March 29, 2024

Bhavana Tv

Its Your Channel

ಅಕ್ರಮ ಪಂಪ್ ಸೆಟ್ ನಡೆಸುತ್ತಿರುವ ರೈತರು ಸಕ್ರಮ ಮಾಡಿಕೊಳ್ಳಿ- ಕಾರ್ಯನಿರ್ವಾಹಕ ಅಭಿಯಂತರರು ಹೇಮಲತಾ

ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ೮೦೦ ಕ್ಕೂ ಹೆಚ್ಚು ಪಂಪ್ ಸೆಟ್ ಗಳು ಕಾರ್ಯನಿರ್ವಹಿಸುತ್ತಿದ್ದು ತಕ್ಷಣದಿಂದಲೇ ರೈತರು ಇಲಾಖೆ ನಿಯಮಾನುಸಾರ ನೋಂದಣಿ ಮಾಡಿಕೊಂಡು ಸಕ್ರಮಗೊಳಿಸಿ ಕೊಳ್ಳಬೇಕೆಂದು ನಾಗಮಂಗಲ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಉಪವಿಭಾಗದ ಕಾರ್ಯಪಾಲಕ ಅಭಿಯಂತರರಾದ ಹೇಮಲತಾ ರವರು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು

ತಾಲೂಕಿನ ವ್ಯಾಪ್ತಿಯಲ್ಲಿ ಎಂಟು ನೂರಕ್ಕೂ ಹೆಚ್ಚು ಅಕ್ರಮ-ಸಕ್ರಮ ಅಡಿಯಲ್ಲಿ ಪಂಪ್ ಸೆಟ್ ಗಳು ಕಾರ್ಯನಿರ್ವಹಿಸುತ್ತಿವೆ ಇಲಾಖೆಯ ಆದೇಶದಂತೆ ಎಲ್ಲವನ್ನೂ ಕೂಡ ಸಕ್ರಮ ಮಾಡಿಕೊಂಡು ರೈತರು ಸಹಕರಿಸಬೇಕೆಂದು ತಿಳಿಸಿದರು ಇಲಾಖೆಗೆ ನಿಖರವಾದ ಮಾಹಿತಿ ಹಾಗೂ ನೋಂದಣಿ ಮಾಡಿಸಿಕೊಂಡರೆ ಯಾವುದೇ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸರ್ಕಾರ ಮತ್ತು ಇಲಾಖೆಯಿಂದ ಸೌವಲತ್ತುಗಳು ದೊರೆಯುತ್ತದೆ ರೈತರು ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿ ಕೊಳ್ಳಬೇಕೆಂದು ಮನವಿ ಮಾಡಿದರು ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಟ್ರಾನ್ಸ್ ಫಾರಂ ಗಳನ್ನು ರಿಪೇರಿ ಗೊಳಿಸಲು ಬದಲಾವಣೆ ಮಾಡಲು ಯಾವುದೇ ರೀತಿ ಹಣವನ್ನು ಇಲಾಖೆಯ ನೌಕರರು ಮತ್ತು ಅಧಿಕಾರಿಗಳಿಗೆ ನೀಡಬಾರದೆಂದು ತಿಳಿಸಿದರು

ಸಹಾಯಕ ಇಂಜಿನಿಯರ್ ಕೆ ಮರಿಸ್ವಾಮಿ ಮಾತನಾಡಿ ಈ ಹಿಂದೆ ವಿದ್ಯುತ್ ಪರಿವರ್ತಕ ಕೆಟ್ಟರೆ ರಿಪೇರಿಗಾಗಿ ಹಲವಾರು ದಿನಗಳನ್ನು ಸಮಯ ತೆಗೆದುಕೊಳ್ಳುತ್ತಿದ್ದೆವು ಇಲಾಖೆ ಆದೇಶದಂತೆ ವಿದ್ಯುತ್ ಪರಿವರ್ತಕ ಕೆಟ್ಟರೆ ಅದಕ್ಕಾಗಿ ಒಂದು ವಾಹನವನ್ನು ಮೀಸಲಾಗಿಟ್ಟಿದ್ದೆ ಡಿಸೆಂಬರ್ ೧೦ ರ ನಂತರ ೨೪ ಗಂಟೆಯೊಳಗೆ ಸರಿಪಡಿಸಲಾಗುವುದು ತಿಳಿಸಿದರು

ಲೆಕ್ಕಾಧಿಕಾರಿ ನಾಗರಾಜು ಮಾತನಾಡಿ ನಮ್ಮ ಉಪವಿಭಾಗದಲ್ಲಿ ೨೧ನೇ ತಾರೀಕು ಕಂದಾಯ ರಶೀದಿ ಪುಸ್ತಕ ಕಾಣೆಯಾಗಿದ್ದು ರಸೀದಿ ಸಂಖ್ಯೆ ಡಿ.ಎನ್.ಓ.೫ ಪುಸ್ತಕದ ಸಂಖ್ಯೆ ೧೨ರ ೪೪೫೦ರಿಂದ ೪೮೦೦ ಒಟ್ಟು ೩೫೧ ರಶೀದಿಗಳು ಕಾಣೆಯಾಗಿರುತ್ತದೆ ಈ ಸಂಬoಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಖಾಲಿ ರಶೀದಿಗಳು ಆಮಾನ್ಯ ಮಾಡಲಾಗಿದೆ ಎಂದು ತಿಳಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: