April 20, 2024

Bhavana Tv

Its Your Channel

ಶ್ರೀ ಗುರು ಹಜರತ್ ಖ್ವಾಜಾ ಷಾ ಅಹ್ಮದ್ ಉಲ್ಲಾ ಷಾ ದರ್ಗಾದಲ್ಲಿ ನಡೆದ ಸರ್ವಧರ್ಮ ಸಮನ್ವಯತೆ ಜಾಗೃತಿ ಸಭೆ

ಕೃಷ್ಣರಾಜಪೇಟೆ :- ಎಲ್ಲಾ ಧರ್ಮಗಳ ಸಾರ ಒಂದೇ ಭಗವಂತನ ಒಲುಮೆಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ.ಪರಿಸರ ಸಂರಕ್ಷಣೆ ನಮ್ಮ ಆಧ್ಯ ಕರ್ತವ್ಯವಾಗಬೇಕು ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಮತ

ಯುವಜನರು ಅನ್ಯಾಯದ ವಿರುದ್ಧ ಹೋರಾಟ ನಡೆಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು. ಗಿಡಮರಗಳನ್ನು ನೆಟ್ಟಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ರಾಜ್ಯರೈತ ಸಂಘದ ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದರು..

ಅವರು ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಮಂದಗೆರೆ ಸಮೀಪದ ಹೊನ್ನೇನಹಳ್ಳಿ ಸಮೀಪದಲ್ಲಿರುವ ಶ್ರೀ ಗುರು ಹಜರತ್ ಖ್ವಾಜಾ ಷಾ ಅಹ್ಮದ್ ಉಲ್ಲಾ ಷಾ ದರ್ಗಾದಲ್ಲಿ ಹಜರತ್ ಖ್ವಾಜಾಷ ಮೆಹಬೂಬ್ ಅಲ್ಲಾಷಾ ಬೆಸ್ತಿಮಲ್ ಖಾದರಿ ಅಲ್ ಹೊಸೇನಿ ಅವರ ನೇತೃತ್ವದಲ್ಲಿ ನಡೆದ ಪರಮಪೂಜ್ಯ ಶ್ರೀ ಗೌಸ್ ಆಜಾಮ್ ದೀಪೋತ್ಸವ ಪ್ರಯುಕ್ತ ನಡೆದ ಸರ್ವಧರ್ಮ ಸಮನ್ವಯತೆ ಜಾಗೃತಿ ಸಭೆಯನ್ನು ದೀಪ ಬೆಳಗಿಸಿ, ಕಲ್ಪವೃಕ್ಷ ತೆಂಗಿನ ಸಸಿಯನ್ನು ನೆಟ್ಟು ನೀರೆರೆದು ನೆರೆದಿದ್ದ ಭಕ್ತರು ಹಾಗೂ ಹಸಿರುಸೇನೆಯ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು..

ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರು ಸೇರಿದಂತೆ ಮಾನವರಾದ ನಮ್ಮೆಲ್ಲರ ದೇಹದಲ್ಲಿ ಹರಿಯುವ ಕೆಂಪು ರಕ್ತವು ಒಂದೇ ಆಗಿದೆ.ಬೈಬಲ್, ಖುರಾನ್ ಭಗವದ್ಗೀತೆ, ರಾಮಾಯಣ ಮಹಾಭಾರತ ಸೇರಿದಂತೆ ಎಲ್ಲಾ ಧರ್ಮಗಳ ಗ್ರಂಥಗಳ ಸಾರವು ಒಂದೇ ಆಗಿದ್ದು ದಯಾಮಯನಾದ ಭಗವಂತನ ಕರುಣೆ ಹಾಗೂ ಸಾಕ್ಷಾತ್ಕಾರವನ್ನು ಹೊಂದುವುದಾಗಿದೆ. ಮುಸ್ಲಿಂ ಬಂಧುಗಳು ಅಲ್ಲಾಹ್ ಎಂದು ಭಗವಂತನ ಸ್ಮರಣೆ ಮಾಡಿದರೆ ಕ್ರೈಸ್ತರು ಕರ್ತನಾದ ಏಸುವಿನ ಸ್ಮರಣೆ ಮಾಡುತ್ತಾರೆ, ಹಿಂದೂಗಳಾದ ನಾವುಗಳು ಶ್ರೀರಾಮ, ತಾಯಿ ಚೌಡೇಶ್ವರಿಯ ಸ್ಮರಣೆಯ ಮೂಲಕ ಭಗವಂತನ ಆರಾಧನೆ ಮಾಡುತ್ತೇವೆ. ಆದ್ದರಿಂದ ನಾವು ಒಂದಾಗಿ ಕೂಡಿ ಬಾಳುವ ಸಂದೇಶವನ್ನು ನಾಡಿಗೆ ನೀಡುವ ಸರ್ವಧರ್ಮ ಸಮನ್ವತೆಯ ಸಂದೇಶ ಸಾರುವ ದೀಪೋತ್ಸವ ಸಮಾರಂಭದ ಮೂಲಕ ನಾಡಿಗೆ ಬೆಳಕು ನೀಡುತ್ತಿದೆ. ಈ ಪುಣ್ಯ ಸಮಾರಂಭದಲ್ಲಿ ಭಾಗವಹಿಸಿರುವುದು ಮನಸ್ಸಿಗೆ ಸಂತಸ ತಂದಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಭಿಮಾನದಿಂದ ಹೇಳಿದರು…

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರಿನ ಬಸವ ತತ್ವಪೀಠದ ಶ್ರೀ ಶ್ರೀ ಜಯಬಸವಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿ ಮಾತನಾಡಿ ಸರ್ವಧರ್ಮ ಸಮನ್ವಯತೆಯ ಬೆಳಕು ಚೆಲ್ಲುವ ಅಪರೂಪದ ದೀಪೋತ್ಸವ ಸಮಾರಂಭವು ಕೆ.ಆರ್.ಪೇಟೆ ತಾಲ್ಲೂಕಿನ ಮಂದಗೆರೆ ಸಮೀಪದ ಒಂದು ಚಿಕ್ಕಹಳ್ಳಿಯ ತೋಟದಲ್ಲಿ ಪ್ರಕೃತಿಯ ಪ್ರಶಾಂತ ವಾತಾವರಣದಲ್ಲಿ ನಡೆಯುತ್ತಿದೆ. ಮಾನವರಾದ ನಾವು ನಮ್ಮನ್ನು ಸಾಕಿಸಲಹುತ್ತಿರುವ ಪ್ರಕೃತಿಯ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸಿ ದೌರ್ಜನ್ಯ ಮಾಡಿ ಪರಿಸರ ನಾಶ ಮಾಡುತ್ತಿದ್ದೇವೆ. ಮಾನವರಾದ ನಮಗೆ ಪ್ರಕೃತಿ ಹಾಗೂ ಪರಿಸರದ ನಡುವೆ ಅವಿನಾಭಾವ ಸಂಬAಧವಿರುವುದರಿAದ ಪರಿಸರ ಸಂರಕ್ಷಣೆಯು ನಮ್ಮ ಆಧ್ಯ ಕರ್ತವ್ಯವಾಗಬೇಕು. ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡಬೇಕು.. ಜಾತಿ, ಮತ, ಪಂಥಗಳಿAದ ಮುಕ್ತವಾಗಿರುವ ಸಮಾನತೆಯಿಂದ ಕೂಡಿದ ಸಮಸಮಾಜದ ನಿರ್ಮಾಣಕ್ಕೆ ನಾಗರಿಕ ಸಮಾಜದಲ್ಲಿ ವಾಸಮಾಡುವ ಪ್ರತಿಯೊಬ್ಬರೂ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು..

ಹಾಸನದ ಎಂ.ಎಸ್ ಚರ್ಚಿನ ಧರ್ಮಗುರುಗಳಾದ ರೆವರೆಂಡ್ ಫಾದರ್ ಶ್ರೀನಿವಾಸಮೂರ್ತಿ, ರಾಜ್ಯ ರೈತಸಂಘದ ರಾಜ್ಯ ಕಾರ್ಯದರ್ಶಿ ಭಕ್ತರವಳ್ಳಿ ಭೈರೇಗೌಡ, ಹಾಸನದ ರಿಪಬ್ಲಿಕ್ ಸೇನೆಯ ಜಿಲ್ಲಾಧ್ಯಕ್ಷ ನಿರ್ವಾಣಯ್ಯ, ರಾಜ್ಯ ರೈತಸಂಘದ ಮಹಿಳಾ ಸಂಚಾಲಕಿ ನಿಂಬೆಹಳ್ಳಿ ಕಮಲಮ್ಮ, ಬೆಂಗಳೂರು ಉತ್ತರ ಗ್ರಾಮಾಂತರ ಅಧ್ಯಕ್ಷ ಪ್ರಭಣ್ಣ, ಹಾಸನ ಜಿಲ್ಲಾ ರೈತಸಂಘದ ಜಿಲ್ಲಾಧ್ಯಕ್ಷ ಮೆಹಬೂಬ್ ಪಾಷ ಬಾಬಣ್ಣ, ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ, ಬನ್ನೇರುಘಟ್ಟ ನಾಗಣ್ಣ, ಶಿವರಾಮೇಗೌಡ, ಆನೆಕೆರೆ ರವಿ, ಹಿರಿಯ ಪತ್ರಕರ್ತ ಕೆ.ಆರ್.ನೀಲಕಂಠ ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಿದರು..

ಹಜರತ್ ಖ್ವಾಜಾ ಷಾ ಮೆಹಬೂಬ್ ಅಲ್ಲಾಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದೀಪೋತ್ಸವ ಸಮಾರಂಭ ನಡೆಸಲಾಗಿರಲಿಲ್ಲ, ಭಕ್ತರ ಒತ್ತಾಸೆಯಿಂದ ಈಗ ಮತ್ತೆ ಸರ್ವಧರ್ಮ ಸಮನ್ವಯತೆಯ ಸಂದೇಶ ಸಾರುವ ದೀಪೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಕುಳಿತು ಕಾರ್ಯಕ್ರಮ ವೀಕ್ಷಿಸಿದ ಭಕ್ತ ವೃಂದ ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಸಮರ್ಪಿಸುವುದಾಗಿ ತಿಳಿಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: