April 20, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕು ಜಾನಪದ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾವಿದರ ಸಂಘದ ಉದ್ಘಾಟನೆ .

ಕೆ.ಆರ್.ಪೇಟೆ ತಾಲೂಕು ಜಾನಪದ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾವಿದರ ಸಂಘದ ಉದ್ಘಾಟನೆ. ರಾಜ್ಯ ಮಟ್ಟದ ರಂಗಗೀತೆ ಹಾಗೂ ಜನಪದ ಗೀತಗಾಯನ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಮಾಡದ ನಾಗರಿಕ ಸಮಾಜವು ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಸಮಾಜಸೇವಕ ರಾಜಾಹುಲಿ ದಿನೇಶ್ ಕಲೆಗೆ ಜಾತಿಪಂಥವಿಲ್ಲ, ಕಲಾವಿದರು ವಿಶ್ವಮಾನವರು ಎಂಬ ಸತ್ಯವನ್ನು ಅರಿತು ಸ್ಥಳೀಯ ಕಲಾವಿದರನ್ನು ಗೌರವಿಸುವ, ಅವರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ ದಿನೇಶ್ ಇಂದು ಸ್ಥಳೀಯ ಕಲಾವಿದರು ಒಂದಾಗಿ ತಮಗೆ ನ್ಯಾಯ ಬದ್ಧವಾಗಿ ದೊರೆಯಲೇಬೇಕಾದ ಸವಲತ್ತುಗಳನ್ನು ಕೇಳಿ ಪಡೆಯಲು ಸಂಘದ ಶಕ್ತಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಸ್ವಾಗತಾರ್ಹವಾಗಿದೆ ಎಂದರು..
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕಲಾವಿದರು, ರಂಗಭೂಮಿ ನಿರ್ದೇಶಕರು ರಂಗಗೀತೆಗಳು ಹಾಗೂ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು..
ಇದೇ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. ರಂಗಭೂಮಿ ನಿರ್ದೇಶಕರಾದ ಡಾ.ಕೆ.ಎನ್.ತಮ್ಮಯ್ಯ, ಮಂಡ್ಯ ಗುರುಮೂರ್ತಿ, ಸಿ.ಬಿ.ಸುನಿಲ್ ಕುಮಾರ್, ಸುರೇಶ್ ಹರಿಜನ, ದೇವರಾಜು, ಚಿಕ್ಕಗಾಡಿಗನಹಳ್ಳಿ ರೇಣುಕಾ, ಮುದುಗೆರೆ ಮಹೇಂದ್ರ, ಚೌಡೇನಹಳ್ಳಿ ಪುಟ್ಟರಾಜು, ಉಧ್ಯಮಿ ಅರವಿಂದಕಾರoತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೂನಿಯರ್ ಶಂಕರನಾಗ್ ಪಾತ್ರಧಾರಿಯು ಅತಿಥಿಗಳು ಹಾಗೂ ಸಾರ್ವಜನಿಕರನ್ನು ರಂಜಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: