April 26, 2024

Bhavana Tv

Its Your Channel

ರೈತರು ಪಿ.ಎಂ.ಕಿಸಾನ್ ಯೋಜನೆಯ ಇ-ಕೆವೈಸಿ ನೋಂದಣಿ ಮಾಡಿ -ಕೃಷಿ ಅಧಿಕಾರಿ ಜಯರಾಮ

ನಾಗಮಂಗಲ. ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಡಾ. ಜಯರಾಮ ನಾಗಮಂಗಲ ಸಹಾಯಕ ಕೃಷಿ ಇಲಾಖೆ ಕಚೇರಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಉಪಯೋಗಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು

ರೈತರು ಪಿ.ಎಂ.ಕಿಸಾನ್ ಯೋಜನೆಯನ್ನು ಮಾಡಿಸಿದ್ದು ಅದರ ಇ-ಕೆವೈಸಿ ಯನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ಮಾಡಿದ್ದು ನಾಗಮಂಗಲ ತಾಲೂಕಿನ ಎಲ್ಲಾ ರೈತ ಬಾಂಧವರು ಪಿ.ಎಂ.ಕಿಸಾನ್ ಇ-ಕೆವೈಸಿ ಯನ್ನು ಎರಡು ವಿಧಾನದಲ್ಲಿ ಮಾಡಿಕೊಳ್ಳಬಹುದು

ಕೇಂದ್ರ ಸರ್ಕಾರವು ಸ್ಥಾಪಿಸಲ್ಪಟ್ಟ pmkissan.gov.in ರೈತ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ದಾಖಲು ಮಾಡಿದಾಗ ಅವರು ಆಧಾರ್ ಸಂಖ್ಯೆಗೆ ಕೊಟ್ಟಿರುವ ಮೊಬೈಲ್ ನಂಬರಿಗೆ ಬರುವ ಒ.ಟಿ.ಪಿ.ಯನ್ನು ಹಾಕುವ ಮೂಲಕ ಮಾಡಿಕೊಳ್ಳಬಹುದು

ಮತ್ತೊಂದು ವಿಧಾನವೆಂದರೆ ಫಲಾನುಭವಿಗಳ ಮೊಬೈಲ್ ಸಂಖ್ಯೆಯು ಆಧಾರ್ ಕಾರ್ಡ್ ನಂಬರ್ ಗೆ ಜೋಡನೆ ಆಗಿಲ್ಲ ಎಂದರೆ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ನಾಗರಿಕ ಸೇವೆ ಕೇಂದ್ರ ಅಥವಾ ಸಿ.ಎಸ್ಸಿ.ಸೆಂಟರ್ ನಲ್ಲಿ ಹೋಗಿ ಅವರ ಬೆರಳಚ್ಚು ಕೊಡುವ ಮೂಲಕ ಇ-ಕೆ.ವೈ.ಸಿ. ಯನ್ನು ಸಂಪೂರ್ಣಗೊಳಿಸಿ ಕೊಳ್ಳಬಹುದು ಎಂದುನಾಗಮಂಗಲ ರೈತಪಿ ಬಾಂಧವರು ಆದಷ್ಟು ಬೇಗ ಇ-ಕೆವೈಸಿ ಎನ್ನು ಮಾಡಿಸಿಕೊಳ್ಳಲು ವಿನಂತಿಸಿದರು

ವರದಿ: ಚಂದ್ರಮೌಳಿ ನಾಗಮಂಗಲ

error: