December 3, 2021

Bhavana Tv

Its Your Channel

ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ೧೬೬೦ಕೋಟಿ ರೂ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ನಾಗಮಂಗಲ: ಕಳೆದ ಮೂರ್ನಾಲ್ಕು ತಿಂಗಳಿAದ ನೆರೆಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪರಿಹಾರ ನೀಡಲು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ೧೬೬೦ಕೋಟಿ ರು. ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ತಾಲೂಕಿನಾದ್ಯಂತ ಕಳೆದೆರಡು ತಿಂಗಳಿAದ ಸುರಿಯುತ್ತಿರುವ ಮಳೆಯಿಂದಾಗಿ ಮನೆಕಳೆದುಕೊಂಡಿರುವ ಬೆಳ್ಳೂರು ಹೋಬಳಿಯ ಬೆಳ್ಳೂರು ಮತ್ತು ದೇವಿಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿಕೊಟ್ಟು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನೆರೆಹಾವಳಿಯಿಂದ ಮನೆ ಮತ್ತು ಬೆಳೆಹಾನಿಯಾಗಿರುವ ರೈತರಿಗೆ ಕೃಷಿ ಇಲಾಖೆಯ ಸಹಯೋಗದೊಂದಿಗೆ ಕಂದಾಯ ನಿರೀಕ್ಷಕರು ಸಮೀಕ್ಷೆ ನಡೆಸಿ ೧೦ದಿನದಲ್ಲಿ ಅರ್ಹ ಫಲಾನಿಭವಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಅಲ್ಲದೇ ರಾಜ್ಯದಲ್ಲಿ ಈಬಾರಿ ಮಳೆಹಾವಳಿಯಿಂದ ಮನೆ ಕಳೆದುಕೊಂಡಿರುವ ಫಲಾನುಭವಿಗಳಿಗೆ ಕನಿಷ್ಠ ೧೦ ಸಾವಿರದಿಂದ ೫ಲಕ್ಷ ರೂ. ವರೆಗೂ ಪರಿಹಾರ ನೀಡಲಾಗಿದ್ದು, ಈವರೆಗೂ ಮೊದಲ ಕಂತಿನಲ್ಲಿ ೩೩೨ಕೋಟಿ ರು. ಮತ್ತು ಎರಡನೇ ಕಂತಿನಲ್ಲಿ ೪೧೮ಕೋಟಿ ರು. ಸೇರಿ ಒಟ್ಟು ೭೫೦ಕೋಟಿ ರು. ಪರಿಹಾರ ನೀಡಲಾಗಿದೆ. ಮಳೆಯಿಂದಾಗಿ ಜಲಾವೃತ್ತಗೊಂಡಿದ್ದ ೮೫ಸಾವಿರ ಕುಟುಂಬಗಳಿಗೆ ತಲಾ ೧೦ಸಾವಿರದಂತೆ ೮೫ಕೋಟಿ ರು. ಪರಿಹಾರ ನೀಡಲಾಗಿದೆ ಎಂದು ಹೇಳಿದರು.

೧೧೮ಮಂದಿ ಮೃತ ಕುಟುಂಬಗಳಿಗೆ ೫.೯ಕೋಟಿ ಪರಿಹಾರ : ಕಳೆದ ಜನವರಿಯಿಂದ ಈವರೆಗೂ ರಾಜ್ಯದಲ್ಲಿ ಮಳೆಹಾನಿಗೆ ಸಿಲುಕಿ ೧೧೮ಮಂದಿ ಮೃತಪಟ್ಟಿದ್ದು ಅವರ ಕುಟುಂಬಗಳಿಗೆ ೫.೯ಕೋಟಿ ರು. ಪರಿಹಾರ ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ೬೭೯ಕೋಟಿ ಹಣ ಲಭ್ಯವಿದ್ದು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗುವ ರೈತರಿಗೆ ಮತ್ತು ಫಲಾನುಭವಿಗಳಿಗೆ ಪರಿಹಾರ ನೀಡಲು ಹಣದ ಕೊರತೆಯಿಲ್ಲ ಎಂದರು.

ಮನೆಬಿದ್ದರೆ ೨ದಿನದಲ್ಲಿ ೧ಲಕ್ಷ ಪರಿಹಾರ : ಈ ಹಿಂದೆ ಮಳೆಯಿಂದ ಹಾನಿಗೊಳಗಾಗುತ್ತಿದ್ದ ರೈತರಿಗೆ ಮತ್ತು ಮನೆ ಕಳೆದುಕೊಳ್ಳುತ್ತಿದ್ದ ಕುಟುಂಬಗಳಿಗೆ ತಿಂಗಳಾದರೂ ಪರಿಹಾರ ಸಿಗುತ್ತಿರಲಿಲ್ಲ. ಆದರೀಗ ಅಂತಹ ಪ್ರಕರಣಗಳಿಗೆ ಕೇವಲ ಎರಡು ದಿನಗಳಲ್ಲಿ ಸೂಕ್ತ ಪರಿಹಾರ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಳೆಹಾನಿಯಿಂದ ಸಂಕಷ್ಟಕ್ಕೀಡಾಗುವ ರೈತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವ ಜೊತೆಗೆ, ಮಳೆಯಿಂದ ಮನೆ ಕಳೆದುಕೊಳ್ಳುವ ಕುಟುಂಬಗಳಿಗೆ ತಕ್ಷಣ ಎರಡು ದಿನದಲ್ಲಿ ೧ಲಕ್ಷ ರು. ಪರಿಹಾರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಲಾಜಿಲ್ಲದೆ ಕಟ್ಟುನಿಟ್ಟಾಗಿ ಆದೇಶ ಮಾಡಲಾಗಿದೆ. ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗುವ ರೈತರ ಮತ್ತು ಫಲಾನುಭವಿಗಳ ನೆರವಿಗೆ ನಿಲ್ಲಲು ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು.

ಕಳೆದೆರಡು ದಿನಗಳಿಂದ ಹಳೆಮೈಸೂರು ಭಾಗದಲ್ಲಿ ನಿರಂತರವಾಗಿ ಪ್ರವಾಸಕೈಗೊಂಡು ೧೨ಸ್ಥಳಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಪ್ರಮುಖವಾಗಿ ರಾಗಿ, ಜೋಳ ಹಾಗೂ ಭತ್ತದ ಬೆಳಗಳು ನಷ್ಟವಾಗಿರುವುದು ಕಂಡುಬAದಿದೆ. ಇಡೀ ರಾಜ್ಯದಲ್ಲಿ ಈಗಾಗಲೇ ೫ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿರುವ ಕುರಿತು ವರದಿಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಕಳೆದ ನಾಲ್ಕುದಿನದಲ್ಲಿ ೧.೫ಲಕ್ಷ ರೈತರ ಬ್ಯಾಂಕ್ ಖಾತೆಗೆ ೧೩೦ಕೋಟಿ ರು.ಹಣ ಬಿಡುಗಡೆ ಮಾಡಲಾಗಿದೆ. ಈದಿನ ೭೦ಸಾವಿರ ರೈತರ ಬ್ಯಾಂಕ್ ಖಾತೆಗೆ ೫೨ಕೋಟಿ ರು. ಹಣ ಬಿಡುಗಡೆ ಮಾಡುತ್ತಿದ್ದು, ಒಟ್ಟು ೨.೨ಲಕ್ಷ ಮಂದಿ ರೈತರಿಗೆ ೧೮೨ಕೋಟಿ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಹಾಗಾಗಿ ನೆರೆಹಾವಳಿಯಿಂದ ಸಂಕಷ್ಟಕ್ಕೀಡಾಗುವ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಂ.ಅಶ್ವತಿ, ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿ.ಪಂ. ಸಿಇಓ ವಿದ್ಯಾಕುಮಾರಿ, ಪ್ರಾಕೃತಿಕ ವಿಕೋಪ ಪರಿಹಾರ ಇಲಾಖೆಯ ಜಂಟಿ ನಿರ್ದೇಶಕ ಮನೋಜ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಕುಂಞ ಅಹಮ್ಮದ್ ಸೇರಿದಂತೆ ಕಂದಾಯ, ಕರಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

error: