March 25, 2024

Bhavana Tv

Its Your Channel

ಗ್ರಾಮ ದೇವತೆ ಹಬ್ಬದಲ್ಲಿ ರಾಜಕಾರಣಿಗಳ ಅರೆಬೆತ್ತಲೆ ನಂಗನಾಚ್ ಕಾರ್ಯಕ್ರಮ

ನಾಗಮಂಗಲ:- ವಿಶ್ವ ಮಹಿಳಾ ದಿನಾಚರಣೆಯ ದಿನದಂದು ನಾಗಮಂಗಲದಲ್ಲಿ ಮಧ್ಯರಾತ್ರಿ ತನಕ ಅರೆ ಬೆತ್ತಲೆ ನೃತ್ಯ ನಂಗನಾಚ್ ಕಾರ್ಯಕ್ರಮ ನಡೆಯಿತು.ನಂಗನಾಚ್ ಮತ್ತು ನಾಗಮಂಗಲ ರಾಜಕಾರಣಿಗಳಿಗೆ ಅವಿನಾಭಾವ ಸಂಬAಧ ಇಪ್ಪತ್ತು ವರ್ಷದ ಹಿಂದೆ ಮಾಜಿ ಸಂಸದ ಶಿವರಾಮೇಗೌಡ ರವರ ಕಾಲದಲ್ಲಿ ದೇವಲಾಪುರ ಗ್ರಾಮದ ರಾಜಕೀಯ ಕಾರ್ಯಕ್ರಮದಲ್ಲಿ ನಂಗನಾಚ್ ನಡೆಸಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಮತ್ತೆ ನಾಗಮಂಗಲದಲ್ಲಿ ಚುನಾವಣೆ ವರ್ಷದ ಮುಂಚೆಯೇ ಮತ್ತೆ ತಲೆಯೆತ್ತಿ ಮಧ್ಯರಾತ್ರಿ ತನಕ ನಡೆದ ಅರೆಬೆತ್ತಲೆ ನಂಗನಾಚ್

ನಾಗಮAಗಲ ತಾಲೂಕು ದೇವಲಾಪುರ ಹೋಬಳಿಯ ತೋಳಸಿ ಕೊಬ್ಬರಿ ಗೇಟ್ ಗ್ರಾಮದಲ್ಲಿ ನಡೆದ ಮಾರಮ್ಮದೇವಿ ಹಬ್ಬದ ಪ್ರಯುಕ್ತ ರಾಜಕೀಯ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಎರಡೆರಡು ಕಡೆ ಆಯೋಜಿಸಿದ್ದ ಅರಬೆತ್ತಲೆ ನಂಗನಾಚ್ ಗ್ರಾಮದ ತುಂಬೆಲ್ಲಾ ವಿಜೃಂಭಿಸಿದ ರಾಜಕಾರಣಿಗಳು ಹಾಗೂ ಬೆಂಬಲಿಗರ ಕಟೌಟ್ ಹಾಗೂ ಪಟಾಕಿ ಸಿಡಿತ

ಎರಡು ರಾಜಕೀಯ ವೇದಿಕೆಯ ಗೊಂದಲದಿAದ ವೇದಿಕೆ ನಿರ್ಮಿಸಲು ಗ್ರಾಮದ ಗೇಟ್ ಬಳಿ ಶಾಸಕ ಸುರೇಶಗೌಡ ಬೆಂಬಲಿಗರಿಗೆ ಅವಕಾಶ ಗ್ರಾಮ ಒಳಭಾಗದ ಮಾರಮ್ಮ ದೇವಾಲಯದ ಹತ್ತಿರ ಮಾಜಿ ಶಾಸಕ ಚೆಲುವರಾಯಸ್ವಾಮಿ ವೇದಿಕೆ ಸೃಷ್ಟಿಸುವ ಅವಕಾಶ.
ವೇದಿಕೆ ಕಾರ್ಯಕ್ರಮಕ್ಕೆ ಸುಮಾರು ಎಂಟು ಗಂಟೆಗೆ ಆಗಮಿಸಿದ ಮಾಜಿ ಶಾಸಕ ಚೆಲುವರಾಯಸ್ವಾಮಿ ಕಾರ್ಯಕ್ರಮ ಮುಗಿದ ನಂತರ ಸುಪುತ್ರ ಸಚಿನ್ ಹಾಗೂ ಅಣ್ಣನ ಮಗ ಸುನಿಲ್ ಗ್ರಾಮಕ್ಕೆ ಆಗಮಿಸಿ ಮಾಜಿ ಶಾಸಕ ಚೆಲುವರಾಯಸ್ವಾಮಿ ಪರವಾಗಿ ಮತಯಾಚನೆ ಮಾಡಿ ಪ್ರಚಾರ ಮಾಡಿ ಹೊರನಡೆದರು

ಸುಮಾರು 10 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಶಾಸಕ ಸುರೇಶಗೌಡ ವೇದಿಕೆ ಕಾರ್ಯಕ್ರಮ ಹಂಚಿಕೊAಡು ತಮ್ಮ ಶಾಸಕ ಅವಧಿಯಲ್ಲಿ ನಿರ್ವಹಿಸಿದಂತಹ ಕೆಲಸಗಳು ಮತ್ತು ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸಿ ಮತಯಾಚನೆ ಮಾಡಿ ವೇದಿಕೆಯಿಂದ ಹೊರನಡೆದರು

ಇಬ್ಬರು ನಾಯಕರು ಗ್ರಾಮದಿಂದ ಹೊರಟುಹೋದ ನಂತರ ಇಬ್ಬರು ನಾಯಕರ ಗ್ರಾಮದ ಎರಡು ಸ್ಟೇಜು ಗಳಲ್ಲೂ ವಿಜೃಂಭಿಸಿದ ಅರೆಬೆತ್ತಲೆ ನೃತ್ಯ ಅತಿರೇಕದ ನೃತ್ಯ ಮಧ್ಯರಾತ್ರಿ ತನಕ ಗ್ರಾಮದಲ್ಲಿ ಎರಡು ರಾಜಕೀಯ ವೇದಿಕೆಗಳಲ್ಲೂ ಕೂಡ ಅರೆಬೆತ್ತಲೆ ನೃತ್ಯ ನಡೆಸಲಾಯಿತು

ಸುರೇಶ್ ಗೌಡ ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ಕುಡಿದು ನರ್ತಕಿಯರೊಂದಿಗೆ ಕುಣಿದಾಡಿದ ಗ್ರಾಮದ ಮುಗ್ಧ ಕುಡುಕ ಜನರು

ಇನ್ನು ಮಾಜಿ ಶಾಸಕ ಚೆಲುವರಾಯಸ್ವಾಮಿ ವೇದಿಕೆಯಲ್ಲಿ ಭರಪೂರ ಭೋಜನ ಅತಿರೇಕ ಎಂಬAತೆ ನೃತ್ಯಕ್ಕೆ ಕಾಂಗ್ರೆಸ್ ಚಿಹ್ನೆಯ ಸಾಲನ್ನೇ ತಲೆಗೆ ಕಟ್ಟಿ ಸಾರಾಯಿ ಸಿಸೆಯಲ್ಲಿ ಹಾಡಿಗೆ ನೃತ್ಯ ಮಾಡಿದ ಅಭಿಮಾನಿ

ನರ್ತಕಿಯರ ಅತಿರೇಕದ ವರ್ತನೆ ತಾವು ಕುಣಿಯ ಬೇಕಾದರೆ ಸಾರ್ವಜನಿಕರು ಕುಣಿಯಬೇಕು ಎಂದು ವೇದಿಕೆಯಿಂದ ಮಧ್ಯಭಾಗಕ್ಕೆ ಬಂದು ಕುಣಿಯುತ್ತಿದ್ದರು 12 ವರ್ಷದ ಒಬ್ಬ ಬಾಲಕನನ್ನು ವೇದಿಕೆ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿ ತಬ್ಬಿ ಮುತ್ತಿಟ್ಟು ಪ್ರಸಂಗ ನಡೆಯಿತು ಯುವ ಬಾಲಕ ಹೆದರಿದರಿಂದ ಮತ್ತೆ ವೇದಿಕೆಯಿಂದ ಕೆಳಭಾಗಕ್ಕೆ ಬಿಡಲಾಯಿತು

ಎರಡು ಗ್ರಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟ್ಟ ಮಕ್ಕಳು ಮತ್ತು ಮಹಿಳೆಯರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದೇ ಇಂತಹ ನಂಗಾನಾಚ್ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಅಸಹ್ಯಕರ ಮನೋಭಾವದಿಂದ ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ

ವರದಿ: ಚಂದ್ರಮೌಳಿ ನಾಗಮಂಗಲ

error: