April 20, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್ ವಿರುದ್ಧ ಸಿಡಿದೆದ್ದ ಸಚಿವ ನಾರಾಯಣಗೌಡ ..

ಕೆ.ಆರ್.ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಸಚಿವರ ಕೊಡುಗೆ ಶೂನ್ಯ, ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಜೆಡಿಎಸ್ ಕೊಡುಗೆ ಎಂದು ಸುಳ್ಳು ಹೇಳಿ ಅಪಪ್ರಚಾರ ನಡೆಸುತ್ತಿರುವ ಜಾನಕೀರಾಮ್ ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ ಸಚಿವ ನಾರಾಯಣಗೌಡ …

ಜಾನಕೀರಾಮಣ್ಣ ನೀನು ನನ್ನ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪ ಮಾಡಬೇಡ, ನಾನು ನೀನು ಅಣ್ಣ ತಮ್ಮನಂತಿದ್ದೊ, ಒಂದೇ ತಟ್ಟೆಯಲ್ಲಿ ಊಟ ಮಾಡ್ತಿದ್ದೊ ಅವೆಲ್ಲವನ್ನೂ ಮರೆತು ಕ್ಷುಲ್ಲಕ ರಾಜಕಾರಣಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡ್ತೀಯಣ್ಣಾ, ನಿನಗೆ ಇದು ಶೋಭೆ ತರೋದಿಲ್ಲ, ನಾನು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ ಮೇಲೆ ಏನೇನು ಅಭಿವೃದ್ಧಿ ಮಾಡಿದ್ದೇನೆ ಅನ್ನೋದನ್ನು ಬಹಿರಂಗ ವೇದಿಕೆಯಲ್ಲಿ ತಿಳಿಸ್ತೀನಿ, ಬಹಿರಂಗ ಚರ್ಚೆಗೆ ಬನ್ನಿ, ನಾನು ನಿಮ್ಮನ್ನು ಒಳ್ಳೆಯವರು ಎಂದು ತಿಳಿದಿದ್ದೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರೆ ಆ ದೇವರು ನಿನ್ನನ್ನು ಕ್ಷಮಿಸಲ್ಲಾ, ಎಲ್ಲವನ್ನೂ ನಾನು ನಂಬಿರುವ ತಾಲ್ಲೂಕಿನ ಜನತೆ ನೋಡಿಕೊಳ್ತಾರೆ..2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ನಾನು ಯಾವ ತಪ್ಪನ್ನೂ ಮಾಡಿಲ್ಲ, ಜೆಡಿಎಸ್ ನಲ್ಲಿ ಇದ್ದು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಖಾತ್ರಿಯಾದ ಮೇಲೆಯೇ ನಾನು ಬಿಜೆಪಿ ಸೇರಿದ್ದು..ತಾಲ್ಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಬಿಜೆಪಿ ಸೇರಿ, ಜನರ ಆಶೀರ್ವಾದ ಪಡೆದು ಸಚಿವನಾಗಿ ಕೆಲಸ ಮಾಡ್ತಿದ್ದೇನೆ ಜಾನಕೀರಾಮಣ್ಣ ಎಂದು ನಾರಾಯಣಗೌಡ ಗುಡುಗಿದರು..

ಬರಪೀಡಿತ ಸಂತೇಬಾಚಹಳ್ಳಿ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದ್ದು ಯಾರು, 200 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು ಯಾರು, ಪುಣ್ಯಾತ್ಮ ಯಡಿಯೂರಪ್ಪ ಒಂದೇ ಕಂತಿನಲ್ಲಿ 200 ಕೋಟಿ ಅನುದಾನ ಕೊಟ್ಟರು..ಸಂತೆಬಾಚಹಳ್ಳಿ ಏತ ನೀರಾವರಿ ಯೋಜನೆ ಜೆಡಿಎಸ್ ಕೊಡುಗೆ ಅಂತಾ ಹೇಳ್ತೀರಲ್ಲಾ ಸರಿಯಾ, ನಿಮಗೆ ಮನಸಾಕ್ಷಿ ಇದೆಯಾ, ರಾಜಕೀಯ ಮಾಡಲು ಇಷ್ಟೊಂದು ಸುಳ್ಳು ಹೇಳಬೇಕಾ ಎಂದು ತರಾಟೆಗೆ ತೆಗೆದುಕೊಂಡ ಸಚಿವ ನಾರಾಯಣಗೌಡ ತಂದೆತಾಯಿಯನ್ನು ಕಳೆದುಕೊಂಡಿರುವ ನಾನು ತಾಲ್ಲೂಕಿನ ಜನತೆಯಲ್ಲಿಯೇ ತಂದೆತಾಯಿಯನ್ನು ಕಾಣುತ್ತಿದ್ದೇನೆ. ನಾನು ಹಣ ಆಸ್ತಿ ಮಾಡಲು ಕೆ.ಆರ್.ಪೇಟೆಗೆ ಬಂದಿಲ್ಲಾ, ನಾನು ಮುಂಬೈಗೆ ಹೆದರಿ ಓಡಿಹೋಗಲ್ಲಾ ಕೆ.ಆರ್.ಪೇಟೆಯಿಂದ ಯಾರೇ ಸ್ಪರ್ಧೆ ಮಾಡಲಿ ನಾನು ಹೆದರಲ್ಲಾ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀನಿ, ಮತ್ತೊಮ್ಮೆ ಗೆದ್ದು ಇತಿಹಾಸ ನಿರ್ಮಾಣ ಮಾಡ್ತೀನಿ, ನನ್ನದೇನಿದ್ದರೂ ಸೀದಾ ಸಾದಾ ರಾಜಕಾರಣ, ಸುಳ್ಳು ಹೇಳೋದು, ಮೋಸ ಮಾಡೋದು ನನಗೆ ಬರಲ್ಲಾ, ಜೆಡಿಎಸ್ ಸಂಸ್ಕೃತಿ ನನಗೆ ಒಗ್ಗಲ್ಲಾ ಚುನಾವಣಾ ಫಲಿತಾಂಶ ತೀರ್ಮಾನ ಮಾಡುವವರು ಕ್ಷೇತ್ರದ ಪ್ರಬುದ್ಧ ಮತದಾರರು ಎಂಬ ಸತ್ಯದ ಅರಿವಿರಲಿ ಎಂದು ಎಚ್ಚರಿಸಿದರು ..

ನನ್ನ ದೇಹ ಮಣ್ಣಾಗೋದು ನನ್ನ ಜನ್ಮಭೂಮಿ ಕೈಗೋನಹಳ್ಳಿ ಗ್ರಾಮದಲ್ಲಿ …

ಕೆ.ಆರ್.ಪೇಟೆ ತಾಲ್ಲೂಕಿನ ಜನತೆ ನನ್ನ ಜೀವನದಲ್ಲಿಯೇ ಮರೆಯಲಾಗದ ಕಾಣಿಕೆ ನೀಡಿದ್ದಾರೆ, ಒಂದಲ್ಲಾ, ಎರಡಲ್ಲಾ ಸತತವಾಗಿ ಮೂರು ಬಾರಿಗೆ ಶಾಸಕನನ್ನಾಗಿ ಆಯ್ಕೆ ಮಾಡಿ ಸಚಿವ ಸ್ಥಾನವನ್ನು ಕೊಡಿಸಿ ನನ್ನ ಜೀವನದಲ್ಲಿಯೇ ಮರೆಯಲಾಗದ ಕಾಣಿಕೆ ನೀಡಿದ್ದಾರೆ. ಎಂಜಲು ಲೋಟ ತೊಳೆಯುವವನು, ಮುಂಬೈ ಹೈದಾ ಎಂದು ಟೀಕೆ ಟಿಪ್ಪಣಿ ಮಾಡಿದವರನ್ನು ಸತತವಾಗಿ ಸೋಲಿಸಿ ಮನೆಗೆ ಕಳಿಸಿದ್ದಾರೆ, ಇಷ್ಟಾದರೂ ನನ್ನ ವಿರುದ್ಧ ಏಕವಚನದಲ್ಲಿ ಮಾತಾಡುವುದನ್ನು ನಿಲ್ಲಿಸಿಲ್ಲ, ಅವರು ನನ್ನನ್ನು ಬಯ್ದು ಮನೆ ಸೇರಲಿ, ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ಅಭಿವೃದ್ಧಿ ಕೆಲಸಗಳನ್ನು ಮಾಡಿ ಒಬ್ಬ ಶಾಸಕನಾದವನು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ನಾರಾಯಣಗೌಡ ಗುಡುಗಿದರು…

ಕೆ.ಆರ್.ಪೇಟೆ ತಾಲ್ಲೂಕಿನ ಸಮಗ್ರವಾದ ಅಭಿವೃದ್ಧಿಗೆ 1800ಕೋಟಿ ರೂ ಅನುದಾನ ತಂದು ನೀರಾವರಿ, ಶಿಕ್ಷಣ, ಶುದ್ಧ ಕುಡಿಯುವ ನೀರು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದೇನೆ. ಭಾರೀ ಮಳೆಯಿಂದಾಗಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿರುವುದು ನಿಜ, ರಸ್ತೆಯನ್ನು ಸರಿಪಡಿಸಲು 16 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ತಾಲ್ಲೂಕಿನ ಆನೆಗೊಳ ಗ್ರಾಮದಿಂದ ಚೀಕನಹಳ್ಳಿವರೆಗೆ ಮೈಸೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಗುಂಡಿ ಮುಚ್ಚಿಸಿ ಡಾಂಬರೀಕರಣ ಮಾಡಿಸಿ ರಸ್ತೆಯನ್ನು ಅಭಿವೃದ್ಧಿ ಮಾಡಿಸಿ ವಿರೋಧಿಗಳ ಬಾಯಿ ಮುಚ್ಚಿಸುತ್ತೇನೆ..ನನ್ನ ವಿರುದ್ಧ ಟೀಕೆ ಮಾಡುವವರು ತಾಲ್ಲೂಕಿನಲ್ಲಿ ಒಂದು ಸುತ್ತು ಸುತ್ತಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ನೋಡಿಕೊಂಡು ಬಂದು ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದರು..

ಕೆ.ಆರ್.ಪೇಟೆ ತಾಲ್ಲೂಕಿನ ಸಾರಂಗಿ ಹಾಗೂ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ನಿವಾರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗ್ರಾಮಗಳಿಗೆ ಆಗಮಿಸಿದ ಸಚಿವ ನಾರಾಯಣಗೌಡ ಅವರನ್ನು ಮುತ್ತೈದೆಯರು ಆರತಿ ಎತ್ತಿ ತಿಲಕವನ್ನು ಹಣೆಗಿಟ್ಟು ಸ್ವಾಗತಿಸಿದರು.. ಭಾರತಿಪುರ ಹಾಗೂ ಸಾರಂಗಿ ಗ್ರಾಮದಲ್ಲಿ ಜನಜಾತ್ರೆಯೇ ನೆರೆದಿತ್ತು..

ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷರಾದ ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಹಾಫ್ ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಜಿ.ತಮ್ಮಣ್ಣ, ತಾ.ಪಂ ಮಾಜಿಸದಸ್ಯ ಬಿಲ್ಲೇನಹಳ್ಳಿ ಕುಮಾರ್, ಮುಖಂಡರಾದ ಡಿ.ಪಿ.ಪರಮೇಶ್, ದೊದ್ದನಕಟ್ಟೆ ಪಾಂಡು, ಸಾರಂಗಿ ನಂಜುAಡಪ್ಪ, ಬಸವೇಗೌಡ, ಮಾದಾಪುರ ಶೇಖರಣ್ಣಾ, ಸಾಸಲು ಗುರುಮೂರ್ತಿ, ಬೀರವಳ್ಳಿ ಕುಮಾರ್, ಕೈಗೋನಹಳ್ಳಿ ಕುಮಾರ್, ಭಾರತೀಪುರ ಪುಟ್ಟಣ್ಣ, ಬೊಮ್ಮೇನಹಳ್ಳಿ ಹರ್ಷ, ಮಂಜುನಾಥ್, ಗಣೇಶ್, ಸುನಿಲ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಸಚಿವರ ಆಪ್ತಸಹಾಯಕ ದಯಾನಂದ, ಪುರಸಭೆ ಮಾಜಿಸದಸ್ಯ ದಿನೇಶ್, ಶೆಟ್ಟಹಳ್ಳಿ ಕೃಷ್ಣೇಗೌಡ, ಸಂತೆಬಾಚಹಳ್ಳಿ ಸೋಮಣ್ಣ, ಮರೀಗೌಡ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: