April 26, 2024

Bhavana Tv

Its Your Channel

ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರಿಗೆ ಒಂದೇ ವೇತನ ಜಾರಿಯಾಗಲಿ :- ಕೆ.ಟಿ. ಶ್ರೀಕಂಠೇಗೌಡ

ನಾಗಮoಗಲ:- ಪಟ್ಟಣದ ಎಸ್ ಎಲ್.ಎನ್. ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ (ರಿ) ನಾಗಮಂಗಲ ತಾಲ್ಲೂಕು ಘಟಕದ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಏರ್ಪಡಿಸಲಾಯಿತು

ಗಣ್ಯರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತಾ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಒಂದೇ ರೀತಿಯ ವೇತನವನ್ನು ಜಾರಿ ಮಾಡಬೇಕು ಕೇಂದ್ರ ಸರ್ಕಾರದ ನೌಕರರಿಗೆ ಹೆಚ್ಚಿನ ವೇತನವನ್ನು ನೀಡಿ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ ಈಗಾಗಲೇ ದೇಶದಲ್ಲಿ 26 ರಾಜ್ಯಗಳ ನೌಕರರಿಗೆ ಒಂದೇ ರೀತಿಯ ವೇತನವನ್ನು ಜಾರಿ ಮಾಡಿದೆ ಕರ್ನಾಟಕ ಸರ್ಕಾರವು ಕೂಡ ಜಾರಿಗೊಳಿಸಬೇಕು ಹಾಗೂ
ಶಾಲಾ ಶಿಕ್ಷಕರು ನಿವೃತ್ತಿಯಾದ ನಂತರ ಕುಟುಂಬ ಸದಸ್ಯಗೆ ಗೌರವ ನಿವೃತ್ತಿ ವೇತನ ಸಿಗಬೇಕು
ಹೊಸ ಶಿಕ್ಷಣ ನೀತಿಗೆ ನನ್ನ ವಿರೋಧವಿಲ್ಲ ಆದರೆ ಪೂರ್ವತಯಾರಿ ಮಾಡಿಕೊಂಡು ನಂತರ ಜಾರಿಗೆ ತರುವುದು ಉತ್ತಮ ವೆಂದರು
ಶಿಕ್ಷಣ ನೀತಿಯ ಬಗ್ಗೆ ಸರ್ಕಾರದಲ್ಲಿ ಗೋಂದಲ್ಲಿರುವುದರಿAದ ಈ ವಿಚಾರವಾಗಿ ನಿರಂತರವಾಗಿ ಸದನದಲ್ಲಿ ದ್ವನಿ ಎತ್ತುವೆ ಎಂದರು

ಮತ್ತೊಬ್ಬ ಗಣ್ಯ ರಾಜ್ಯ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಎಚ್.ಕೆ. ರಾಮು ಮಾತನಾಡಿ ನಮ್ಮ ಸರ್ಕಾರಿ ವೃತ್ತಿಯ ಜೊತೆಗೆ ಇಂತಹ ಕಾರ್ಯಗಾರ ಗಳಿಂದ ನೌಕರರ ಒಗ್ಗೂಡಲು ಸಹಕಾರಿಯಾಗುತ್ತದೆ ಈ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು ಉತ್ತಮವಾದ ಕೆಲಸ ಎಲ್ಲರೂ ಕೂಡ ಹೊಸ ಮನ್ವಂತರದತ್ತ ದಾಪುಗಾಲು ಹಾಕಲು ಸಾಧ್ಯವೆಂದರು

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ ರಿಗೆ ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕರು ಪುಟ್ಟರಂಗಪ್ಪ, ಸಮಾಜ ಸೇವಕರು ಗೌರೀಶ್, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ .ಶಿಕ್ಷಕವೃಂದ ಭಾಗವಹಿಸಿದರು…

ವರದಿ: ಚಂದ್ರಮೌಳಿ ನಾಗಮಂಗಲ

error: