April 25, 2024

Bhavana Tv

Its Your Channel

ಸಮಾಜ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಾಗಿರುವುದು ನಮ್ಮಗಳ ಕರ್ತವ್ಯ- ಶ್ರೀಶಿವಸುಜ್ಞಾನ ತೀರ್ಥ ಮಹಾಸ್ವಾಮಿ

ನಾಗಮಂಗಲ. ಅ ೧೨:.ನಮ್ಮ ಸಮಾಜ ಹಾಗೂ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸ ಬೇಕಾಗಿರುವುದು ನಮ್ಮಗಳ ಕರ್ತವ್ಯವೆಂದು ಶ್ರೀ ಶಿವಸುಜ್ಞಾನತೀರ್ಥ ಮಹಾ ಸ್ವಾಮಿಗಳು ಕರೆನೀಡಿದರು

ಅವರಿಂದು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಸಮೀಪವಿರುವ ಹಿದುವ ಕೋಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಶ್ರೀಕಾಳಿಕಾಂಬ ಕಮಟೇಶ್ವರ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಇಂದು ನಮ್ಮ ನಾಡು ಪರಂಪರೆಯನ್ನು ಬರುವ ಪ್ರವಾಸಿಗರು ಇಲ್ಲಿನ ಕಲಾ ಪರಂಪರೆಯ ವೈಶಿಷ್ಟ್ಯವನ್ನು ನೋಡಲು ಆಗಮಿಸುತ್ತಿರುವುದು ವಿಶ್ವಕರ್ಮರಕೈಗನ್ನಡಿಯಾಗಿ ಇಂದಿಗೂ ಬಿಂಬಿಸುತ್ತಿರುವುದು ರಿಂದ ತಾವುಗಳು ಸಮುದಾಯ ಸಮಾಜ ಸಂಸ್ಕೃತಿಯ ಪ್ರತಿಬಿಂಬಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಬೆಳಕಾಗ ಬೇಕೆಂದುತಿಳಿಸಿ ಆಶೀರ್ವಚನ ಮಾಡಿದರು .

ಇದೇ ಸಂದರ್ಭದಲ್ಲಿತಾಲ್ಲೂಕಿನ ಶಾಸಕರಾದ ಸುರೇಶ್ ಗೌಡರು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಸಮುದಾಯ ಹಾಗೂ ದೇವಾಲಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳು ಗ್ರಾಮಸ್ಥರು ಅನೇಕ ಗಣ್ಯರ ಹಾಜರಿದ್ದರು.

ವರದಿ: ದೇವಲಾಪುರ ಜಗದೀಶ್ ನಾಗಮಂಗಲ

error: