December 3, 2021

Bhavana Tv

Its Your Channel

ಮಳವಳ್ಳಿಯಲ್ಲಿ ಖ್ಯಾತ ಚಿತ್ರನಟ ಅಂಬರೀಶ್‌ರವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ

ಮಳವಳ್ಳಿ : ಖ್ಯಾತ ಚಿತ್ರನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವೊಂದು ನೆನ್ನೆ ಮಳವಳ್ಳಿ ಪಟ್ಟಣದಲ್ಲಿ ಏರ್ಪಾಡಾಗಿತ್ತು.
ಪ್ರಗತಿಪರ ಚಿಂತಕರು ಸಮಾಜ ಸೇವಕರು ಆದ ತಳಗವಾದಿ ಟಿ ಎಂ ಪ್ರಕಾಶ್ ಅವರ ಕಚೇರಿ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಲೋಹಿಯಾ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ದಡದಪುರ ಶಿವಣ್ಣ ಅವರು ದಿವಂಗತ ಅಂಬರೀಶ್ ಅವರ ಭಾವ ಚಿತ್ರಕ್ಕೆ ಪುಷ್ರ‍್ಪಾಚನೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಮಳವಳ್ಳಿ ಯ ಹುಚ್ಚೇಗೌಡರ ಮಗನಾಗಿದ್ದ ಅಂಬರೀಶ್ ಅವರು ನಾಡಿನ ಜನಪ್ರೀಯ ನಟರಾಗಿದ್ದರ ಜೊತೆಗೆ ಮಂಡ್ಯ ಜಿಲ್ಲೆಯ ಹೆಮ್ಮೆಯ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರಲ್ಲದೆ ಜಿಲ್ಲೆಯಲ್ಲಿ ಅಂಬರೀಶ್ ಅವರಂತಹ ದೀಮಂತ ರಾಜಕಾರಣಿಗಳು ಹುಟ್ಟಿ ಬರಲಿ ಹಾಗೂ ಅಂಬರೀಶ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹಾರೈಸಿದರು.
ಶಿವಣ್ಣ ಅವರು ಮಾತನಾಡಿ ನಟರಾಗಿ ರಾಜಕಾರಣಿಯಾಗಿ ದಿವಂಗತ ಅಂಬರೀಶ್ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀ ಯವಾಗಿದ್ದು ಅವರ ಆದರ್ಶ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿ ಹಲವಾರು ಜೀವಗಳ ಉಳಿವಿಗೆ ಕಾರಣರಾದ ಚೊಟ್ಟನಹಳ್ಳಿ ಗ್ರಾಮದ ಎಸ್ ನಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖಂಡರಾದ ದರ್ಶನ್ ಗೌಡ, ಶಿವರಾಜ್ ನಾಯಕ್, ಶಿವಕುಮಾರ್, ಹನುಮಂತ ಮತ್ತಿತರರು ಕಾರ್ಯಕ್ರಮ ದಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: