April 17, 2024

Bhavana Tv

Its Your Channel

ಕೆ.ಆರ್.ಪೇಟೆ ಪುರಸಭಾ ಕಾರ್ಯಾಲಯದಲ್ಲಿ ಗಾಂಧಿಜಯoತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಆಚರಣೆ

ಕೆ.ಆರ್.ಪೇಟೆ :- ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜೀವನದ ಆದರ್ಶಗಳು ಜಾತಿ, ಮತ ಪಂಥಗಳಿAದ ಮುಕ್ತವಾದ ಸಮಾನತೆಯಿಂದ ಕೂಡಿರುವ ಆದರ್ಶ ಸಮಾಜವನ್ನು ಕಟ್ಟಲು ದಾರಿದೀಪವಾಗಿವೆ ಎಂದು ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಹೇಳಿದರು .

ಅವರು ಇಂದು ಪುರಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಗಾಂಧಿಜಯAತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿ ಸಮಾರಂಭದಲ್ಲಿ ಇಬ್ಬರೂ ಮಹನೀಯರ ಭಾಗಚಿತ್ರಗಳಿಗೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು..

ನ್ಯಾಯ, ಅಹಿಂಸೆ ಹಾಗೂ ಸತ್ಯಮಾರ್ಗದ ಸಂದೇಶಗಳ ಮೂಲಕ ಶಾಂತಿಯುತ ಹೋರಾಟ ನಡೆಸಿ ಬ್ರಿಟೀಷರ ಕಪಿಮುಷ್ಠಿಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಕೊಡಿಸಿ ಮಹಾತ್ಮರಾಗಿ ಜನಮಾನಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿದ್ದಾರೆ. ಬ್ರಿಟೀಷರ ವಿರುದ್ಧ ನಡೆಸಿದ ದಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ‍್ಯ ಸಂಗ್ರಾಮದ ಹೋರಾಟದ ಪುಟಗಳಲ್ಲಿ ಚರಿತ್ರಾರ್ಹ ಸ್ಥಾನವನ್ನು ಪಡೆದಿದೆ. ವಿಶ್ವಕ್ಕೆ ಅಹಿಂಸಾ ಹೋರಾಟವನ್ನು ಪರಿಚಯಿಸಿದ ವಿಶ್ವಮಾನ್ಯ ನಾಯಕರಾದ ಗಾಂಧೀಜಿ ಅವರ ಆಶಯದಂತೆ ಯುವಜನರು ಸ್ವದೇಶಿ ಉತ್ಪನ್ನಗಳನ್ನು ಬಳಸಿ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಬೇಕು. ದುಶ್ಚಟಗಳಿಂದ ಮುಕ್ತರಾಗಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ಯುವಜನರು ಹಾಗೂ ವಿದ್ಯಾರ್ಥಿಗಳು ಸರಳ ಸಜ್ಜನ ರಾಜಕಾರಣಿ ಹಾಗೂ ದಕ್ಷ ಆಡಳಿತಗಾರರಾದ ಲಾಲ್ ಬಹದ್ದೂರ್ ಶಾಸ್ತ್ರಿ
ಜಿ ಅವರಂತೆ ದೇಶಪ್ರೇಮವನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಮುನ್ನಡೆದು ಗುರಿಸಾಧನೆ ಮಾಡಬೇಕು ಎಂದು ಮಹಾದೇವಿ ಕರೆ ನೀಡಿದರು..

ಪುರಸಭೆ ಮುಖ್ಯಾಧಿಕಾರಿ ಕುಮಾರ್, ಸದಸ್ಯ ಕೆ.ಆರ್.ನೀಲಕಂಠ ಮಹಾತ್ಮಗಾಂಧಿ ಹಾಗೂ ಮಾಜಿಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಸಾಧನೆಯನ್ನು ಕುರಿತು ಮಾತನಾಡಿದರು..

ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಸಂಯುಕ್ತ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು. ಪುರಸಭೆ ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಆರೋಗ್ಯ ಪರಿವೀಕ್ಷಕ ಅಶೋಕ್, ಸದಸ್ಯರಾದ ಹೆಚ್.ಡಿ.ಅಶೋಕ್, ಪಂಕಜಾ, ತಿಬೆಟ್ ಮಹೇಶ್, ಗಿರೀಶ್, ಶುಭ ಗಿರೀಶ್, ಶೋಭಾ ದಿನೇಶ್, ಕಂದಾಯಾಧಿಕಾರಿ ರವಿಕುಮಾರ್, ಪ್ರಥಮದರ್ಜೆ ಸಹಾಯಕಿ ಮಂಜುಳಾ, ರತ್ನಾ, ಶಾರದಾ, ಹೆಚ್.ಪಿ.ನಾಗರಾಜು, ನರಸಿಂಹಶೆಟ್ಟಿ, ಪರಿಪರಪ್ರೇಮಿ ಲವಕುಮಾರ್ ಸೇರಿದಂತೆ ಪುರಸಭಾ ನೌಕರರು ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: