March 22, 2024

Bhavana Tv

Its Your Channel

ಕೆರೆಏರಿ ಸರಿಪಡಿಸುವಂತೆ ಶಾಸಕ ಸುರೇಶಗೌಡ ವಿರುದ್ಧ ರೈತ ಮಹಿಳೆ ಹಾಗೂ ಗ್ರಾಮಸ್ಥರ ಆಕ್ರೋಶ

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೋನಗೆರೆ ಗ್ರಾಮದ ಕೆರೆಏರಿಯು ಕಳೆದ ಮೂರು ವರ್ಷದ ಹಿಂದೆ ಹೊಡೆದು ಹೋಗಿ ಸುಮಾರು 20 ಎಕರೆ ಪ್ರದೇಶದ ರೈತರ ಬೆಳೆ ಕೊಚ್ಚಿಹೋಗಿ ಕೆರೆ ಹಿನ್ನೀರಿನ ಪ್ರದೇಶದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು

ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಅಧಿಕಾರಿಗಳು.ತಾಲೂಕು ದಂಡಾಧಿಕಾರಿ ಹಾಗೂ ಶಾಸಕ ಸುರೇಶಗೌಡ ಸ್ಥಳಕ್ಕೆ ಭೇಟಿ ನೀಡಿ ವೀರಾವೇಶದ ಮಾತುಗಳನ್ನು ಆಡಿ ಕೆರೆಯನ್ನು ತಕ್ಷಣ ಸರಿಪಡಿಸುತ್ತೇವೆ ಎಂದು ಹೇಳಿ ಹೋಗಿದ್ದೆ ಆಗಿತ್ತು ಮೂರು ವರ್ಷ ಕಳೆದರೂ ಇಲ್ಲಿಯವರೆಗೂ ಇತ್ತ ಯಾರೂ ಕೂಡ ತಲೆಹಾಕಿಲ್ಲ ಕೆರೆ ಹಿಂಭಾಗದ ಜಮೀನಿನ ರೈತ ಮಹಿಳೆ ಹೇಳುವಂತೆ ಯಾರೂ ಕೂಡ ಸ್ಥಳಕ್ಕೆ ಬಂದಿಲ್ಲ ನಮಗೆ ಯಾವುದೇ ಸಹಾಯಧನ ನೀಡಿಲ್ಲ ಜಮೀನಿನ ತುಂಬಾ ಕಲ್ಲುಗಳು ತುಂಬಿ ನಾಲ್ಕು ವರ್ಷಗಳು ಕಳೆದಿವೆ ಎಂದು ಆಕ್ರೋಶ ಭರಿತರಾಗಿ ಭ್ರಷ್ಟ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಹರಿಹಾಯ್ದರು

ರೈತ ಮಹಿಳೆ ಹೇಳುವಂತೆ ಕೆರೆಯೇರಿ ಸರಿಪಡಿಸದೆ 16 ಲಕ್ಷ ಹಣ ಲೂಟಿ ಮಾಡುವ ಉದ್ದೇಶದಿಂದ ಸರಿ ಇದ್ದ ಕೆರೆ ಕೋಡಿಯನ್ನು ಒಡೆದು ಕಳಪೆ ಕಾಮಗಾರಿ ಮಾಡಲು ಹೊರಟಿದ್ದಾರೆ ಎಷ್ಟು ಸರಿ ಎಂದು ಆಕ್ರೋಶ ಭರಿತವಾಗಿ ನುಡಿದರ ರೈತರು ಬದುಕಲು ಕೆರೆಯೇರಿ ಸರಿಪಡಿಸಿ ಬೆಳೆ ಮಾಡಲು ಅವಕಾಶ ಮಾಡಿಕೊಡಬೇಕು ಜಾನು ವಾರುಗಳಿಗೆ ಕುಡಿಯಲು ನೀರು ತುಂಬಿಸಬೇಕು ಎಂದು ಮನವಿ ಮಾಡಿದರು
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಉಮೇಶ್ ಮಾತನಾಡಿ ಶಾಸಕರು ಮತ್ತು ಹಿಂಬಾಲಕರು ಹಣ ಮಾಡುವ ಉದ್ದೇಶದಿಂದ ಸರಿಇದ್ದ ಕೆರೆಕೋಡಿಯನ್ನು ಕಿತ್ತು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಶಾಸಕರು ಮೊದಲು ಒಡೆದುಹೋದ ಕೆರೆ ಏರಿಯನ್ನು ಸರಿಪಡಿಸಲೆಂದು ಆಕ್ರೋಶಭರಿತರಾಗಿ ನುಡಿದರು

ವರದಿ:-ಚಂದ್ರಮೌಳಿ ನಾಗಮಂಗಲ

error: