯದ 75ನೇ ವರ್ಷದ ಅಮೃತಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಎನ್.ಸಿ.ಸಿ, ಸ್ಕೌಟ್ಸ್ ಗೈಡ್ ಸೇರಿದಂತೆ ವಿವಿಧ ಶಾಲಾ ಮಕ್ಕಳ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು…

ಮಹಾತ್ಮಗಾಂಧೀಜಿ, ಲಾಲಾ ಲಜಪತರಾಯ್, ಮೌಲಾನಾ ಅಬುಲ್ ಕಲಂಆಜಾದ್, ಝಾನ್ಸಿಲಕ್ಷ್ಮಿಭಾಯಿ, ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣ, ಸರದಾರ್ ವಲ್ಲಭಾಬಾಯಿ ಪಟೇಲ್, ಸುಭಾಷ್ ಚಂದ್ರಬೋಸ್ ಸೇರಿದಂತೆ ಲಕ್ಷಾಂತರ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ಬ್ರಿಟೀಷರಿಂದ ಹಿರಿಯರು ತಂದುಕೊಟ್ಟಿರುವ ಸ್ವಾತಂತ್ರ‍್ಯವನ್ನು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ನಮಗೆ ದೊರಕಿರುವ ಐತಿಹಾಸಿಕ ಸ್ವಾತಂತ್ರ‍್ಯವನ್ನು ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳದೇ ದೇಶದ ಸಮಗ್ರವಾದ ಅಭಿವೃದ್ಧಿ ಹಾಗೂ ಮುನ್ನಡೆಗೆ ಬಳಸಿಕೊಂಡು ಸಮೃದ್ಧ ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ರೂಪ ಸ್ವಾತಂತ್ರ‍್ಯೋತ್ಸವದ ಅಮೃತಮಹೋತ್ಸವವನ್ನು ದೇಶಾದ್ಯಂತ ಹಬ್ಬದಂತೆ ಸಡಗರ ಸಂಭ್ರಮದಿAದ ಆಚರಿಸಲಾಗುತ್ತಿದೆ. ಯುವಜನರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡು ದೇಶಭಕ್ತರಾಗಿ ಹೊರಹೊಮ್ಮಬೇಕು ಎಂದು ಮನವಿ ಮಾಡಿದರು…

ಕೃಷ್ಣರಾಜಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುAಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಉಪಾಧ್ಯಕ್ಷೆ ಗಾಯತ್ರಿ, ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕಿಜರ್ ಅಹಮದ್, ಎಇಇ ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಲಕ್ಷ್ಮೀಕಾಂತ್, ಪೋಲಿಸ್ ಇನ್ಸ್ ಪೆಕ್ಟರ್ ಗಳಾದ ದೀಪಕ್, ನಿರಂಜನ, ಬಿಇಓ ಸೀತಾರಾಮ್, ಮುಖ್ಯಾಧಿಕಾರಿ ಕುಮಾರ್, ತಾಲ್ಲೂಕು ಪಂಚಾಯತಿ ಇಓ ಸತೀಶ್, ಸಿಡಿಪಿಓ ಅರುಣಕುಮಾರ್, ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವರಾಜ್, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಮಹೇಶ್, ಬಿಸಿಎಂ ಅಧಿಕಾರಿ ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ತಾಲ್ಲೂಕು ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ, ಮಂಡ್ಯ ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ದೇಶಭಕ್ತಿ ಕುರಿತು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ರಂಜಿಸಿದರೆ ಡೊಳ್ಳುಕುಣಿತ, ಪೂಜಾಕುಣಿತವು ಸ್ವಾತಂತ್ರ‍್ಯ ಮೆರವಣಿಗೆಗೆ ರಂಗು ತಂದಿತು. ಸಚಿವ ನಾರಾಯಣಗೌಡರ ಅನುಪಸ್ಥಿತಿಯಲ್ಲಿ ನಡೆದ ಭಾರತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ
ಕೃಷ್ಣರಾಜಪೇಟೆ , ಮಂಡ್ಯ

error: