April 24, 2024

Bhavana Tv

Its Your Channel

ಕನ್ನಡದ ಪ್ರಖ್ಯಾತ ಕೀರ್ತನಕಾರ ಕನಕದಾಸರು- ಎ.ಟಿ.ಶಿವರಾಮು

ನಾಗಮಂಗಲ. ಕನ್ನಡದ ಪ್ರಖ್ಯಾತ ಕೀರ್ತನಕಾರ ಅನುಭವಿ ದೈವ ಸಂತ ತಮ್ಮ ಶ್ರೇಷ್ಠ ಭಕ್ತಿ ಬರಹಗಳಿಂದಲೇ ಶ್ರೀಹರಿ ವಿಷ್ಣುವಿನ ಪರಿಚಾರಕನಾಗಿ ಮುಂದಿನ ಪೀಳಿಗೆಗೆ ಆದರ್ಶ ಜೀವನಕ್ಕೆ ತಮ್ಮ ಕೀರ್ತನೆಗಳ ಮೂಲಕವೇ ಜನತೆಗೆ ಧಾರೆಯೆರೆದ ಮಹಾ ಸಂತ ಶ್ರೀ ಕನಕದಾಸರು ದಾಸ ಪರಂಪರೆಯ ಬಹುಮುಖ್ಯ ಹರಿದಾಸ ಎನಿಸಿಕೊಂಡರು ಇವರ ತತ್ವ-ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಶ್ರೇಷ್ಠ ಪ್ರಜೆಗಳಾಗ ಬೇಕೆಂದು ವಿದ್ಯಾರ್ಥಿಗಳಿಗೆ ಡಾ. ಎ.ಟಿ .ಶಿವರಾಂ ತಿಳಿಸಿದರು

ತಾಲೂಕಿನ ಬೆಳ್ಳೂರಿನ ಬಿಜಿ ನಗರದ ಪಂಚಜನ್ಯ ಕ್ಯಾಂಪಸನ ಮಾಡೆಲ್ ಪಬ್ಲಿಕ್ ಸ್ಕೂಲ್. ಪಿಯು ಕಾಲೇಜ್. ಹಾಗೂ ಬಿಜಿಎಸ್ ಮಹಾವಿದ್ಯಾಲಯ ಭಾಷಾ ಸಂಘದ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು

ಹಾಸನದ ಎ.ವಿ.ಕೆ. ಮಹಿಳಾ ಪದವಿಪೂರ್ವ ಕಾಲೇಜಿನ ಕನ್ನಡಪರ ಪ್ರಾಧ್ಯಾಪಕ ಡಾ.ಸಿ.ಚ. ಯತೀಶ್ವರ ಮಾತನಾಡಿ ಕನಕದಾಸರ ಕೀರ್ತನೆಗಳ ಮೂಲಕ ಅಪೂರ್ವ ಕೊಡುಗೆ ಸಾಮಾಜಿಕ ಚಿಂತನೆಗಳು ಎಂಬ ವಿಚಾರ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು ಶಿಕ್ಷಣ ಕ್ಷೇತ್ರದಲ್ಲಿ ಕೋಟ್ಯಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನದ ವ್ಯವಸ್ಥೆಗೆ ಓಂಕಾರ ಹಾಕಿಕೊಟ್ಟ ನೂರಾರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ದೈವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಸ್ಮರಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: