April 20, 2024

Bhavana Tv

Its Your Channel

ಕರಪತ್ರ ರಹಸ್ಯ ಬಿಚ್ಚಿಟ್ಟ ಮಾಜಿ ಸಂಸದ ಶಿವರಾಮೇಗೌಡ

ನಾಗಮಂಗಲ. ತಾಲ್ಲೂಕಿನ ಜೆ.ಡಿ.ಎಸ್. ನಾಯಕ ಹಾಗೂ ಮಾಜಿ ಸಂಸದ ಎಲ್.ಅರ್. ಶಿವರಾಮೇಗೌಡ ಕಳೆದ ವಾರ ತಮ್ಮ ಫೇಸ್ಬುಕ್ ಖಾತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಪುಟದ ಪತ್ರವನ್ನು ಬಿಡುಗಡೆ ಮಾಡಿ ನಾಗಮಂಗಲ ರಾಜಕೀಯ ಕ್ಷೇತ್ರದಲ್ಲಿ ತಮ್ಮ ನಿಲುವಿನ ಬಗ್ಗೆ ಪತ್ರದ ಮೂಲಕ ಸವಿಸ್ತಾರವಾಗಿ ಬರೆದುಕೊಂಡು ನಾನು ಮುಂದಿನ ಬಾರಿ 2023 ರ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಆದರೆ ನನ್ನ ಸ್ಪರ್ಧೆಯನ್ನು ಸಹಿಸದ ನನ್ನ ಎದುರಾಳಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ನಾಗಮಂಗಲ ಕ್ಷೇತ್ರದ ಜನತೆ ಕಿವಿಗೊಡಬಾರದು ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಕ್ತವಾಗಿ ತಮ್ಮ ಮನದಾಳದ ಮಾತನ್ನು ತೋಡಿಕೊಂಡಿದ್ದರು

ಕರಪತ್ರ ವಿಚಾರವಾಗಿ ನಾಗಮಂಗಲ ತಾಲೂಕಿನಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಯ ಬಗ್ಗೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ ನನ್ನ ಮೇಲೆ ತಾಲ್ಲೂಕಿನಲ್ಲಿ ಒಂದು ದೂರಿದೆ, ಶಿವರಾಮೇಗೌಡ ಚುನಾವಣೆ ಮುಂಚೆ ಬರ್ತಾರೆ ಎಲೆಕ್ಷನ್ ನಲ್ಲಿ ನಿಂತು ಗುಲ್ಲೆಬ್ಬಿಸುತ್ತಾರೆ ಜನರನ್ನು ಸಂಘಟನೆ ಮಾಡುತ್ತಾರೆ ಕೋನೆಗೆ ನಿಂತವರ ಜೊತೆ ಅಡ್ಜೇಸ್ಟ್ ಹಾಗಿ ಹೊರಟು ಹೋಗುತ್ತಾರೆ ಎಂದು ನಮ್ಮ ವಿರೋಧಿಗಳು ಇಲ್ಲ ಸಲ್ಲದ ಪ್ರಚಾರವನ್ನು ತಾಲೂಕಿನ ವ್ಯಾಪ್ತಿಯಲ್ಲಿ ಮಾಡುತ್ತಿದ್ದಾರೆ ಇದೆಲ್ಲಾ ಕಟ್ಟುಕತೆ ನನ್ನ ಬಗ್ಗೆ ವಿರೋಧಿಗಳ ಅಪಪ್ರಚಾರಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು

ನಾನು ಮಾಜಿ ಶಾಸಕ ಚಲುವರಾಯಸ್ವಾಮಿ ಚುನಾವಣೆಯಲ್ಲಿ ಎಂದೂ ಅಡ್ಜೇಸ್ಟ್ ಮಾಡಿಕೊಂಡು ಹೋಗಿಲ್ಲ , ಎರಡು ಮೂರು ಸಾರಿ ಸುರೇಶ್ ಗೌಡರ ಜೊತೆ ಅಡ್ಜೆಸ್ಟ್ ಮಾಡಿಕೊಂಡು ಹೋಗುವ ಪರಿಸ್ಥಿತಿ ಬಂದಿರುವುದು ಸತ್ಯ ನಾನು ತಳಮಟ್ಟದಿಂದ 2008 ರ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಈ ಕ್ಷೇತ್ರದಲ್ಲಿ ಗಟ್ಟಿಗೊಳಿಸಿದ್ದೆ ಎರಡು ಸಾರಿ ಚುನಾವಣೆಯಲ್ಲಿ ಸೋತೆ ಎಂಬ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿಸಿ ಸುರೇಶ್ ಗೌಡರಿಗೆ ಟಿಕೆಟ್ ನೀಡಿದ್ದರು ಎರಡನೇ ಬಾರಿಗೆ ನನ್ನ ಮಗ ಚೇತನಗೌಡರಿಗೆ ಪದ್ಮನಾಭನಗರದಲ್ಲಿ ಟಿಕೆಟ್ ಕೊಟ್ಟು ನಾಗಮಂಗಲದಲ್ಲಿ ಸುರೇಶ್ ಗೌಡರಿಗೆ ಸಿದ್ದರಾಮಯ್ಯರವರು ಹೇಳಿದ್ದಕ್ಕೆ ಸಪೋರ್ಟ್ ಮಾಡಿದೆ, ನಂತರ ಎಮ್‌ಎಲ್‌ಸಿ ಮಾಡ್ತಿನಿ ಅಂತಾ ಮಾತು ಕೊಟ್ಟರು
ಸುರೇಶ್ ಗೌಡ ಸೋತಿದ್ದರು ನನಗೆ ಎಮ್‌ಎಲ್‌ಸಿ ನಲ್ಲಿ ಎಲ್ಲರೂ ಜೊತೆಗಿದ್ದೆ ದ್ರೋಹ ಬಗೆದರು ಅದರಲ್ಲೂ ಸೋತೆ ನಾನು.
ಇಂದು ಸ್ಪಷ್ಟ ಪಡಿಸುತ್ತಿದ್ದೆನೆ ನನಗೆ ತಾಲ್ಲೂಕಿನಲ್ಲಿ ರಾಜಕೀಯವಾಗಿ ಇಬ್ಬರು ವಿರೋಧಿಗಳು ಇದ್ದಾರೆ ಒಬ್ಬರು ಸನ್ಮಾನ್ಯ ಚಲುವರಾಯಸ್ವಾಮಿ ಮತ್ತೊಬ್ಬರು ಸನ್ಮಾನ್ಯ ನಮ್ಮದೆ ಪಕ್ಷದ ನಾಯಕರು ಶಾಸಕರು ಸುರೇಶ್ ಗೌಡರು ಎಂಬುದನ್ನು ಪ್ರಸ್ತಾಪಿಸುತ್ತೇನೆ ನಾನು 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ನಿರ್ಧಾರ ಮಾಡಿದ್ದೇನೆ
ಅಪ್ಪಾಜಿಗೌಡರು ಹಾಗೂ ನಾನು ತನು ಮನ ಧನ ಅರ್ಪಿಸಿ 47 ಸಾವಿರ ಮತಗಳ ಅಂತರದಿAದ ಸುರೇಶ ಗೌಡರನ್ನು ಗೆಲ್ಲಿಸಿ ಕೊಂಡು ಬಂದಿದ್ದೇವೆ ನಂತರ ಇತ್ತೀಚಿನ ದಿನಗಳಲ್ಲಿ ಶಾಸಕರು ಮೂಲ ಜೆಡಿಎಸ್ ಶಿವರಾಮೇಗೌಡರ.ಅಪ್ಪಾಜಿಗೌಡರ ಬೆಂಬಲಿಗರನ್ನು ದೂರ ಮಾಡಿ ತನ್ನ ಹೊಸ ಗುಂಪನ್ನೂ ಕಟ್ಟಿಕೊಂಡು ಹೋಗುತ್ತಿದ್ದಾರೆ ನಮ್ಮ ಬೆಂಬಲಿಗರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ ನನ್ನ ಬೆಂಬಲಿಗ ವಕೀಲರಾದ ರಾಮೇಗೌಡರನ್ನ ನೋಟರಿ ಮಾಡಲು ಸರ್ಕಾರದ ಮನವಿ ಮಾಡಲು ಮೂರು ಬಾರಿ ಹೇಳಿದರು ಅವರು ನನ್ನ ಕಡೆಯವರು ಎಂದು ಮಾಡಲಿಲ್ಲ ಅವರು ಮಾಡಿದ ಮೂರೂ ಜನರು ಅವರ ಜೊತೆಯಲ್ಲಿ ಈಗ ಇಲ್ಲ ಎಂದರು ನಾವು ಇದನ್ನು ರಾಷ್ಟ್ರೀಯ ನಾಯಕರು ಆದ ದೇವೆಗೌಡರ ಗಮನಕ್ಕೆ ತಂದಿದ್ದೆವೆ, ನಾನು ಮೂರು ಚುನಾವಣೆಯನ್ನ ಸುರೇಶ್ ಗೌಡನಿಗೆ ಮಾಡಿದ್ದು ಎರಡು ಚುನಾವಣೆಯಲ್ಲಿ ಗೆದ್ದು ಒಂದು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ ನನಗೆ ಸುರೇಶ್ ಗೌಡರ ಮೇಲೆ ವಯಕ್ತಿಕವಾದ ದ್ವೇಷ ಇಲ್ಲ, ಇವತ್ತು ನಾನು ಚುನಾವಣೆಗೆ ಬರಬೇಕು ಶಾಸಕನಾಗಬೇಕು 66 ವರ್ಷ ವಯಸ್ಸಾಯ್ತು ಜನರ ಸೇವೆ ಮಾಡಿದ್ದೆನೆ ನನಗೆ ಒಳ್ಳೆಯ ಅವಕಾಶ ಸಿಕ್ಕಲಿಲ್ಲ ಮೊದಲು ಶಾಸಕನಾದ ಸಂಧರ್ಭದಲ್ಲಿ ಕೇಸುಗಳನ್ನ ಕೋರ್ಟು ಕಛೇರಿ ಅಲೆಸಿದರು, ಎರಡನೇ ಬಾರಿ ಕೊಲೆ ಆರೋಪವನ್ನ ಮಾಡಿದ್ದರು ಎಲ್ಲದ್ದಕ್ಕು ದೊಡ್ಡ ರಾಜಕಾರಣಿಗಳು ಕಾರಣ ದೊಡ್ಡ ಮಟ್ಟದ ನಾಯಕರು ಪಾತ್ರವಹಿಸಿದ್ದರು.

ತಾಲೂಕಿನ ದೇವರು ಮೂಲೆ ಹದ್ದಿನ ಕಲ್ಲು ಹನುಮಂತರಾಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರತಿ ಪಂಚಾಯತಿವಾರು ಪ್ರವಾಸ ಮಾಡುತ್ತೆನೆ, ಸಂಸದ ಚುನಾವಣೆಯಲ್ಲಿ ನನಗೆ 70 ಸಾವಿರ ಮತಗಳನ್ನ ಕೊಟ್ಟವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಕೋಡುತ್ತಾರೆ. ಯಾರೂ ಏನೇ ಹೇಳಿದರು ನಾನೇ ಅಭ್ಯರ್ಥಿಶಾಸಕ ಸುರೇಶ್ ಗೌಡ ಅಧಿಕಾರ ಇರುವಾಗ ಅವರ ಮಟ್ಟದಲ್ಲಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ನಾನು ಇಲ್ಲ ಅನ್ನಲ್ಲ ಆದ್ದರಿಂದ ನನಗೂ ಅವರು ಶಾಸಕ ಸ್ಥಾನವನ್ನ ಬಿಟ್ಟುಕೊಟ್ಟು ಅವಕಾಶ ಮಾಡಿಕೊಡಬೇಕು. ನನ್ನ ಹಿರಿತನ ನೋಡಿ ವಿಶ್ವಾಸಕ್ಕೆ ತೆಗೆದುಕೊಂಡರೆ ಒಳ್ಳೆಯದು. ನಾನು ಈಗಾಗಲೆ ತೀರ್ಮಾನ ಮಾಡಿದ್ದು ಚುನಾವಣಾ ಕಣದಲ್ಲಿ ಇರುತ್ತೆನೆ ಇದು ಸತ್ಯ ಚುನಾವಣೆ ಸ್ಪರ್ಧೆ ಮಾಡುತ್ತೆನೆ. ಎಂದರು
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ರಾಮೇಗೌಡ ಮುಖಂಡರಾದ ಚನ್ನಪ್ಪ. ಬಿದರಕೆರೆ ಗ್ರಾಮ ಪಂಚಾಯಿತಿ ಸದಸ್ಯ .ಜಯಕುಮಾರ.ಸಂತೋಷ್ ಲಾಳನಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ ಕುಮಾರ್ ನಾಗತಿಹಳ್ಳಿ ಗೋಪಾಲ್ ಹಾಗೂ ದೇವರಾಜು ಉಪಸ್ಥಿತರಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: