March 22, 2024

Bhavana Tv

Its Your Channel

ಪ್ರಭಾವಿಗಳಿಂದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗೃಹ ನಿರ್ಮಾಣ, ತಾಲೂಕಾಡಳಿತ ನಿರ್ಲಕ್ಷ, ಗ್ರಾ.ಪಂ.ಸದಸ್ಯ ಜಯಕುಮಾರ ಆಕ್ರೋಶ

ನಾಗಮಂಗಲ. ತಾಲೂಕಿನ ಬಿಂಡಿಗನವಿಲೆ ಹೋಬಳಿ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಕೆರೆ ಗ್ರಾಮದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿ ರಾಜಾರೋಷವಾಗಿ ಮನೆ ಕಟ್ಟುತ್ತಿದ್ದರು ನಾಗಮಂಗಲ ತಾಲ್ಲೂಕು ಆಡಳಿತ ಸರ್ಕಾರಿ ಸಂಪತ್ತು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಲಾಳನಕೆರೆ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಬಿದರಕೆರೆ ಗ್ರಾಮದ ಬಿ.ಆರ್. ಕೃಷ್ಣೇಗೌಡ ಎಂಬಾತ ಸದರಿ ಗ್ರಾಮದ 157ರ ಸರ್ವೇ ನಂಬರ್ ನಲ್ಲಿ 4 ಎಕರೆ 16 ಗುಂಟೆ ಜಮೀನು ಕಬಳಿಸಿದ್ದಾರೆ ಈ ಸಂಬAಧ ತಹಶೀಲ್ದಾರ್ ಕುಂಜಿ ಅಹಮದ್ ರವರಿಗೆ ಲಿಖಿತರೂಪದಲ್ಲಿ ದೂರು ನೀಡಿಯೂ ಯಾವುದೆ ಕ್ರಮವಹಿಸುತ್ತಿಲ್ಲಾ,ಎಂದು ತಾಲ್ಲೂಕು ಆಡಳಿತ ಮತ್ತು ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.

ಜನಪ್ರತಿನಿಧಿಯಾಗಿ ಜನಪರ ಕಾಳಜಿಯಿಂದ. ಸರ್ಕಾರಿ ಆಸ್ತಿ ಉಳಿಸಲು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಯತಾಸ್ಥಿತಿ ಕಾಪಾಡುವಂತೆ ಘನ ನ್ಯಾಯಾಲಯ ಆದೇಶ ಮಾಡಿದ್ದರೂ ಕೂಡ ತಹಶೀಲ್ದಾರ್ ಕುಂಜಿ ಅಹಮದ್ ಕ್ರಮವಹಿಸದೆ ನ್ಯಾಯಾಂಗನಿAದ ಮಾಡಿದ್ದಾರೆಂದು ಆರೋಪಿಸಿದರು.

ಸದರಿ ಗ್ರಾಮದ ವೃತ್ತದಲ್ಲಿ ಈ ಗ್ರಾಮಕ್ಕೆ ಒಂದು ಲಂಕೇಶ್ ರಂಗಮAದಿರವಿದೆ ವಿಶಾಲವಾದ ಪ್ರದೇಶದಲ್ಲಿ ಅಕ್ರಮ ಮನೆ ನಿರ್ಮಾಣದಿಂದ ಗ್ರಾಮಕ್ಕೆ ತುಂಬಾ ತೊಂದರೆಯಾಗುತ್ತಿದೆ ದಿನನಿತ್ಯ ಈ ವೃತ್ತದಲ್ಲಿ ಸಾರ್ವಜನಿಕರು ಮತ್ತು ಸರ್ಕಾರಿ ಶಾಲೆ ಮಕ್ಕಳ ಸಂಚಾರ ಹಾಗೂ ಬಸ್ ಸಂಚಾರಕ್ಕೂ ಅಡ್ಡಿ ಆಗಿದ್ದರು ಮನೆ ನಿರ್ಮಾಣ ಸ್ಥಗಿತಗೊಳಿಸಿದೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅಕ್ರಮ ಎಸಗಿರುವವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದು ರಾಜಕೀಯ ಒತ್ತಡವೇ ಕಾರಣ ಎಂದು ತಾಲ್ಲೂಕು ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ವರದಿ: ಚಂದ್ರಮೌಳಿ ನಾಗಮಂಗಲ

error: