September 27, 2021

Bhavana Tv

Its Your Channel

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ೧೬೧ ನೇ ಜನ್ಮ ದಿನ ಆಚರಣೆ

ಮಳವಳ್ಳಿ : ಮಳವಳ್ಳಿ ಪಟ್ಟಣದ ಟೋಲ್ ಗೇಟ್ ಬಳಿ ಇರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರ್ ಎಂ ವಿಶ್ವೇಶ್ವರಯ್ಯ ಯುವಕರ ಸಂಘದ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ೧೬೧ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಪುರಸಭಾ ಮಾಜಿ ಅಧ್ಯಕ್ಷ ಚಿಕ್ಕರಾಜು ಈ ಸಂದರ್ಭದಲ್ಲಿ ಮಾತನಾಡಿ ಸರ್ ಎಂ
ವಿಶ್ವೇಶ್ವರಯ್ಯರವರು ನಮ್ಮ ದೇಶಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದು ಜಾತಿಭೇದ ಮಾಡದೆ ಸರ್ವ ಜನಾಂಗದ ಹಿತಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ ಇಂತಹ ಮಹಾನ್ ವ್ಯಕ್ತಿಗಳು ಮಾರ್ಗದರ್ಶನದಲ್ಲಿ ನಾವುಗಳು ಸಾಗಬೇಕಿದೆ ಎಂದು ತಿಳಿಸಿದರು .
ಇದೇ ವೇಳೆಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಯುವಕರ ಸಂಘದ ಅಧ್ಯಕ್ಷ ಚಿಕ್ಕಮರೀಗೌಡ .ನಾಡಗೌಡ ಯಜಮಾನ ವೆಂಕಟಪ್ಪ ಮುಖಂಡರಾದ ಎಂ ಎಚ್ ಕೆಂಪಯ್ಯ . ಚಿಕ್ಕಣ್ಣ . ದೇವರಾಜು .ಮುಖ್ಯ ಶಿಕ್ಷಕ ಮಧು ಸೇರಿದಂತೆ ಇತರರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: