April 20, 2024

Bhavana Tv

Its Your Channel

ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ- ಸ್ವಾಮಿ ವೀರೇಶಾನಂದ ಸರಸ್ವತಿ ಕರೆ

ನಾಗಮಂಗಲ :– ಇಂದಿನ ಯುವಜನಾಂಗದ ವಿದ್ಯಾರ್ಥಿ ಸಮೂಹ ವ್ಯಾಸಂಗದ ಅವಧಿಯಲ್ಲಿ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶ ತೆಯನ್ನು ಮೈಗೂಡಿಸಿಕೊಳ್ಳುವ ಮುಖಾಂತರ ಮುಂದಿನ ತಲೆಮಾರಿಗೂ ವಿವೇಕಾನಂದರ ತತ್ವಾದರ್ಶಗಳು ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ರವರು ಕರೆಕೊಟ್ಟರು

ಅವರು ನಾಗಮಂಗಲ ತಾಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬಿಜಿಎಸ್ ಶಿಕ್ಷಣ ಮಹಾವಿದ್ಯಾ ಲಯ ಹಾಗೂ ಬಿಜಿಎಸ್ ಔಷಧವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ”ಸ್ವಾಮಿ ವಿವೇಕಾನಂದ”ರ 160 ನೇ ಜನ್ಮದಿನಾಚರಣೆ ಅಂಗವಾಗಿ “ರಾಷ್ಟ್ರೀಯ ಯುವ ದಿನೋತ್ಸವ” ಭಾಗವಹಿಸಿ ಮಾತನಾಡುತ್ತಾ

ಆನ್ಲೈನ್ ಮೂಲಕ ಭಾಗಿಯಾದ ತುಮಕೂರಿನ “ರಾಮಕೃಷ್ಣ ವಿವೇಕಾನಂದ ಆಶ್ರಮದ” ಅಧ್ಯಕ್ಷರಾದ ‘ಸ್ವಾಮಿ ವೀರೇಶಾನಂದ ಸರಸ್ವತಿ’ ಅವರು “ಯಾರು ಈ ಸ್ವಾಮಿವಿವೇಕಾನಂದರು?” ಎಂಬ ವಿಷಯದ ಬಗ್ಗೆಮಾತನಾಡಿ… ಅಭಿನವ ವಿವೇಕಾನಂದರೆAದೇ ಖ್ಯಾತಿವೆತ್ತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕರ್ತೃತ್ವ ಸಾಮರ್ಥ್ಯ ವನ್ನು ಹೃದಯಂಗಮವಾಗಿ ವರ್ಣಿಸುತ್ತಾ, ಸ್ವಾಮಿ ವಿವೇಕಾನಂದರ ವಿಚಾರಧಾರೆಯಲ್ಲಿ ಮುಂದುವರೆದು, ನರೇಂದ್ರ ಯುವಕನಾಗಿದ್ದಾಗಲೇ ‘ಈ ನರೇಂದ್ರ ಮುಂದೆ ಜಗತ್ತಿಗೇ ಬೋಧಿಸುತ್ತಾನೆ’ ಎಂದು ತಮ್ಮ ಗುರು ಶ್ರೀರಾಮಕೃಷ್ಣ ಪರಮಹಂಸ ರಿಂದ ಶ್ಲಾಘನೆಗೊಳಗಾದ, ಮಹಾ ಶಿಷ್ಯಸಂತ ಎಂದು ಬಣ್ಣಿಸಿದರು.

ಶಂಕರ ಭಗವತ್ಪಾದರಂತೆ ವಿವೇಕಾನಂದರಿಗೂ ಜಗನ್ಮಾತೆಯೇ ಅನುಗ್ರಹಿಸಿ, ನಾಲಿಗೆಯಲ್ಲಿ ನಲಿಯುತ್ತಿದ್ದಾಳೆ ನುಡಿದರು. ಪರಿವ್ರಾಜಕರಾಗಿ ಕಾಲ್ನಡಿಗೆಯಲ್ಲೇ ರಾಜಮಹಾರಾಜರು, ಜನಸಾಮಾನ್ಯರನ್ನು ತಲುಪಿ, ಜಾಡಮಾಲಿಗಳ ಗುಡಿಸಲುಗಳ ಈ ಬವಣೆಗಳನ್ನೂ ಅರಿತವರಾಗಿ “ಶ್ರದ್ಧೆಯಿದ್ದರೆ ಗೆದ್ದೆ” ಎಂಬ ಧ್ಯೇಯವಾಕ್ಯದೊಂದಿಗೆ ಪಾಶ್ಚಾತ್ಯರನ್ನೂ ಆಧ್ಯಾತ್ಮ ಚಿಂತನೆಗೆ ಹಚ್ಚಿದ, ಜಗತ್ತನ್ನೇ ತನ್ನೆಡೆಗೆ ಸೆಳೆದ, ಅಯಸ್ಕಾಂತೀಯ ಗುಣವುಳ್ಳ ಧೀರ ಓಜಸ್ವಿ ಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಪರಿಚಯಿಸುತ್ತ
ಆಶೀರ್ವಚನ ನೀಡಿದರು.

ಪ್ರಾಸ್ತಾವಿಕ ನುಡಿಯನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಮಾನವಿಕ ಮತ್ತು ಸಮಾಜವಿಜ್ಞಾನಿಗಳು ವಿಭಾಗದ ಮುಖ್ಯಸ್ಥರಾದ ಡಾ. ಎ ಟಿ ಶಿವರಾಮು ಪ್ರಸ್ತುತ ಪಡಿಸಿದರು.

ಇವರೊಂದಿಗೆ ಸ್ವಾಮಿ ಧೀರಾನಂದಜೀ ಮಹಾರಾಜ್ ಅವರು ಕೂಡ ಪಾಲ್ಗೊಂಡು “ಸ್ವಾಮಿ ವಿವೇಕಾನಂದ ಮತ್ತು ರಾಷ್ಟ್ರ ಜಾಗೃತಿ” ಕುರಿತು ಮಾತನಾಡಿದರು. ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ ಕೆ ನರೇಂದ್ರ ಸ್ವಾಗತಿಸಿದರೆ,

ಔಷಧ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ರಮೇಶ್ ವಂದನಾರ್ಪಣೆ ನೆರವೇರಿಸಿದರು.

ಕಾರ್ಯಕ್ರಮ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕರಾದ ಎ ಸಿ ದೇವಾನಂದ್, ಟಿ ಮಲ್ಲಮ್ಮ, ನೂರ್ ಉಲ್ ಐನ್ ಹಾಗೂ ಎರಡೂ ಸಂಸ್ಥೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ದೇವಲಾಪುರ ಜಗದೀಶ ನಾಗಮಂಗಲ

error: