March 29, 2024

Bhavana Tv

Its Your Channel

ಆದಿಚುಂಚನಗಿರಿ ಯೂನಿವರ್ಸಿಟಿಯ ಪಾಂಚಜನ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ನಾಗಮಂಗಲ. ತಾಲೂಕಿನ ಬೆಳ್ಳೂರ ಕ್ರಾಸ ಬಿ.ಜಿ. ನಗರದ ಪಾಂಚಜನ್ಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು ವೇದಿಕೆಯ ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಸ್ಥರಾದ ಎ.ಟಿ .ಶಿವರಾಮು ಆಧ್ಯಾತ್ಮಿಕ ರಾಯಭಾರಿಗಳಾದ ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರು ನಾಡಿನೆಲ್ಲೆಡೆ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಮಕ್ಕಳ ವಿದ್ಯಾರ್ಜನೆಗೆ ಅನುವು ಮಾಡಿ ಕೊಡುವುದರ ಮೂಲಕ ಕನ್ನಡದ ಕೈಂಕರ್ಯವನ್ನು ಮೆರೆದಿದ್ದಾರೆ, ಕನ್ನಡ ಸಾರಸ್ವತ ಲೋಕಕ್ಕೆ ೨೦೦೦ ವರ್ಷಕ್ಕೂ ಅಧಿಕ ಇತಿಹಾಸವಿರುವುದು ನಮ್ಮೆಲ್ಲ ಮೇರು ಸಾಹಿತಿಗಳ ಸಾಹಿತ್ಯ ಪ್ರಭೆಯಿಂದ ತಿಳಿಯುತ್ತದೆ ಎಂದ ನುಡಿದರು.

ಮತ್ತೊಬ್ಬ ಅತಿಥಿ ಶಿಕ್ಷಣ ತಜ್ಞರೂ ಆದಿಚುಂಚನಗಿರಿ ‘ವಿಕಸನ ಪ್ರಕಾಶನ’ದ ಕಾರ್ಯದರ್ಶಿಗಳೂ ಆದ ಎಂ ಜಿ ಚಂದ್ರಶೇಖರಯ್ಯ ಮಾತನಾಡಿ, ಕನ್ನಡಕ್ಕೆ ೮ ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಹೆಗ್ಗಳಿಕೆಯ ವಿಚಾರವೇ ಸರಿ. ನಮ್ಮ ಕನ್ನಡ ಭಾಷಾ ಪಾಂಡಿತ್ಯಕ್ಕೆ ಮತ್ತು ಶ್ರೇಷ್ಠ ಸಾಹಿತ್ಯಕ್ಕೆ ಹಿಡಿದ ಕೈ ಕನ್ನಡಿಯಂತಿದೆ, ಆದರೆ ಈ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರ ಒಂದೊAದು ಪುಸ್ತಕವನ್ನಾದರೂ ಓದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿರದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಉಲ್ಲೇಖಿಸುತ್ತಾ ಕರ್ನಾಟಕದ ಇತಿಹಾಸ, ಕನ್ನಡದ ಮೇರು ಸಾಹಿತ್ಯ, ನಾಡು ನುಡಿ ಕುರಿತು ಮಾಹಿತಿ ನೀಡಿದರು.

ರಾಜ್ಯೋತ್ಸವದ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ವಿಶೇಷ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ವಿಶೇಷ ಅತಿಥಿಯಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ, ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಕೆ ಸಿ ಯೋಗಾನಂದ, ಮಾಡೆಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಎನ್ ಕುಸುಮ ಹಾಗೂ ಪಾಂಚಜನ್ಯದ ತ್ರಿವಳಿ ಸಂಸ್ಥೆಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು

error: