March 24, 2024

Bhavana Tv

Its Your Channel

ಕೊರೋನಾ ಸಂಕಷ್ಟಕ್ಕೆ ಸಿಲುಕಿ ರೈತ ಕಂಗಾಲು, ಪರಿಹಾರಕ್ಕೆ ಸರ್ಕಾರದ ಮೊರೆ

ಕಿಕ್ಕೇರಿ: ಕೊರೋನಾ ಸಂಕಷ್ಟಕ್ಕೆ ಸಿಲುಕಿ ರೈತ ಕಂಗಾಲಾಗಿದ್ದಾನೆ ರೈತರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ರೈತರು ಸರಕಾರಕ್ಕೆ ಮೊರೆ ಹೋಗಿದ್ದಾರೆ.

ಕೊರೋನಾ ಸಂಕಷ್ಟಕ್ಕೆ ಸಿಲುಕಿ ನಾನಾ ಕ್ಷೇತ್ರದ ಅದೇಷ್ಟೂ ಜನರು ಇನ್ನೂ ಚೇತರಿಕೆ ಕಂಡಿಲ್ಲ ಅದರಲ್ಲಿ ರೈತರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಅದೇಷ್ಟೂ ರೈತರು ಬೆಳದ ಬೆಳೆಗೆ ಸರಿಯಾದ ಬೆಲೆ ಇಲ್ಲ ಬೆಲೆ ಇದ್ದರೂ ಸಾಗಾಣಿಕೆ ಹಾಗೂ ಮಾರಟ ಮಾಡಲು ಕಷ್ಟವಾಗಿ ಜಮೀನಿನಲ್ಲೇ ಕೊಳೆತು ಹಾಳಾಗುತ್ತಿದೆ..

ಇದೇ ರೀತಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಡೇ ಭಾಗವಾದ ಆನೆಗೊಳ ಗ್ರಾಮದ ರೈತ ನಾಗೇಂದ್ರ ಎಂಬುವರು ಒಂದು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ತಮ್ಮ ಒಂದುವರೆ ಎಕರೆ ಜಮೀನಿನಲ್ಲಿ ಬದನೆ ಕಾಯಿ ಬೆಳೆದಿದ್ರು ಬೆಳೆಯು ಸಹ ಚೆನ್ನಾಗಿ ಬಂತು ಆದ್ರೆ ಕೊರೋನಾಯಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ತಮ್ಮ ಜಮೀನಿನಲ್ಲೇ ಕೊಳೆತು ಹೋಗುತ್ತಿದ್ದು ಕೈಗೆ ಬಂದು ತುತ್ತು ಬಾಯಿಗೆ ಸಿಗದಂತಾಗಿದೆ, ಇತ್ತ ಜಿಲ್ಲೆಯ ಅದೇಷ್ಟೂ ರೈತರ ಪರಿಸ್ಥಿತಿ ಇದೇ ರೀತಿಯಾಗಿದೆ..

ಈಗಾಗಲೇ ರೈತರು ರಾಸುಗಳನ್ನು ಬಿಟ್ಟು ಯಂತ್ರೋಪಕರಣಗಳನ್ನು ಬಳಕೆ ಮಾಡಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ ಆದ್ರೆ ಡಿಸೇಲ್ ಬೆಲೆಯೂ ಹೆಚ್ಚಾಗಿರುವುದರಿಂದ ವ್ಯವಸಾಯ ಖರ್ಚು ಸಹಾ ಅಧಿಕವಾಗಿದ್ದು ರಾಸಾಯನಿಕ ಗೊಬ್ಬರದ ಬೆಲೆಯೂ ಸಹ ಗಗನಕ್ಕೇರಿದೆ ಒಟ್ಟಾರೆ ರೈತರೂ ಬೆಳದ ಬೆಳಗೆ ಬೆಲೆಯೂ ಇಲ್ಲ ವ್ಯವಸಾಯಕ್ಕೆ ಮಾಡಿದ ಖರ್ಚು ಇಲ್ಲದಂತಾಗಿದೆ ಇಂತಹ ರೈತರಿಗೆ ಸರ್ಕಾರ ಪ್ರೋತ್ಸಾಹದನ ನೀಡಿ ರೈತರಿಗೆ ಅನುಕೂಲ ಮಾಡಿಕೊಂಡಬೇಕೆAದೇ ವಾಹಿನಿಯ ಆಶಯವಾಗಿದೆ..

ವರದಿ: ಶಂಬು ಕಿಕ್ಕೇರಿ

error: