April 25, 2024

Bhavana Tv

Its Your Channel

ಸಮಾಜ ತಿದ್ದುವ ಪತ್ರಕರ್ತರ ಮೇಲೆ ಅತಿ ಹೆಚ್ಚು ದೇಶದ್ರೋಹ ಪ್ರಕರಣ, ಅಸಮಧಾನ ವ್ಯಕ್ತಪಡಿಸಿದ ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಎನ್ ರಮೇಶ್

ನಾಗಮಂಗಲ: ಮಾಧ್ಯಮ ಕ್ಷೇತ್ರ ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿದ್ದು ಸಮಾಜ ತಿದ್ದುವ ಪತ್ರಕರ್ತರ ಮೇಲೆ ಅತಿ ಹೆಚ್ಚು ದೇಶದ್ರೋಹ ಪ್ರಕರಣ ದಾಖಲಾಗುತ್ತಿದ್ದರೂ ಅವರ ನೋವು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯಾಧ್ಯಕ್ಷ ಎನ್ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಗೆ ಭೇಟಿ ನೀಡಿ ಪ್ರಸ್ತುತ ಪತ್ರಕರ್ತರ ಸ್ಥಿತಿ ಗತಿ ಬಗ್ಗೆ ಮಾತನಾಡಿದ ಅವರು ಬ್ರಿಟೀಷರ ವಿರುದ್ಧ ಬಳಸಲ್ಪಡುತ್ತಿದ್ದ ದೇಶದ್ರೋಹ ಕಾನೂನು ಈಗ ದುರುಪಯೋಗ ಆಗುತ್ತಿದೆ.

ಮಾಧ್ಯಮಗಳು ಇಂದು ಪೇಯ್ಡ್ ಕಾನ್ಸೆಪ್ಟ್ ಬಂದಿದೆ. ಪತ್ರಕರ್ತರು. ನಿತ್ಯವೂ ಒತ್ತಡದ ಬದುಕು ಸಾಗಿಸುವಂತಾಗಿದ್ದು ಕುಟುಂಬಗಳಿಗೆ ಭದ್ರತೆ ಇಲ್ಲವಾಗಿದೆ ಎಂದರು.

ಈ ವೇಳೆ ಕಚೇರಿಗೆ ಆಗಮಿಸಿದ್ದ ಕರ್ನಾಟಕ ಪ್ರೆಸ್ ಕ್ಲಬ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಬೆಂಗಳೂರು ನಗರಾಧ್ಯಕ್ಷ ದೀಪಕ್ ಅವರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಾಗಮಂಗಲ ಪ್ರೆಸ್ ಕ್ಲಬ್ ಅಧ್ಯಕ್ಷ ಗದ್ದೆಭೂವನಹಳ್ಳಿ ದೇವರಾಜು, ಉಪಾಧ್ಯಕ್ಷ ಎನ್ ಆರ್ ದೇವಾನಂದ್, ಕಾರ್ಯದರ್ಶಿ ಎಂಕೆ ಉಮೇಶ್, ಖಜಾಂಚಿ ಚಂದ್ರಮೌಳಿ ಸಂಘದ ಸದಸ್ಯರು ಇದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: