April 20, 2024

Bhavana Tv

Its Your Channel

ರಾಜೀನಾಮೆ ನಿರ್ಧಾರ ಬದಲಿಸಿದ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು.

ನಾಗಮಂಗಲ: ಕಳೆದ ಎರಡುವರೆ ವರ್ಷಗಳಿಂದ ಖಾಲಿ ಇದ್ದ ಮಂಡ್ಯ ಜಿಲ್ಲೆ, ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪಕ್ಷದ ನೂತನ ಅಧ್ಯಕ್ಷರ ಘೋಷಣೆಯೊಂದಿಗೆ ಅಧಿಕಾರ ಪದಗ್ರಹಣ ಸಮಾರಂಭದ ಸಂತಸದ ಕ್ಷಣ ಜಾರುವ ಮುನ್ನವೇ ಭಿನ್ನಮತದ ಅಸಮಧಾನ ಬುಗೆಲೆದ್ದು, ಮೂಲ ಮತ್ತು ನೊಂದ ಜೆಡಿಎಸ್ ಕಾರ್ಯಕರ್ತರ ಹಿತದೃಷ್ಟಿಯಿಂದ ಮನ್ಮುಲ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ನೆಲ್ಲಿಗೆರೆ ಬಾಲು ಬದಲಿಸಿದ್ದಾರೆ.

ಮನ್ಮುಲ್ ಶಾಖಾ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲುರವರು, ತಾಲೂಕಿನಲ್ಲಿ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಮತ್ತು ಹೆಚ್.ಡಿ.ಕುಮಾರಸ್ವಾಮಿರವರ ಗಮನಕ್ಕೆ ತರಲಾಗಿದೆ. ವರಿಷ್ಠರೇ ನಾಗಮಂಗಲಕ್ಕೆ ಆಗಮಿಸುವ ಮೂಲಕ ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಜೊತೆಗೆ ರಾಜೀನಾಮೆಯಂತಹ ದುಡುಕಿನ ನಿರ್ಧಾರ ಕೈ ಬಿಡುವಂತೆ ಸೂಚಿಸಿದ್ದಾರೆ. ವರಿಷ್ಠರು ಮಾತ್ರವಲ್ಲದೆ ಮನ್ಮುಲ್ ನ ಸಹಪಾಠಿ ನಿರ್ದೇಶಕರು ಸಹ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ. ಆದುದರಿಂದ ನನ್ನ ರಾಜೀನಾಮೆ ನೀಡುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಮುಂದುವರೆದು ಮಾತನಾಡುತ್ತಾ, ಕಳೆದ ಹಲವು ವರ್ಷಗಳಿಂದಲೂ ನನ್ನ ಸ್ವಂತ ಹಣದಲ್ಲಿ ಕಾರ್ಯಕರ್ತರೊಂದಿಗೆ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ಮಟ್ಟಿಗೆ ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ವರಿಷ್ಠರು ಸ್ವತಃ ಕ್ಷೇತ್ರಕ್ಕೆ ಆಗಮಿಸಿ ಸರಿಪಡಿಸಲಿದ್ದಾರೆ ಎಂದರು.

ವರದಿ: ಚಂದ್ರಮೌಳಿ ನಾಗಮಂಗಲ

error: