April 25, 2024

Bhavana Tv

Its Your Channel

ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ

ಮಳವಳ್ಳಿ :- ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಹಾಡ್ಲಿ ಗ್ರಾಮ ಪಂಚಾಯಿತಿ ಮಳವಳ್ಳಿ ತಾಲೂಕು ಎನ್ ಇ ಎಸ್ ಲಯನ್ಸ್ ಸಂಸ್ಥೆ ಮಳವಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಾಡ್ಲಿ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ವಿಶ್ವ ಮಾತೃಭಾಷಾ ದಿನಾಚರಣೆ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕನ್ನಡ ಭಾಷೆ ಮತ್ತು ಜಲ ಸಂರಕ್ಷಣೆ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಣೆ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಬೂಸ್ಟರ್ ವಿತರಣೆ ಹಾಗೂ ಮಕ್ಕಳ ರಕ್ಷಣಾ ಘಟಕ ದಿಂದ ಮಕ್ಕಳ ಹಕ್ಕುಗಳ ಅರಿವು ಲೈಬ್ರರಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು

ಉದ್ಘಾಟಸಿ ಮಾತನಾಡಿದ ಲಯನ್ ವಲಯಾಧ್ಯಕ್ಷ ಪುಟ್ಟರಾಜು ಕಳೆದ ಹಲವಾರು ವರ್ಷಗಳಿಂದ ಲಯನ್ಸ್ ಸಂಸ್ಥೆಗಳು ಒಳ್ಳೆಯ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಸದರಿ ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿ ನಡೆದಿರುವುದು ಮತ್ತು ಆಯೋಜಿಸಿರುವುದು ಕಾರ್ಯಕ್ರಮಕ್ಕೆ ಪೂರಕವಾಗಿದೆ ಹಾಗಾಗಿ ಮಕ್ಕಳುಗಳು ಇಂತಹ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಲಯನ್ಸ್ ಸಂಸ್ಥೆಗಳು ಒಳ್ಳೆಯ ಕಾರ್ಯಕ್ರಮಕ್ಕೆ ಮುಂಚೂಣಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿರುವುದಕ್ಕೆ ಅಮೃತ ಲಯನ್ಸ್ ಸಂಸ್ಥೆಗೆ ಹಾಗೂ ಸಹಕರಿಸಿದ ಎಲ್ಲ ಸಂಸ್ಥೆಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು
ಗ್ರಾಮೀಣ ಪ್ರದೇಶದಲ್ಲಿ ಜಲಸಂರಕ್ಷಣೆಯಲ್ಲಿ ಮತ್ತು ಕನ್ನಡ ಭಾಷಾ ಬಗ್ಗೆ ಪ್ರಬಂಧ ಸ್ಪರ್ಧೆ ಮಾಡುವುದರ ಮುಖಾಂತರ ಮಕ್ಕಳಿಗೆ ಹೆಚ್ಚು ಜ್ಞಾನ ಬರುತ್ತದೆ ಹಾಗಾಗಿ ವಿಜ್ಞಾನದ ಬಗ್ಗೆ ಮತ್ತು ಕನ್ನಡ ಭಾಷೆ ಬಗ್ಗೆ ಹೆಚ್ಚು ಮಹತ್ವ ನೀಡಬೇಕು ಎಂದರು ಮತ್ತು ಬೆಂಗಳೂರುನAತ ನಗರ ಪ್ರದೇಶಗಳಲ್ಲಿ ಕನ್ನಡವನ್ನೇ ಮಾತನಾಡಲು ಹಿಂಜರಿಯುತ್ತಾರೆ ಆದರಿಂದ ಮಾತೃಭಾಷೆಗೆ ಹೆಚ್ಚು ಮಹತ್ವವನ್ನು ನೀಡಬೇಕೆಂದು ಕನ್ನಡದ ಬಗ್ಗೆ ಹಾಗೂ ವಿಜ್ಞಾನದ ಬಗ್ಗೆ ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿ ಬಾಲ್ಯಜೀವನವನ್ನು ಸ್ಮರಿಸಿದರು

ನಂತರ ಪಿಡಿಒ ಲಿಂಗರಾಜು ಮಾತನಾಡಿ ನಮ್ಮ ಪಂಚಾಯಿತಿ ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಮತ್ತು ಗ್ರಾಮೀಣ ಪ್ರದೇಶ ಮಕ್ಕಳಿಗೆ ಇಂತಹ ಹತ್ತು ಹಲವು ಕಾರ್ಯಕ್ರಮಗಳು ಅವಶ್ಯಕ ಎಂದು ತಿಳಿಸಿ ತಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ತಿಳಿಸಿದರು

ಪ್ರತಿಭಾವಂತ ಮಕ್ಕಳುಗಳನ್ನು ಪಂಚಾಯಿತಿ ಅಧ್ಯಕ್ಷರಾದ ಅಶ್ವಿನಿ ಇವರು ಪುರಸ್ಕರಿಸಿದರು ಹಾಗೂ ಲಯನ್ ಶಂಕರೇಗೌಡ ನೆನಪಿನ ಕಾಣಿಕೆ ವಿತರಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಬೂಸ್ಟರ್ ವಿತರಿಸಲಾಯಿತು ಹಾಗೂ ಮಕ್ಕಳ ರಕ್ಷಣಾ ಘಟಕ ವತಿಯಿಂದ ಶಾಲೆಯ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅಭಿಲಾಶ್ ಅರಿವು ಮೂಡಿಸಿ ಹಕ್ಕುಗಳ ಪುಸ್ತಕವನ್ನು ಹಾಗೂ ಸ್ಯಾನೀಟೈಜರನ್ನು ಶಾಲೆಗೆ ವಿತರಿಸಲಾಯಿತು

ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಲಯನ್ ಎಂ ಲೋಕೇಶ್ ವಿದ್ಯಾರ್ಥಿಗಳ ಮುಂದಿನ ಜೀವನ ಸುಖಕರವಾಗಿರಲಿ ಪ್ರಶಸ್ತಿ ಪುರಸ್ಕಾರ ಪಡೆದವರು ಈಗದು ಬೇಡ ಮತ್ತು ಪಡೆಯದವರು ಕುಗ್ಗುವುದು ಬೇಡ ಎಂದು ಮಕ್ಕಳಿಗೆ ಕಿವಿಮಾತು ತಿಳಿಸಿದರು ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಅಭಿನಂದಿಸುವುದು ಅಥವಾ ಪುರಸ್ಕರಿಸುವುದು ನಮ್ಮಂತಹ ಸಂಘಸAಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ ಹಾಗಾಗಿ ಸರ್ಕಾರಿ ಶಾಲಾ ಮಕ್ಕಳು ಯಾವುದೇ ಸೌವಲತ್ತು ಸದ್ಬಳಕೆ ಮಾಡಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚು ಬೆಳೆಸಿಕೊಳ್ಳಿ ಶಾಲೆಗೆ ಗುರುಹಿರಿಯರಿಗೆ ತಂದೆತಾಯಿಗಳಿಗೆ ತಾಲೂಕಿಗೆ ಜಿಲ್ಲೆಗೆ ರಾಜ್ಯಕ್ಕೆ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಟ್ಟು ಮಾದರಿಯಾಗಿರಬೇಕು ಎಂದು ಶುಭ ಹಾರೈಸಿದರು

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಆಯುಷ್ ಅಧಿಕಾರಿ ಶೋಭಾ ಬಂಡೂರು, ಲಯನ್ ಸೋಮೇಗೌಡ ಜಿಲ್ಲಾ ಸಂಯೋಜಕರು ಅಮೃತ ಲಯನ್ಸ್ ಅಧ್ಯಕ್ಷರು ಪದಾಧಿಕಾರಿಗಳು ಶಿಕ್ಷಕರಿಂದ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಅಧ್ಯಕ್ಷರು ಹಾಡ್ಲಿ. ಗ್ರಾಮಸ್ಥರು ಭಾಗವಹಿಸಿದರು ಕಾರ್ಯಕ್ರಮ ಯಶಸ್ವಿಯಾಯಿತು

ವರದಿ:ಲೋಕೇಶ ಮಳವಳ್ಳಿ

error: