April 24, 2024

Bhavana Tv

Its Your Channel

ನಾಲ್ಕು ವರ್ಷದಿಂದ ತಸ್ತೀಕ್ ಹಣ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅರ್ಚಕರು

ನಾಗಮಂಗಲ. ತಾಲ್ಲೂಕು ಮುಜರಾಯಿ ದೇವಾಲಯಗಳ ಸರ್ವ ಅರ್ಚಕರು, ಆಗಮಿಕರು ಮತ್ತು ನೌಕರರ ಸಂಘ ಇಂದು ಪಟ್ಟಣದ ಪ್ರೆಸ್ ಕ್ಲಬ್ ಅವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಾಗಮಂಗಲ ತಾಲೂಕು ಕಚೇರಿಯ ಮುಜರಾಯಿ ಶಾಖೆಯ ಅಧಿಕಾರಿ ಮತ್ತು ತಹಶಿಲ್ದಾರವರು ಕಳೆದ ನಾಲ್ಕು ವರ್ಷದಿಂದ ಮುಜರಾಯಿ ದೇವಸ್ಥಾನದ ಅರ್ಚಕ ವೃತ್ತಿ ಮಾಡುತ್ತಿರುವರಿಗೆ ಸರ್ಕಾರದಿಂದ ಹಣ ಮಂಜೂರಾಗಿದ್ದರೂ ಕೂಡ ತಸ್ತೀಕ್ ಹಣ ಬಿಡುಗಡೆ ಮಾಡಲು ಅರ್ಚಕರನ್ನು ಅನಾವಶ್ಯಕವಾಗಿ ಅಲೆಸುತ್ತಿದ್ದಾರೆ ಎಂದು ತಹಶಿಲ್ದಾರ್ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು

ನಾಗಮಂಗಲ ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷರಾದ ಸಂತೋಷ ಮಾತನಾಡಿ ನಾಗಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ಮುಜರಾಯಿ ದೇವಾಲಯಗಳಿದ್ದು ಈ ಕೆಳಕಂಡ ದೇವಸ್ಥಾನಗಳಾದ ಹೊನ್ನಾವರ,ಹಿಂಡಸಹಳ್ಳಿ, ಬೆಳ್ಳೂರು, ವಡ್ಡರಹಳ್ಳಿ ಹೂವಿನಹಳ್ಳಿ, ನೀಲಕಂಠನಹಳ್ಳಿ, ದೇವಾಲಯಗಳಿಗೆ ಕಳೆದ ನಾಲ್ಕು ವರ್ಷದಿಂದ ಸರ್ಕಾರದಿಂದ ದೊರೆಯುವ ಗೌರವಧನ ತಸ್ತೀಕ್ ಹಣ ಬಿಡುಗಡೆ ಮಾಡುತ್ತಿಲ್ಲ ತಾಲೂಕು ಕಚೇರಿಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮುಜರಾಯಿ ಅರ್ಚಕರಿಗೆ ತೊಂದರೆಗಳಾಗುತ್ತಿವೆ ಈ ಸಂಬAಧ ನೇರ ಹೊಣೆ ತಾಲೂಕು ಕಚೇರಿಯ ದಂಡಾಧಿಕಾರಿಗಳು ಕಾರಣವೆಂದು ಆರೋಪಿಸಿದರು

ಪ್ರಾಮಾಣಿಕವಾಗಿ ಮುಜರಾಯಿ ದೇವಾಲಯಗಳ ಅರ್ಚಕರ ವೃತ್ತಿ ನಿರ್ವಹಿಸಿಕೊಂಡು ದೇವಾಲಯ ರಕ್ಷಣೆಯನ್ನು ಕೂಡ ಮಾಡುತ್ತಿರುವ ಬಡ ಅರ್ಚಕರಿಗೆ ಇದೊಂದೇ ಮೂಲಾಧಾರ ವಾಗಿರುತ್ತದೆ ಸರ್ಕಾರದಿಂದ ತಸ್ತಿಕ್ ಹಣ ಬಿಡುಗಡೆಯಾಗಿದ್ದರು ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ಷಕ್ಕೆ ಆರು ತಿಂಗಳಿಗೊಮ್ಮೆ ಬರುವಂತಹ ಹಣವನ್ನು ಸರಿಯಾದ ರೀತಿ ನಿರ್ವಹಿಸದ ದಂಡಾಧಿಕಾರಿಗಳು ಹಾಗೂ ಕಚೇರಿ ಅಧಿಕಾರಿಗಳು ಅರ್ಚಕರಿಗೆ ಪಾವತಿಸದೆ ಸುಖಾಸುಮ್ಮನೆ ಅಲೆ ಸುತ್ತಿದ್ದಾರೆ ಎಂದು ಆರೋಪಿಸಿದರು

ಅರ್ಚಕರ ಸಂಘದ ಕಾರ್ಯದರ್ಶಿ ಲೋಕೇಶ್ ಮಾತನಾಡಿ ತಾಲ್ಲೂಕು ಕಛೇರಿಯಲ್ಲಿ ಮುಜರಾಯಿ ಇಲಾಖೆಯ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ನೌಕರರನ್ನು ತಂದು ಮುಜರಾಯಿ ಶಾಖೆ ನಿರ್ವಹಿಸಲು ನೇಮಿಸುತ್ತಾರೆ ಈ ಕಾರಣದಿಂದ ಹಲವಾರು ಗೊಂದಲಗಳು ಸೃಷ್ಟಿಯಾಗುತ್ತವೆ ಪೂರ್ವಿಕರ ಕಾಲದಿಂದಲೂ ಮುಜರಾಯಿ ಶಾಖೆಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಕೊಂಡು ಬರುತ್ತಿರುವ ಅರ್ಚಕರಿಗೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ ಈ ತಕ್ಷಣ ಜಿಲ್ಲಾಧಿಕಾರಿಗಳು ಮುಜರಾಯಿ ದೇವಸ್ಥಾನಗಳ ಅರ್ಚಕರ ನಿರ್ವಹಿಸುತ್ತಿರುವ ಎಲ್ಲರಿಗೂ ಕೂಡ ತಕ್ಷಣವೇ ತಸ್ತಿಕ್ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು

ಪತ್ರಿಕಾಗೋಷ್ಠಿಯಲ್ಲಿ ಅರ್ಚಕರ ಸಂಘದ ಖಜಾಂಚಿ ಪ್ರಸನ್ನಕುಮಾರ್. ಗೌರವಾಧ್ಯಕ್ಷರಾದ ರೇವಣಸಿದ್ದಪ್ಪ. ಸುಧೀಂದ್ರಚಾರ್. ನಿರ್ದೇಶಕರಾದ ಗುರುದೇವ್. ಬೋಗಾದಿ ರಾಜು ಹಾಜರಿದ್ದರು
ವರದಿ: ಚಂದ್ರಮೌಳಿ ನಾಗಮಂಗಲ

error: