April 25, 2024

Bhavana Tv

Its Your Channel

ಕಳೆದ ಮೂರ್ನಾಲ್ಕು ದಿನಗಳಿಂದ ಮಳವಳ್ಳಿ ತಾಲೂಕಿನ ತಳಗವಾದಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆಯುತ್ತಿದ್ದ ಆಹೋ ರಾತ್ರಿ ಹೋರಾಟಕ್ಕೆ ಇಂದು ತೆರೆ.

ಮಳವಳ್ಳಿ : ಠೇವಣಿ ದಾರರಿಗೆ ಠೇವಣಿ ಹಣ ಹಿಂದಿರುಗಿಸುವು ದರ ಜೊತೆಗೆ ಸೊಸೈಟಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳವಳ್ಳಿ ತಾಲೂಕಿನ ತಳಗವಾದಿ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆಯುತ್ತಿದ್ದ ಆಹೋ ರಾತ್ರಿ ಹೋರಾಟಕ್ಕೆ ಇಂದು ತೆರೆ ಬಿದ್ದಿದೆ.
ಇಂದು ಸಹ ಷೇರುದಾರರು ಠೇವಣಿದಾರರೊಡಗೂಡಿ ಹೋರಾಟ ಮುಖಂಡ ಕೃಷ್ಣೇಗೌಡ ಹಾಗೂ ಇನ್ನಿತರ ಮುಖಂಡರು, ಠೇವಣಿದಾರರಿಗೆ ಹಣ ಹಿಂದಿರುಗಿಸಬೇಕು, ಸೊಸೈಟಿಗೆ ಸೇರಿದ ಸಾರ್ವಜನಿಕ ಹಣವನ್ನು ಮುಂಗಡದ ಹೆಸರಿನಲ್ಲಿ ಅಕ್ರಮವಾಗಿ ತಮಗೆ ಬೇಕಾದವರಿಗೆ ೫೨ ಲಕ್ಷ ಹಣವನ್ನು ಹಂಚಿಕೆ ಮಾಡಿದ್ದು ಇದನ್ನು ಕೂಡಲೇ ವಸೂಲಿ ಮಾಡಬೇಕು, ಕಂಪನಿಗಳಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಪಾವತಿಸಿ ಸೊಸೈಟಿ ವ್ಯಾಪ್ತಿಯ ರೈತರಿಗೆ ಅಗತ್ಯವಿರುವ ರಸ ಗೊಬ್ಬರವನ್ನು ಕೂಡಲೇ ಪೂರೈಕೆ ಮಾಡಬೇಕು, ಮತ್ತು ಸೊಸೈಟಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿ ಆರ್ ಓ ಶಂಕರ್ ಅವರು ಈ ತಿಂಗಳ ೩೦ರ ನಂತರ ಠೇವಣಿ ದಾರರಿಗೆ ಹಣ ಕೊಡಿಸುವುದರ ಜೊತೆಗೆ ಇನ್ನೂ ೧೫ ದಿನಗಳ ನಂತರ ರೈತರಿಗೆ ಅಗತ್ಯವಿರುವ ರಸ ಗೊಬ್ಬರ ಪೂರೈಕೆಗೆ ಕ್ರಮ ವಹಿಸಲಾಗು ವುದು, ಮುಂಗಡ ಹೆಸರಿನಲ್ಲಿ ಕೆಲವರಿಗೆ ಅಕ್ರಮವಾಗಿ ನೀಡಲಾಗಿರುವ ಹಣದ ವಸೂಲಿ ಮಾಡುವುದರ ಜೊತೆಗೆ ಸೊಸೈಟಿಯ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಭರವಸೆ ನೀಡಿದರು.
ಡಿ ಆರ್ ಓ ಅವರ ಭರವಸೆ ಜೊತೆಗೆ ಸೊಸೈಟಿ ಅಧ್ಯಕ್ಷರು ತಮ್ಮ ಈ ಎಲ್ಲಾ ಬೇಡಿಕೆಗಳ ಈಡೇರಿಕೆ ಕುರಿತು
ಲಿಖಿತ ಭರವಸೆ ನೀಡಬೇಕು ಎಂಬ ಚಳುವಳಿಗಾರರ ಆಗ್ರಹಕ್ಕೆ ಮಣಿದ ಅಧ್ಯಕ್ಷ ಡಿ ಸಿ ಚೌಡಯ್ಯ ಅವರು ಲಿಖಿತ ಭರವಸೆ ನೀಡಿದರ ನಂತರ ಪ್ರತಿಭಟನೆ ಹಿಂತೆಗೆದು ಕೊಳ್ಳಲಾಯಿತು.ಪ್ರತಿಭಟನೆಯಲ್ಲಿ ಆನಂದ್, ಹನುಮಂತು, ತಳಗವಾದಿ ಚೌಡಯ್ಯ, ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: