March 29, 2024

Bhavana Tv

Its Your Channel

ಮೋಟಾರ್ ಬೋಟುಗಳ ಜಲಸಾಹಸ ಕ್ರೀಡೆಗಳಿಗೆ ಚಾಲನೆ ನೀಡಿದ ತಹಶೀಲ್ದಾರ್ ಎಂ.ವಿ.ರೂಪ

ಕೆ.ಆರ್.ಪೇಟೆ :- ಪ್ರವಾಸಿಗರು ಹಾಗೂ ಯುವಜನರನ್ನು ಆಕರ್ಷಿಸುತ್ತಿರುವ ಜಲಸಾಹಸ ಕ್ರೀಡೆಗಳು.. ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿಯ ಬೆಟ್ಟದ ತಪ್ಪಲಿನ ಹೇಮಾವತಿ ನದಿಯಲ್ಲಿ ಮೋಟಾರ್ ಬೋಟುಗಳ ಜಲಸಾಹಸ ಕ್ರೀಡೆಗಳಿಗೆ ಚಾಲನೆ ನೀಡಿದ ತಹಶೀಲ್ದಾರ್ ಎಂ.ವಿ.ರೂಪ …

ಫೆಬ್ರವರಿ 1 ರಂದು ರಾತ್ರಿ 7ಗಂಟೆಗೆ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನದಿಯಲ್ಲಿ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ವತಿಯಿಂದ ಆಯೋಜಿಸಿರುವ ಜಲಸಾಹಸ ಕ್ರೀಡೆಗಳಿಗೆ ತಹಶೀಲ್ದಾರ್ ಎಂ.ವಿ.ರೂಪ ಚಾಲನೆ ನೀಡಿದರು..

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆಯೋಜಿಸಿರುವ ಜಲಸಾಹಸ ಕ್ರೀಡೆಗಳು ಯುವಜನರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕೆ.ಆರ್.ಪೇಟೆ ಪಟ್ಟಣದಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೇಮಗಿರಿಯ ಬೆಟ್ಟದ ತಪ್ಪಲಿನ ಹೇಮಾವತಿ ನದಿಯಲ್ಲಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರ ವಿಶೇಷ ಆಸಕ್ತಿಯ ಮೇರೆಗೆ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳು ಜಲಸಾಹಸ ಕ್ರೀಡೆಗಳಲ್ಲಿ ಹಾಗೂ ಬೋಟಿಂಗ್ ನಲ್ಲಿ ಕುಳಿತು ಪ್ರಕೃತಿಯ ಸೊಬಗನ್ನು ಸವಿಯಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು..

ಫೆಬ್ರವರಿ 1ರ ಬುಧವಾರ ಮತ್ತು 2ರ ಗುರುವಾರ ದಂದು ಹೇಮಗಿರಿಯ ತಪ್ಪಲಿನಲ್ಲಿ ಹೇಮಾವತಿ ನದಿಯಲ್ಲಿ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳಲ್ಲಿ ಯುವಜನರು ಭಾಗವಹಿಸುವ ಮೂಲಕ ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅದ್ಬುತವಾದ ರೋಮಾಂಚನಕಾರಿ ಅನುಭವವನ್ನು ಪಡೆದುಕೊಳ್ಳುವ ಮೂಲಕ ಧೈರ್ಯ ಸಾಹಸದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು..

ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಬಾಣಬಿರುಸುಗಳು, ಹೂಕುಂದಗಳ ಸಿಡಿತದ ನಡುವೆ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಅಪರೂಪದ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳುವ ಜೊತೆಗೆ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಹಶೀಲ್ದಾರ್ ರೂಪ ಮನವಿ ಮಾಡಿದರು..

ಬೆಂಗಳೂರಿನ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ವತಿಯಿಂದ ನಡೆಯುತ್ತಿರುವ ಜಲಸಾಹಸ ಕ್ರೀಡೆಗಳಿಗೆ ಸರ್ಕಾರವು ರಿಯಾಯಿತಿ ದರವನ್ನು ಪ್ರಕಟಿಸಿದ್ದು ರಾಫ್ಟಿಂಗ್ ಗೆ 50ರೂ, ಜೆಟ್ ಸ್ಕೀ’ಗೆ 250ರೂ, ಸ್ಪೀಡ್ ಬೋಟ್’ಗೆ 150ರೂ ಹಾಗೂ ಕಯಾಕಿಂಗ್ ದೋಣಿ ವಿಹಾರಕ್ಕೆ 100ರೂ ನಂತೆ ದರ ನಿಗಧಿ ಮಾಡಿದೆ ..

ಈ ಸಂದರ್ಭದಲ್ಲಿ ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಾಹಸ ಅಕಾಡೆಮಿಯ ನಿರ್ದೇಶಕ ಮಂಜುನಾಥ್, ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್, ಪಿಡಿಓ ಚಂದ್ರು, ದೇವಾಲಯದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ. ರಾಮಭಟ್ಟ, ಮಂಡ್ಯ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಬಂಡಿಹೊಳೆ ವೃತ್ತದ ಗ್ರಾಮಲೆಕ್ಕಾಧಿಕಾರಿ ಪೂಜಾಗೌಡ, ರಾಜಶ್ವನಿರೀಕ್ಷಕರಾದ ಚಂದ್ರಕಲಾ, ನರೇಂದ್ರ, ಮುಖಂಡರಾದ ದೇವರಸೇಗೌಡ, ರಮೇಶ್, ಬಿ.ಜಯರಾಮೇಗೌಡ, ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕಿಜರ್ ಅಹಮದ್, ಸಹಾಯಕ ಎಂಜಿನಿಯರ್ ಎಲೆಕೆರೆರವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು..

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: