April 19, 2024

Bhavana Tv

Its Your Channel

ಆರ್.ಟಿ.ಓ ಅಧಿಕಾರಿ ಆಲಂಬಾಡಿಕಾವಲು ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಬೀರವಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ

ಕೃಷ್ಣರಾಜಪೇಟೆ :– ಕೆ.ಆರ್.ಪೇಟೆ ತಾಲ್ಲೂಕಿನ ಬೀರವಳ್ಳಿ ಗ್ರಾಮದಲ್ಲಿ ಆರ್.ಟಿ.ಓ ಅಧಿಕಾರಿ ಆಲಂಬಾಡಿಕಾವಲು ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.ಕನ್ನಡ ಧ್ವಜಾರೋಹಣ ಮಾಡಲು ಗ್ರಾಮಕ್ಕೆ ಆಗಮಿಸಿದ ಸಮಾಜಸೇವಕ ಮಲ್ಲಿಕಾರ್ಜುನ ಅವರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಜನರು..

ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಕರೆ ನೀಡಿದ ಮಲ್ಲಿಕಾರ್ಜುನ ಕನ್ನಡದ ನೆಲ, ಜಲ ಹಾಗೂ ಭಾಷೆಯ ವಿಚಾರದಲ್ಲಿ ಧಕ್ಕೆ ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವುಗಳು ಯಾವುದೇ ಹೋರಾಟಕ್ಕೆ ಸದಾ ಸಿದ್ಧರಿರಬೇಕು ಎಂದು ಮನವಿ ಮಾಡಿದ ಅವರು ಕನ್ನಡದ ನೆಲದಲ್ಲಿ ವಾಸಮಾಡುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು.. ಕನ್ನಡಿಗರು ನಾವೆನ್ನಲು ಹೆಮ್ಮೆಪಡಬೇಕು. ಆಂಗ್ಲಭಾಷೆಯನ್ನು ನಮ್ಮಮಕ್ಕಳಿಗೆ ಕೇವಲ ಒಂದು ಭಾಷೆಯನ್ನಾಗಿ ಮಾತ್ರ ಕಲಿಸಿ ನಮ್ಮ ಮಾತೃಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಲು ಶಾಲೆಗೆ ಕಳಿಸಿ ನಮ್ಮ ತಾಯಿ ಭಾಷೆಯಾಗಿರುವ ಕನ್ನಡವನ್ನು ಪೂಜಿಸಿ ಗೌರವಿಸಿ ಆದರಿಸಬೇಕು ಎಂದು ಮಲ್ಲಿಕಾರ್ಜುನ ಕರೆ ನೀಡಿದರು..

ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿ ಆರಂಭಿಸಿದ ತಮ್ಮ ಸಮಾಜಸೇವಾ ಕಛೇರಿಯಿಂದ ನೂರಾರು ಯುವಜನರ ನೇತೃತ್ವದಲ್ಲಿ ಬೈಕ್ ಮೆರವಣಿಗೆ ಮೂಲಕ ಚಂದಗೋನಹಳ್ಳಿಯಮ್ಮ ಕ್ಷೇತ್ರಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಅವರ ಅಭಿಮಾನಿಗಳು ಆಯೋಜಿಸಿದ್ದ ಪರುವು ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ಭವಿಷ್ಯದ ನಾಯಕರಾದ ಮಲ್ಲಿಕಾರ್ಜುನ ಅವರನ್ನು ಯುವಜನರು, ಸ್ತ್ರೀ ಶಕ್ತಿಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮೈಸೂರು ಪೇಟ ಹಾಕಿ ಶಾಲುಹೊದಿಸಿ ಭಾರೀ ಗಾತ್ರದ ಹೂಮಾಲೆ ತೊಡಿಸಿ ಸನ್ಮಾನಿಸಿ ಗೌರವಿಸಿದರು..

ವೇದಿಕೆ ಕಾರ್ಯಕ್ರಮದ ನಂತರ ನಡೆದ ಪರುವು ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಚಂದಗೋನಹಳ್ಳಿಯಮ್ಮ ದೇವಿಯ ಪ್ರಸಾದ ರೂಪದ ಊಟ ಮಾಡಿ ಆರ್.ಟಿ.ಓ ಅಧಿಕಾರಿ ಆಲಂಬಾಡಿಕಾವಲು ಮಲ್ಲಿಕಾರ್ಜುನ ಅವರಿಗೆ ಶುಭ ಹಾರೈಸಿದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: