April 24, 2024

Bhavana Tv

Its Your Channel

ಎಸ್ಸಿ. ಎಸ್ಟಿ ಕುಂದುಕೊರತೆಗಳ ಸಭೆ, ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ದಲಿತ ಸಂಘಟನೆಗಳು

ನಾಗಮoಗಲ.ಕೋವಿಡ್ ನಿಯಮ ಗಾಳಿಗೆ ತೂರಿ ಕಿಷ್ಕಿಂಧೆ ಕೊಠಡಿಯಲ್ಲಿ ಎಸ್ಸಿ/ ಎಸ್ಟಿ ಕುಂದುಕೊರತೆಗಳ ಸಭೆ ನಡೆಸಿದ ನಾಗಮಂಗಲ ತಾಲ್ಲೂಕು ಆಡಳಿತ ವಿರುದ್ಧ ದಲಿತ ಸಂಘಟನೆಯ ಮುಖಂಡರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಸಭೆಗೆ ಕಳೆದ ಬಾರಿ ಅಧಿಕಾರಿಗಳ ಗೈರು ಹಾಜರಿಯಿಂದ ರದ್ದುಗೊಂಡಿತ್ತು ಈ ಭಾರಿ ಅಪಾರ ಸಂಖ್ಯೆಯಲ್ಲಿ ತಾಲೂಕಿನ ವ್ಯಾಪ್ತಿಯ ಮುಖಂಡರು ಆಗಮಿಸಿದ್ದು
ಕೊಠಡಿಯಲ್ಲಿ ಅಧಿಕಾರಿಗಳು ಹಾಗೂ ಮುಖಂಡರು ನಿಲ್ಲಲು ಕೂರಲೂ ಸ್ಥಳವಿಲ್ಲದೆ ತಿಣುಕಾಡಬೇಕಾದ ಪರಿಸ್ಥಿತಿ ಎದುರಾಗಿತ್ತು

ಅಂಬೇಡ್ಕರ್ ಭವನದಲ್ಲಿ ಸಭೆ ಆಯೋಜಿಸಿಲ್ಲ ಏಕೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ರನ್ನು ಪ್ರಶ್ನಿಸಿದರು ಅಲ್ಲದೆ ನಿಯಮ ಪಾಲಿಸಬೇಕಾದ ನೀವೆ ಮಾಸ್ಕ್ ಇಲ್ಲದೆ ಮಾತನಾಡುತ್ತಿದ್ದೀರಲ್ಲಾ ಎಂದು ತರಾಟೆ ತೆಗೆದುಕೊಂಡರು.

ತಕ್ಷಣವೇ ಮಾಸ್ಕ್ ಹಾಕಿಕೊಂಡ ಅಧಿಕಾರಿ ನಾವು ಅಂಬೇಡ್ಕರ್ ಭವನ ಕೇಳಿದ್ದರೂ ಪುರಸಭೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತಿಳಿಸುತ್ತಿದ್ದಂತೆ ಸಭೆಯಲ್ಲಿ ಗದ್ದಲ ಉಂಟಾಯಿತು ಮತ್ತು ಸಮುದಾಯದ ಸಭೆಗೆ ಬಳಕೆ ಆಗದ ಮೇಲೆ ಮತ್ಯಾಕೆ ಅಂಬೇಡ್ಕರ್ ಭವನ ಬೇಕು ಎಂದು ಪ್ರಶ್ನಿಸಿದರು.
ಈ ಸಂಬAಧ ಸಭೆ ಅಧ್ಯಕ್ಷರಾದ ತಹಶೀಲ್ದಾರ್ ಕುಂಞ ಅಹಮ್ಮದ್ 15 ದಿನದೊಳಗೆ ಅಂಬೆಡ್ಕರ್ ಭವನವನ್ನು ಕಾನೂನು ಬದ್ದವಾಗಿ ಸಮಾಜಕಲ್ಯಾಣ ಇಲಾಖೆ ಸುಪರ್ದಿಗೆ ಪಡೆದುಕೊಳ್ಳಲು ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ತಾಲ್ಲೂಕಿನಲ್ಲಿ ದಲಿತರಿಗೆ ಸ್ಮಶಾನಗಳಿಲ್ಲ. ಸರ್ವೇ ನಡೆಸಿ ಭೂಮಿ ಮಾಡುತ್ತೇವೆ ಎಂದು ನಾಲ್ಕು ವರ್ಷ ಆದ್ರೂ ಏನು ಕ್ರಮವಿಲ್ಲ ಎಂದು ಮುಖಂಡರು ಪ್ರಶ್ನಿಸಿದರು. ಇದಕ್ಕೆ ಭೂಮಾಪನ ಇಲಾಖೆ ಅಧಿಕಾರಿ ಪ್ರಮೋದ್ ನಾಗಮಂಗಲದಲ್ಲಿ 174 ಸ್ಮಶಾನ ಭೂಮಿ ಸರ್ವೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಈಗ 24 ಗ್ರಾಮಗಳಲ್ಲಿ ಸರ್ವೆ ಮುಗಿದಿದೆ, ಎಂದು ಸಮಜಾಯಿಷಿ ನೀಡಿದರು.
ನಂತರದಲ್ಲಿ ತಾಲ್ಲೂಕಿನ ಶಿಕಾರಿಪುರ ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಇದೆ ಈ ಬಗ್ಗೆ ಗಲಾಟೆ ಆಗಿ 100 ಮಂದಿ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ಮುಖಂಡರು ದೂರಿದರು.
ಈ ಬಗ್ಗೆ ತಹಶೀಲ್ದಾರ್ ಕುಂಞ ನಿಮ್ಮನ್ನು ಯಾರು ಒಕ್ಕಲೆಬ್ಬಿಸಲು ಸಾದ್ಯವಿಲ್ಲ ಪರಿಶೀಲಿಸುವಂತೆ ಪೊಲಿಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಶಾಂತಮ್ಮ ಕೃಷಿ ಅಧಿಕಾರಿ ಜಯರಾಮು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಸಿಪಿಐ ಸುಧಾಕರ್ ಪಿಎಸ್ ಐ ರವಿಶಂಕರ್ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಸಂಘಟನೆ ಹಲವಾರು ಮುಖಂಡರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: