April 17, 2024

Bhavana Tv

Its Your Channel

ನಾಗಮಂಗಲದಲ್ಲಿ ಶೈಕ್ಷಣಿಕ ಮತ್ತು ಗ್ರಾಮೀಣ ಭಾಗಗಳ ಸಮುದಾಯ ಕಾರ್ಯಕ್ರಮ

ನಾಗಮಂಗಲ. ಸೆ.೧೬:- ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ವಿಜ್ಞಾನ ವಿಭಾಗ ಬೆಂಗಳೂರು ಸೌತ್ ರೋಟರಿ ಕ್ಲಬ್ ಜಂಟಿಯಾಗಿ ಶೈಕ್ಷಣಿಕ ಮತ್ತು ಗ್ರಾಮೀಣ ಭಾಗಗಳ ಸಮುದಾಯ ಕಾರ್ಯಕ್ರಮ ಯೋಜನೆಗಳು ರೂಪಿಸುವುದಾಗಿ ಪ್ರಾಂಶುಪಾಲರಾದ ಲೋಕೇಶ್ ಅವರು ತಿಳಿಸಿದರು

ಅವರಿಂದು ೧೫-೦೯-೨೦೨೧ ರಂದು ಪಟ್ಟಣದಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮತ್ತು ಬೆಂಗಳೂರು ಸೌತ್ ರೋಟರಿ ಕ್ಲಬ್ ನೊಂದಿಗೆ ಶೈಕ್ಷಣಿಕ ಮತ್ತು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲು ಪ್ಲಾನ್ ಆಫ್ ಆಕ್ಷನ್ ಸಿದ್ಧಪಡಿಸಲಾಯಿತು.

ಬೆಂಗಳೂರು ಸೌತ್ ರೋಟರಿ ಕ್ಲಬ್ಬಿನ ಕಮ್ಯುನಿಟಿ ಡೈರೆಕ್ಟರ್ ಗಳಾದ ರೊII ವಾಸುದೇವ್ ರೊIIಆನಂದ್ ಖಾಡೆ ಮತ್ತು ರೊIIರಾಮಕೃಷ್ಣರವರು ಕಾಲೇಜಿಗೆ ಭೇಟಿ ನೀಡಿ ಎಸ್‌ಎಸಿ-ಐಸಿಸಿ ಎಂಬ ಘಟಕ ಸ್ಥಾಪಿಸಿ ಘಟಕದ ಸದಸ್ಯರೊಂದಿಗೆ ಚರ್ಚಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ನಾಗಮಂಗಲದ ಗ್ರಾಮೀಣ ಭಾಗಗಳಿಗೆ ಪೂರಕವಾದ ಯೋಜನೆಗಳನ್ನು ಸಿದ್ದಪಡಿಸಲಾಯಿತು. ವಾಸುದೇವ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು ರೋಟರಿಕ್ಲಬ್ ಕೇವಲ ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ನಾಗಮಂಗಲದಗ್ರಾಮೀಣ ಭಾಗಕ್ಕೂ ಇದರ ಸೇವೆ ವಿಸ್ತರಿಸಲು ಈ ಕಾರ್ಯಕ್ರಮ ನಿರೂಪಿಸಿದ್ದೇವೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಪ್ರಾಂಶುಪಾಲ ಬಿಕೆ ಲೋಕೇಶ್ ಡಾಕ್ಟರ್ ಎಂ ಕೆ ಮಂಜುನಾಥ್ ಬಿ ಕೆ ಅಶ್ವತ್ ಕುಮಾರ್ ಕಾವ್ಯ ಸಿಕೆ ಪೂಜಾ ಮತ್ತು ಕಾಲೇಜಿನ ಇತರ ಸಿಬ್ಬಂದಿಗಳು ಹಾಜರಿದ್ದರು ಡಾಕ್ಟರ್ ಎಂ ಕೆ ಮಂಜುನಾಥ್ ಬಿ ಕೆ ಅಶ್ವತ್ ಕುಮಾರ್ ಕಾವ್ಯ ಸಿಕೆ ಪೂಜಾ ಮತ್ತು ಕಾಲೇಜಿನ ಇತರ ಸಿಬ್ಬಂದಿಗಳು ಹಾಜರಿದ್ದರು .

ವರದಿ: ದೇವಲಾಪುರ ಜಗದೀಶ್ ನಾಗಮಂಗಲ

error: