April 24, 2024

Bhavana Tv

Its Your Channel

ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ವನಿತಾ ವಿಜಯನರಸಿಂಹ ಭಟ್ಟರ್ ಷಟ್ಠ್ಯಬ್ಧಿಪೂರ್ತಿ ಶಾಂತಿ ಮಹೋತ್ಸವ

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಮತಿ/ಶ್ರೀ ವನಿತಾ ವಿಜಯನರಸಿಂಹ ಭಟ್ಟರ್ ಅವರ ಷಟ್ಠ್ಯಬ್ಧಿಪೂರ್ತಿ ಶಾಂತಿ ಮಹೋತ್ಸವ ಸಮಾರಂಭವು ನೂರಾರು ಆಗಮಿಕರು, ಬಂಧುಗಳು, ಗ್ರಾಮದ ಮುಖಂಡರು ಹಾಗೂ ವೇದಪಂಡಿತರ ಸಮಕ್ಷಮದಲ್ಲಿ ವಿಜೃಂಭಣೆಯಿAದ ನಡೆಯಿತು..

ತಂದೆತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸಿ ಪೂಜಿಸುವ, ಹಿಂದೂ ಸಂಸ್ಕೃತಿಯನ್ನು ಯುವಜನರಿಗೆ ಪರಿಚಯ ಮಾಡಿಕೊಡುವ ಈ ಅಪರೂಪದ ಕಾರ್ಯಕ್ರಮವು ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಭೂವರಹನಾಥಸ್ವಾಮಿ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಹೇಳಿದರು..

ನಮ್ಮ ಹಿರಿಯರು ಹಾಗೂ ತಂದೆತಾಯಿಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಕುಟುಂಬದ ಹಿರಿಯರು, ಬಂಧು ಬಗಿನಿಯರು ಹಾಗೂ ಅಣ್ಣತಮ್ಮಂದಿರು ಒಂದಾಗಿ ಸೇರಿಕೊಂಡು ಸಡಗರ ಸಂಭ್ರಮದಿAದ ನಡೆಸುವ ಷಟ್ಠ್ಯಬ್ಧಿಪೂರ್ತಿ ಸಮಾರಂಭವು ನಾಗರಿಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುವ ವಿಶೇಷವಾದ ಕಾರ್ಯಕ್ರಮವಾಗಿದೆ. ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆತಾಯಿಗಳನ್ನು ಗೌರವಿಸದೇ ಹತ್ತು ಊರುಗಳನ್ನು ಸುತ್ತಿ ನೂರು ದೇವರುಗಳನ್ನು ಪೂಜಿಸಿದರೆ ಯಾವುದೇ ಫಲವಿಲ್ಲ. ಆದ್ದರಿಂದ ನೈಜವಾಗಿ ದೇವರ ಪ್ರತಿರೂಪದಂತಿರುವ ತಂದೆ-ತಾಯಿಗಳ ಮಹತ್ವವನ್ನು ಮಕ್ಕಳಿಗೆ ಹಾಗೂ ಯುವಜನರಿಗೆ ತಿಳಿಸಿಕೊಡುವ ಈ ವಿಶೇಷ ಕಾರ್ಯಕ್ರಮವು ಎಲ್ಲರಿಗೂ ತಿಳಿಯಬೇಕು ಎನ್ನುವುದೇ ಸಮಾಜದ ಆಶಯವಾಗಿದೆ ಎಂದು ಶ್ರೀನಿವಾಸರಾಘವನ್ ಹೇಳಿದರು..

ಶ್ರೀಮತಿ ವನಿತ ಶ್ರೀ ವಿಜಯನಾರಸಿಂಹ ಭಟ್ಟರ್ ಅವರ ಷಟ್ಠ್ಯಬ್ಧಿಪೂರ್ತಿ ಸಮಾರಂಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಸಮಾಜಸೇವಕ ವಿಜಯ್ ರಾಮೇಗೌಡ, ಗ್ರಾಮ ಪಂಚಾಯತಿ ಸದಸ್ಯ ಶ್ಯಾಂಪ್ರಸಾದ್, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು, ಭೂವರಹನಾಥಸ್ವಾಮಿ ದೇವಾಲಯದ ಟ್ರಸ್ಟಿಗಳಾದ ನಾಗೇಶರಾವ್, ಮುಖಂಡರಾದ ಹೆಳವೇಗೌಡ, ಬೋಳೇಗೌಡ, ಸಚಿವರಾದ ಡಾ.ನಾರಾಯಣಗೌಡರ ಆಪ್ತಸಹಾಯಕ ದಯಾನಂದ, ಶ್ರೀಮತಿ ಸಂಧ್ಯಾ ಶ್ರೀ.ತ್ರಿವಿಕ್ರಮರಾಮಚಂದ್ರ ಭಟ್ಟರ್, ಶ್ರೀಮತಿ.ವಿಂಧ್ಯ ಶ್ರೀ. ಮಧುಸೂದನ ಜಯಸಿಂಹಭಟ್ಟರ್, ಶ್ರೀಮತಿ ಮೌನಿಕ ಶ್ರೀ ಹೃಷಿಕೇಶಮನೋಹರ ಭಟ್ಟರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ.ಕೃಷ್ಣರಾಜಪೇಟೆ, ಮಂಡ್ಯ

error: