December 3, 2021

Bhavana Tv

Its Your Channel

ಪ್ಯಾನ್ ಇಂಡಿಯಾ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ

ಮಳವಳ್ಳಿ : ಪ್ರತಿಯೊಂದು ಜಾತಿ ಧರ್ಮ ಸಮುದಾಯವನ್ನು ಗೌರವಿಸುವ ಸಂಸ್ಕೃತಿ ನಮ್ಮ ಭಾರತ ದೇಶದ್ದಾಗಿದ್ದು ಇಂತಹ ಉತ್ಕೃಷ್ಟ ಸಂಸ್ಕೃತಿ ಬೇರೆ ಯಾವ ದೇಶದಲ್ಲೂ ಕಾಣ ಸಿಗದು ಎಂದು ಇಲ್ಲಿನ ಜೆ ಎಂ ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಚಿದಾನಂದ ಪಟ್ಟಣ ಶೆಟ್ಟಿ ಪ್ರಶಂಸಿಸಿದ್ದಾರೆ.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಪ್ಯಾನ್ ಇಂಡಿಯಾ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತಿ ಧರ್ಮ ಎಷ್ಟೇ ಇದ್ದರೂ ದೇಶ ಕಟ್ಟುವ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ನಿಲ್ಲುವುದು ಈ ದೇಶದ ಗುಣಧರ್ಮವಾಗಿದೆ ಎಂದರು.
ಇದರ ಜೊತೆಗೆ ನಮ್ಮ ಹಿರಿಯರು, ಅಶಕ್ತ ಅಂಗವಿಕಲರು, ಮಹಿಳೆಯರನ್ನು ಗೌರವಿಸುವುದು ಅವರ ರಕ್ಷಣೆ ಸಹಾಯಕ್ಕೆ ನಿಲ್ಲುವುದು ನಮ್ಮ ಸಂವಿಧಾನ, ಕಾನೂನು ಸಂಸ್ಕೃತಿಯ ಆಧ್ಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಹಿರಿಯರ, ಅಂಗವಿಕಲರ, ಮತ್ತು ಮಹಿಳೆಯರ ಹಕ್ಕು ನೆರವಿನ ಬಗ್ಗೆ ಅರಿವು ಮೂಡಿಸಿ ಅವರಿಗೆ ಸಿಗಬೇಕಿರುವ ನೆರವು ಸಹಾಯವನ್ನು ಅವರಿಗೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾ ಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನನ ಮರಣ ನೋಂದಣಿ ಕಾಯ್ದೆ ಕುರಿತು ವಕೀಲ ಎಂ ಮಹೇಶ್, ಹಿರಿಯ ನಾಗರೀಕರ ಹಕ್ಕುಗಳ ಕುರಿತು ವಕೀಲ ಶ್ರೀಕಂಠಸ್ವಾಮಿ ಮಾಹಿತಿ ನೀಡಿದರು.
ಗ್ರೇಡ್ ೨ ತಹಸೀಲ್ದಾರ್ ಬಿ ಜಯರಾಮು ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್ ಎಂ ಮಲ್ಲೇಶ್, ಹಿರಿಯ ವಕೀಲರಾದ ಪ್ರಭುರಾಜೇ ಅರಸ್, ನೇತ್ರಾವತಿ, ನಾಗರತ್ನ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರೀಕರಿಗೆ ಮಾಶಾಸನ ಮಂಜೂರಾತಿ ಪತ್ರ ಹಾಗೂ ಮನೆ ಯಜಮಾನ ಮೃತಪಟ್ಟ ಕುಟುಂಬದವರಿಗೆ ಪರಿಹಾರದ ಚೆಕ್ ನ್ನು ನ್ಯಾಯಾಧೀಶರು ವಿತರಿಸಿದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: