April 20, 2024

Bhavana Tv

Its Your Channel

ಬಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ರಮ್ಯ ವೆಂಕಟೇಶ್ ಆಯ್ಕೆ

ಮಳವಳ್ಳಿ : ತಾಲ್ಲೂಕಿನ ಬಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಮುತ್ತಮ್ಮ ಅವರು ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೆ ಈಡಾದ ನಂತರ ಖಾಲಿ ಉಳಿದಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಅವರ ಸೊಸೆ ರಮ್ಯ ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಇಡೀ ದೇಶದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದ ತೀರ ಹಿಂದುಳಿದ ಕೊರಮ ಜನಾಂಗದ ಎರಡನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಮುತ್ತಮ್ಮ ಹಂದಿ ಸಾಕಾಣಿಕೆ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಮಾಜದ ಕಟ್ಟ ಕಡೆಯ ಹಿಂದುಳಿದ ಕೊರಮ ಸಮಾಜಕ್ಕೆ ಸೇರಿದ ಈಕೆ ಇಡೀ ರಾಷ್ಟ್ರದಲ್ಲೇ ಗ್ರಾ ಪಂ ಅಧ್ಯಕ್ಷ ಸ್ಥಾನಕ್ಕೆ ಏರಿದ ಕೊರಮ ಸಮಾಜದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಆದರೆ ಕಳೆದ ಆರು ತಿಂಗಳ ಹಿಂದೆ ನಡೆದ ಆಟೋ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಮುತ್ತಮ್ಮ ಹಾಗೂ ಅವರ ಕುಟುಂಬದ ಐದು ಮಂದಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದರು.
ತೆರವಾಗಿದ್ದ ಮುತ್ತಮ್ಮ ಅವರ ಸದಸ್ಯ ಸ್ಥಾನಕ್ಕೆ ಅವರ ಸೊಸೆ ರಮ್ಯ ವೆಂಕಟೇಶ್ ಅವರನ್ನು ಬಂಡೂರು ಗ್ರಾಮದ ಆ ವಾರ್ಡಿನ ಜನ ಅವಿರೋಧವಾಗಿ ಆಯ್ಕೆ ಮಾಡಿದ್ದರು.
ಇದರ ಬೆನ್ನಲ್ಲೇ ಮುತ್ತಮ್ಮ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಗ್ರಾ ಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಪಂಚಾಯ್ತಿ ಸದಸ್ಯರು ದಿವಂಗತ ಮುತ್ತಮ್ಮ ಅವರಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಳುವ ಸಮಾಜದ ರಾಷ್ಟ್ರೀಯ ಸಮಿತಿ ಮುಖಂಡರಾದ ಕಿರಣ್ ಕುಮಾರ್, ಆದರ್ಶ್ , ಆನಂದ್ ಕುಮಾರ್ ಅವರುಗಳು ಸಮಾಜದಲ್ಲಿ ತೀರ ಹಿಂದುಳಿದ ತಳ ಸಮುದಾಯದ ಅಲೆಮಾರಿ ಸಮಾಜದವರನ್ನು ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಗ್ರಾ ಪಂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಕೀರ್ತಿ ಬಂಡೂರು ಗ್ರಾಮ ಪಂಚಾಯತಿಗೆ ಸಲ್ಲುತ್ತದೆ ಎಂದರಲ್ಲದೆ ಇದರ ರುವಾರಿಯಾದ ರಾಮ್ ಮನೊಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರೂ ಕೆಪಿಸಿಸಿ ಕಾರ್ಯದರ್ಶಿಗಳು ಆದ ದಡದಪುರ ಶಿವಣ್ಣ ಅವರ ರಾಜಕೀಯ ಬದ್ದತೆ ಹಾಗೂ ಸದೃಢ ರಾಜಕೀಯ ನಾಯಕತ್ವದ ಫಲವಾಗಿ ಈ ಆಯ್ಕೆ ನಡೆದಿದೆ ಎಂದು ಕರೆಯಲಾಗುತ್ತದೆ ಪ್ರಶಂಸಿಸಿದರು.
ಕೆಪಿಸಿಸಿ ಕಾರ್ಯದರ್ಶಿ ದಡದಪುರ ಶಿವಣ್ಣ ಅವರು ಮಾತನಾಡಿ ಶೋಷಿತ ಅಲೆಮಾರಿ ಸಮುದಾಯಕ್ಕೆ ಸೇರಿದ ವರ್ಗಕ್ಕೆ ರಾಜಕೀಯ ಸ್ಥಾನ ಮಾನ ನೀಡಬೇಕೆಂಬ ಉದ್ದೇಶದಿಂದ ಮುತ್ತಮ್ಮ ಅವರನ್ನು ಗ್ರಾ ಪಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು, ಆದರೆ ರಸ್ತೆ ಅಪಘಾತದಲ್ಲಿ ತಮ್ಮ ಕುಟುಂಬದ ನಾಲ್ವರ ಜೊತೆ ಮುತ್ತಮ್ಮ ಧಾರುಣವಾಗಿ ಸಾವನ್ನಪ್ಪಿದ್ದು ಒಂದು ದುರಂತವೇ ಸರಿ ಎಂದರು.
ಆ ಸ್ಥಾನಕ್ಕೆ ಅದೇ ಕುಟುಂಬದವರನ್ನು ಆಯ್ಕೆ ಮಾಡಬೇಕೆಂಬ ಆ ಮೂಲಕ ತಳ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಮುತ್ತಮ್ಮ ಅವರ ಸೊಸೆ ರಮ್ಯ ವೆಂಕಟೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಆ ಮೂಲಕ ಘೋರ ದುರಂತ ಅನುಭವಿಸಿರುವ ಈ ಕುಟುಂಬದ ಬೆನ್ನಿಗೆ ಇಡೀ ಬಂಡೂರು ಜನ ಇದ್ದೇವೆ ಎಂಬುದನ್ನು ಸ್ಪಷ್ಟ ಪಡಿಸಲಾಗಿದೆ ಎಂದರು.
ಸರ್ಕಾರದಿAದ ಈ ಕುಟುಂಬಕ್ಕೆ ಸಿಗಬಹುದಾದ ಎಲ್ಲಾ ರೀತಿಯ ಪರಿಹಾರಕ್ಕೆ ದೊರಕಿಸಿಕೊಡುವುದಾಗಿ ಶಿವಣ್ಣ ಭರವಸೆ ನೀಡಿದರು.
ಪಂಚಾಯತಿ ಉಪಾಧ್ಯಕ್ಷರಾದ ಮಹೇಶ್, ಚಿಕ್ಕ ಲಿಂಗಯ್ಯ, ತಳಗವಾದಿ ಪ್ರಕಾಶ್, ರಮೇಶ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: