October 20, 2021

Bhavana Tv

Its Your Channel

ಮೈಷುಗರ್ ಉಳಿವಿಗಾಗಿ ಸದ್ಯದಲ್ಲೇ ಮಳವಳ್ಳಿ ಯಿಂದ ಮಂಡ್ಯಕ್ಕೆ ಪಾದಯಾತ್ರೆ -ಶಾಸಕ ಡಾ ಕೆ ಅನ್ನದಾನಿ

ಮಳವಳ್ಳಿ : ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಮೈಷುಗರ್ ಉಳಿವಿಗಾಗಿ ಸಧ್ಯದಲ್ಲೇ ಮಳವಳ್ಳಿ ಯಿಂದ ಮಂಡ್ಯಕ್ಕೆ ಪಾದಯಾತ್ರೆ ಕೈಗೊಳ್ಳುವುದರ ಜೊತೆಗೆ ತದನಂತರದಲ್ಲಿ ಚಡ್ಡಿ ಮೆರವಣಿಗೆ ಸಹ ನಡೆಸುವುದಾಗಿ ಶಾಸಕ ಡಾ ಕೆ ಅನ್ನದಾನಿ ಘೋಷಿಸಿದ್ದಾರೆ.
ಮಳವಳ್ಳಿ ಪಟ್ಟಣದ ಹೊರವಲಯದ ಇತಿಹಾಸ ಪ್ರಸಿದ್ಧ ಮಾರೇಹಳ್ಳಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಇಂದು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಹಾಗೂ ಭಾರತೀಯ ಪುರಾತತ್ತ್ವ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮಂಡ್ಯ ಜಿಲ್ಲೆಯ ಇತಿಹಾಸ ಪರಂಪರೆ ಹೊಂದಿರುವ ಮೈಷುಗರ್ ಕಾರ್ಖಾನೆ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದು ಇದನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳ ಬೇಕೆಂದು ಜಿಲ್ಲೆಯ ಜನರ ಆಗ್ರಹವಾಗಿದ್ದು ಇರುವ ಈ ಒಂದು ಕಾರ್ಖಾನೆ ಯನ್ನು ಸರ್ಕಾರದಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿ ದರು.
ವಿಶ್ವದ ಯಾವ ರಾಷ್ಟ್ರದಲ್ಲೂ ಇಲ್ಲದಂತ ಪ್ರಾಕೃತಿಕ ತಾಣ ನಮ್ಮ ಭಾರತದಲ್ಲಿದೆ, ಅಮೆರಿಕಾದ ನಯಾಗರ ಜಲಪಾತವನ್ನು ಮೀರಿಸುವಂತ ಸೌಂದರ್ಯ ನಮ್ಮ ಗಗನಚುಕ್ಕಿ ಪಾಲ್ಸ್ ನಲ್ಲಿದ್ದು ಆದರೆ ವಿದೇಶಿಗರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಉತ್ತಮ ರೀತಿಯ ತಾಂತ್ರಿಕ ಕೌಶಲ್ಯ ನೀಡಿ ಬಳಸಿಕೊಂಡಿದ್ದಾರೆ ನಮ್ಮಲ್ಲಿ ಅಂತಹ ಪ್ರಯತ್ನ ಆಗಿಲ್ಲ ಎಂದು ವಿಷಾಧಿಸಿದರು.
ಗೋವಾಕ್ಕಿಂತಲೂ ಹೆಚ್ಚಿನ ಸೌಂದರ್ಯದಿAದ ಕೂಡಿದ ಬೀಚ್ ಗಳು ನಮ್ಮ ರಾಜ್ಯದಲ್ಲಿ ಇವೆ ಆದರೆ ವಿದೇಶಿಗರನ್ನು ನೋಡಲು ಗೋವಾ ಬೀಚ್ ಗೆ ಜನ ಭಾರಿ ಸಂಖ್ಯೆಯಲ್ಲಿ ಹೋಗುವುದರಿಂದ ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ ಎಂದು ಅನ್ನದಾನಿ ಸೂಚ್ಯವಾಗಿ ಹೇಳಿದರು.
ರಾಜ್ಯದಲ್ಲಿ ಅತಿ ಹೆಚ್ಚು ವಿಶ್ವ ಪ್ರಸಿದ್ಧಿ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಮಂಡ್ಯ ಜಿಲ್ಲೆಯ ಅದರಲ್ಲೂ ಮಳವಳ್ಳಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಆಗ್ರಹಿಸಿದರು ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ಧೇಶಕರೂ ಆದ ಉಪ ವಿಭಾಗದಿಕಾರಿ ಬಿ ಸಿ ಶಿವಾನಂದಮೂರ್ತಿ, ಮಂಡ್ಯ ಉಪ ವಿಭಾಗಾಧಿಕಾರಿ ಐಶ್ವರ್ಯ, ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತಹಸೀಲ್ದಾರ್ ವಿಜಯಣ್ಣ, ತಾ ಪಂ ಇಓ ರಾಮಲಿಂಗಯ್ಯ, ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಜಾನಪದ ಕಲಾತಂಡಗಳ ಮೆರವಣಿಗೆ ಯೊಂದಿಗೆ ಅತಿಥಿ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು.
ಶಾಲಾ ಮಕ್ಕಳು ಹಾಗೂ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: