April 20, 2024

Bhavana Tv

Its Your Channel

ಇನ್ಸ್ ಪೆಕ್ಟರ್ ಎಚ್.ಟಿ.ಸುನೀಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮಳವಳ್ಳಿ: ಪಟ್ಟಣದ ಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಚ್.ಟಿ.ಸುನೀಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ, ಬಂಧಿತರಿAದ ಸುಮಾರು ಎಂಟು ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ನಿವಾಸಿಗಳಾದ ಅರುಣ(29) ಮತ್ತು ಗುರುಪ್ರಸಾದ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಆಟೋ ಚಾಲಕರಾದ ಇಬ್ಬರು ಬೇರೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು.
ಆರೋಪಿಗಳು ಮೈಸೂರು ನಗರ, ಮದ್ದೂರು, ಕೊಳ್ಳೇಗಾಲದಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದರು. ಇವರಿಂದ ಕಳವು ಮಾಲು ಖರೀದಿಸಿದ್ದ ಪಟ್ಟಣದ ನಿವಾಸಿಗಳಾದ ನಹೀಮ್ತಾಜ್ ಅಜರ್ ಪಾಷ ಮತ್ತು ಮನು ಅಲಿಯಾಸ್ ಕಳ್ಳಮನು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬAಧ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಆರೋಪಿಗಳಾದ ಅರುಣ ಮತ್ತು ಗುರುಪ್ರಸಾದ್ ಮೈಸೂರು ನಗರ ಸೇರಿದಂತೆ ವಿವಿಧೆಡೆ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಬಂಧಿತರಿAದ ಮೈಸೂರು ನಗರದಿಂದ ಕಳವು ಮಾಡಿದ್ದ 8 ಪ್ಯಾಸೆಂಜರ್ ಆಟೋ ರಿಕ್ಷಾ, ಒಂದು ಆಪೇ ಗೂಡ್ಸ್ ಆಟೋ, 4 ದ್ವಿಚಕ್ರ ವಾಹನಗಳು, ಮದ್ದೂರು ಪಟ್ಟಣದ ಒಂದು ದ್ವಿಚಕ್ರ ವಾಹನ, ಕೊಳ್ಳೇಗಾಲ ಪಟ್ಟಣದ ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಎಸ್ಪಿ ಎನ್.ಯತೀಶ್, ಎಎಸ್ಪಿ ವೇಣುಗೋಪಾಲ್, ಡಿವೈಎಸ್ಪಿ ಎಚ್.ಲಕ್ಷ್ಮಿನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಟ್ಟಣದ ಪುರ ಪೊಲೀಸ್ ಠಾಣೆಯ ಪಿಐ ಎಚ್.ಟಿ.ಸುನೀಲ್ ಕುಮಾರ್, ಪಿಎಸ್ ಐಗಳಾದ ಹನುಮಂತ ಕುಮಾರ್, ಆರ್.ನರೇಂದ್ರ ಕುಮಾರ್, ಎಎಸ್ ಐಗಳಾದ ವಿ.ನಟರಾಜು, ಬಿ.ಸಿ.ಲೋಕೇಶ್, ಸಿಬ್ಬಂದಿಗಳಾದ ಮಾದೇಶ, ರಿಯಾಜ್ ಪಾಷಾ, ಹರ್ಷವರ್ಧನ, ಮಣಿಕಂಠಸ್ವಾಮಿ, ಉಮೇಶ್, ಪ್ರಕಾಶ್, ಬೀರೇಶ್ ಇದ್ದರು.
ತನಿಖಾ ತಂಡದ ಕಾರ್ಯವನ್ನು ಪ್ರಶಂಸಿರುವ ಎಸ್ಪಿ ಎನ್.ಯತೀಶ್ ಬಹುಮಾನ ಪೋಷಿಸಿದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: