September 27, 2021

Bhavana Tv

Its Your Channel

ನಾಗಮಂಗಲ ಬೀದಿಬದಿ ವ್ಯಾಪಾರಿಗಳ ಪ್ರತಿಭಟನೆ

ನಾಗಮಂಗಲ: ಪುರಸಭೆ ವತಿಯಿಂದ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡದ ಉದ್ಘಾಟನೆಗೆ ಸಿದ್ಧಗೊಂಡಿದ್ದು ಕಟ್ಟಡದ ಸುತ್ತಮುತ್ತ ಇದ್ದಂತಹ ಬೀದಿ ಬದಿ ವ್ಯಾಪಾರಿಗನ್ನು ಪಟ್ಟಣದ ಸಂತೆ ಮೈದಾನಕ್ಕೆ ಸ್ಥಳಾಂತರ ಗೊಳಿಸುತ್ತಿರುವದಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ತರಕಾರಿ,ಹಣ್ಣು. ಹೂ ಅಂಗಡಿಗಳ ಬೀದಿ
ಬದಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿ ಜನಪ್ರತಿನಿಧಿಗಳು. ಪುರಸಭೆ ಅಧಿಕಾರಿಗಳು .ಪುರಸಭೆ ಸದಸ್ಯರಿಗೆ. ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ರವಿಕಾಂತೇಗೌಡ ಕಾನೂನಿನ ಪ್ರಕಾರ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ವ್ಯವಸ್ಥೆ ಮೂಲಸೌಕರ್ಯಗಳನ್ನು ಒದಗಿಸದೆ ಬೇರೊಂದು ಜಾಗಕ್ಕೆ ಸ್ಥಳಾಂತರ ಗೊಳಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗಿದೆ ಪುರಸಭೆಯ ಅಧಿಕಾರಿಗಳು ಮೂಲ ಸೌಕರ್ಯಳಾದ ರಸ್ತೆ .ನೀರು. ವಿದ್ಯುತ್. ವ್ಯಾಪಾರ ಸ್ಥಳದ ಮೇಲ್ಚಾವಣಿ ಇದ್ಯಾವುದನ್ನು ಕಲ್ಪಿಸದೆ ವ್ಯಾಪಾರಕ್ಕೆ ಸೂಕ್ತವಲ್ಲದ ಜಾಗವನ್ನು ನೀಡಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಿ ಅನ್ಯಾಯ ಮಾಡುತ್ತಿದ್ದಾರೆ ಎಂದರು

ಇದೇ ಸಂದರ್ಭದಲ್ಲಿ ಮಾತನಾಡಿದ ವಸಂತ್ ಕುಮಾರ್ ಗೌಡ ಪುರಸಭೆ ಅಧಿಕಾರಿಗಳು ನೂತನ ಕಟ್ಟಡವನ್ನು ಉದ್ಘಾಟನೆ ಮಾಡುತ್ತಿರುವುದು ಸರಿ ಆದರೆ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತವಾದ ವ್ಯಾಪಾರಕ್ಕೆ ಜಾಗವನ್ನು ನಿಗದಿಪಡಿಸಿ ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ್ದು ಅಧಿಕಾರಿಗಳ ಕರ್ತವ್ಯವಾಗಿದೆ ಕಾನೂನಿನ ಅಡಿಯಲ್ಲಿ ಕೂಡ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂಬುದು ಉಲ್ಲೇಖವಿದೆ ಎಂದರು

ಪುರಸಭೆ ಮುಖ್ಯ ಅಧಿಕಾರಿ ಶೈಲಾರವರು ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರವನ್ನು ಸ್ವೀಕರಿಸಿ ವಾಣಿಜ್ಯ ಕಟ್ಟಡವನ್ನು ಉದ್ಘಾಟನೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಮುಂದಿನ ದಿನದಲ್ಲಿ ಕಟ್ಟಡದ ಒಳಾಂಗಣದಲ್ಲಿ ಜಾಗವನ್ನು ನಿಗದಿಪಡಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು

ಪ್ರತಿಭಟನೆಯಲ್ಲಿ ಆಸಿಫ್ ಪಾಷಾ. ದೇವರಾಜು. ಗೌರಮ್ಮ .ಶೌಕತ್. ಖಾನ್. ಆನಂದ. ಈರೇಗೌಡ. ಮೆಹಬೂಬ್ ಖಾನ್ .ಜರ್ಮನ್ ಜಾನ್ .ಜ್ಯೋತಿ .ನೂರಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: