April 19, 2024

Bhavana Tv

Its Your Channel

ಸರ್ಕಾರ ಬೀದಿಬದಿ ವ್ಯಾಪಾರಿಗಳನ್ನು ಪರಿಗಣಿಸಬೇಕು- ಮಂಜು

ನಾಗಮoಗಲ.ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಬೆಳ್ಳೂರು ಘಟಕದ ವತಿಯಿಂದ ಇಂದು ಬೆಳ್ಳೂರು ಪಟ್ಟಣದ ಬಿ.ಎಂ. ಶ್ರೀ. ವೃತ್ತದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯನ್ನು ಸರಳವಾಗಿ ಬೆಳ್ಳೂರಿನ ಮಹಾಪುರುಷ ಬಿ.ಎಂ. ಶ್ರೀಕಂಠಯ್ಯ ಹಾಗೂ ಡಾ. ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡಲಾಯಿತು

ಕಾರ್ಯಕ್ರಮ ಉದ್ದೇಶಿಸಿ ಬೆಳ್ಳೂರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹಮದ್ ಯಾಸಿನ್ ಮಾತನಾಡಿ. ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ ದಿನಾಚರಣೆಯ ಶುಭಾಶಯಗಳು ಬೀದಿ ಬದಿ ವ್ಯಾಪಾರಿಗಳು ನಮ್ಮ ಪಟ್ಟಣ ಪಂಚಾಯತಿಯ ಒಂದು ಅಂಗವಾಗಿದ್ದಾರೆ ನಿಮ್ಮಗಳಿಂದ ಪಟ್ಟಣ ಪಂಚಾಯಿತಿಗೆ ಆದಾಯದ ಮೂಲವೂ ಕೂಡ ಇದೆ ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವಂತಹ ನಿಮ್ಮ ಸೇವೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಸಾರ್ವಜನಿಕರಿಗೆ ತೊಂದರೆಯಾಗದoತೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ನಿಮ್ಮ ಸಂಘದ ಏಳಿಗೆಗಾಗಿ ದುಡಿಯಬೇಕೆಂದು ತಿಳಿಸಿದರು

ಬೆಳ್ಳೂರು ಬೀದಿ ಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರಾದ ಮಂಜು ಮಾತನಾಡಿ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸರ್ಕಾರವಾಗಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಯಾಗಲಿ ನಿರ್ಲಕ್ಷ್ಯವಹಿಸಿದ್ದಾರೆ ಯಾರು ಕೂಡ ನಮ್ಮ ಭದ್ರತೆಯ ಬಗ್ಗೆ ಯೋಚಿಸುವುದಿಲ್ಲ ಕರ್ನಾಟಕ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ನೀಡಿದ್ದರು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಇದಕ್ಕೆ ಮಾನ್ಯತೆ ನೀಡದೆ ತೊಂದರೆ ಹಾಗೂ ಕಿರುಕುಳ ನೀಡುವ ಮೂಲಕ ಸದರಿ ಪ್ರಮಾಣ ಪತ್ರಕ್ಕೆ ಮಾನ್ಯತೆ ನೀಡುತ್ತಿಲ್ಲ.
ಇನ್ನೂ ಪೋಲೀಸ್ ಇಲಾಖೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆಯನ್ನು ಹೇಳತೀರದು ಸುಖಾಸುಮ್ಮನೆ ವ್ಯಾಪಾರದ ಸ್ಥಳದಿಂದ ತೆರುವು ಗೊಳಿಸುತ್ತಾರೆ ಕೂಡಲೇ ಇಂತಹ ನಿರ್ಧಾರಗಳನ್ನು ನಿಲ್ಲಿಸಬೇಕು ಹಾಗೂ
ಪ್ರಧಾನ ಮಂತ್ರಿ ಪಿ.ಎಂ.ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ಸಾಲಸೌಲಭ್ಯ ನೀಡದೆ ಕೆಲ ಬ್ಯಾಂಕ್‌ಗಳು ಸಾಲಸೌಲಭ್ಯ ಮಂಜೂರು ಮಾಡದೆ ತಾರತಮ್ಯ ತೋರುತ್ತಿದ್ದು ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸರ್ಕಾರ ಸ್ಪಂದಿಸಬೇಕೆAದು ಮನವಿ ಮಾಡಿದರು

ಕಾರ್ಯಕ್ರಮದಲ್ಲಿ ಬೆಳ್ಳೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಪಾಲ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಸತೀಶ್.ಪ್ರಧಾನ ಕಾರ್ಯದರ್ಶಿ ಸಿದ್ದರಾಜು. ಖಜಾಂಚಿ ಸಮೀರ್ ಅಹಮದ್. ಕಾರ್ಯದರ್ಶಿ ಶ್ರೀಧರ್ ಶೆಟ್ಟಿ. ಹಾಗೂ ನೂರಾರು ಮಹಿಳಾ ಮತ್ತು ಪುರುಷ ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: