September 16, 2024

Bhavana Tv

Its Your Channel

ಅಗ್ರಹಾರಚಾಚಹಳ್ಳಿಯ ಅಧಿದೇವತೆ ತಾಯಿ ಬಾಚಳಮ್ಮನ ಅದ್ದೂರಿ ಬ್ರಹ್ಮರಥೋತ್ಸವ

ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಚಾಚಹಳ್ಳಿಯ ಅಧಿದೇವತೆ ತಾಯಿ ಬಾಚಳಮ್ಮನ ಅದ್ದೂರಿ ಬ್ರಹ್ಮರಥೋತ್ಸವ .. ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ರಥೋತ್ಸವದಲ್ಲಿ ಭಾಗಿ..ಮೊಳಗಿದ ಜಯಘೋಷಗಳು..ಉಘೇ ಬಾಚಳಮ್ಮ, ಉಘೇ ಲಕ್ಷ್ಮೀದೇವಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದ ಯುವಜನರು ..

ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಕಸಬಾ ಹೋಬಳಿಯ ಐತಿಹಾಸಿಕ ಗ್ರಾಮವಾಗಿರುವ ಅಗ್ರಹಾರಬಾಚಹಳ್ಳಿಯ ಅಧಿದೇವತೆಯಾದ ಶ್ರೀ ಬಾಚಳಮ್ಮ(ಲಕ್ಷ್ಮೀದೇವಿ)ನವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿAದ ವೈಭವಯುತವಾಗಿ ನಡೆಯಿತು.
ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ ಅವರು ಶ್ರೀ ಬಾಚಳಮ್ಮನವರ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು..
ಉಘೇ ತಾಯಿ ಲಕ್ಷ್ಮೀದೇವಿ..ಉಘೇ ಉಘೇ ಚಾಚಳಮ್ಮ..ಉಘೇ ಲೋಕರಕ್ಷಕಿ ಲಕ್ಷ್ಮೀದೇವಿ ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.. ರಥೋತ್ಸವದಲ್ಲಿ ಭಾಗವಹಿಸಿದ್ದ ನವದಂಪತಿಗಳು ಶ್ರೀ ರಥದ ಕಳಸಕ್ಕೆ ಹಣ್ಣು ಜವನವನ್ನು ಸಮರ್ಪಿಸಿ ಕೃತಾರ್ಥರಾದರು..
ರಾಜ್ಯ ವಿಧಾನಸಭಾ ಚುನಾವಣೆಯು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರಥೋತ್ಸವದಲ್ಲಿ ಭಾಗವಹಿಸಿ, ಪೈಪೋಟಿಯ ಮೇಲೆ ಪೂಜೆ ಸಲ್ಲಿಸಿ ಮುಂಬರುವ ಚುನಾವಣೆಯಲ್ಲಿ ಜಯಗಳಿಸಲು ಅನುಗ್ರಹಿಸುವಂತೆ ಪ್ರಾರ್ಥನೆ ಸಲ್ಲಿಸಿದರು..
ಅಗ್ರಹಾರಬಾಚಹಳ್ಳಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ರಥೋತ್ಸವದಲ್ಲಿ ಸಂಭ್ರಮದಿAದ ಭಾಗವಹಿಸಿದ್ದರು.. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಹತ್ತು ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.

ವರದಿ.ಡಾ.ಕೆ.ಆರ್.ನೀಲಕಂಠ.ಕೃಷ್ಣರಾಜಪೇಟೆ, ಮಂಡ್ಯ.

error: