April 20, 2024

Bhavana Tv

Its Your Channel

ನಾಳೆಯಿಂದ ಆದಿಚುಂಚನಗಿರಿ ಜಾತ್ರಾಮಹೋತ್ಸವ

ನಾಗಮಂಗಲ: ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಮಾ.11 ರಿಂದ 19ರ ವರೆಗಿನ ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾಕೈಂಕರ್ಯಗಳೂ ಸೇರಿದಂತೆ ಹಲವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಮಾ.11ರಶುಕ್ರವಾರ ಬೆಳಿಗ್ಗೆ 08.30 ಕ್ಕೆ, ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಪೂಜೆಯೊಂದಿಗೆ ಧರ್ಮ ಧ್ವಜ ಸ್ಥಾಪನೆ ಮಾಡುವ ಮೂಲಕ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಇದೇ ದಿನ ಬೆಳಿಗ್ಗೆ 10.30 ಕ್ಕೆ ಯುವ ಸಮ್ಮೇಳನ ಕಾರ್ಯಕ್ರಮವಿದೆ.

ಮಾ.12ರ ಶನಿವಾರ ಬೆಳಿಗ್ಗೆ 10.30 ಕ್ಕೆ ಚುಂಚಶ್ರೀ ಮಹಿಳಾ ಸಮಾವೇಶ, ರಾತ್ರಿ 7 ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ.

ಮಾ.13ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಸಂಗೀತೋತ್ಸವ ಹಾಗೂ ರಾತ್ರಿ 7 ಗಂಟೆಗೆ ಮಲ್ಲೇಶ್ವರಸ್ವಾಮಿ ಉತ್ಸವ ನಡೆಯಲ್ಲಿದೆ.

ಮಾ.14ರ ಸೋಮವಾರ ಬೆಳಿಗ್ಗೆ 10.30 ಕ್ಕೆ ಒಕ್ಕಲಿಗರ ಸಂಘಗಳ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಗೆ ಶ್ರೀಸಿದ್ದೇಶ್ವರಸ್ವಾಮಿ ಉತ್ಸವ ನಡೆಯಲಿದೆ

ಮಾ.15ರ ಮಂಗಳವಾರ ಬೆಳಿಗ್ಗೆ ಶ್ರೀಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚಾಲಂಕಾರ ಹಾಗೂ ಶ್ರೀಗಂಗಾಧರೇಶ್ವರ ಸ್ವಾಮಿಗೆ ರಜತ ನಾಗಭರಣ ಅಲಂಕಾರ, ಅದೇ ದಿನ ಬೆಳಿಗ್ಗೆ 10.30ಕ್ಕೆ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನೆ ನಡೆಯಲಿದ್ದು, ಸಂಜೆ 7 ಗಂಟೆಗೆ ಶ್ರೀಕಾಲಭೈರವೇಶ್ವರಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ 7.30ಕ್ಕೆ ಹಾಗೂ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪೂಜೆ ಜರುಗಲಿದೆ.

ಮಾ.16ರ, ಬುಧವಾರ ಸೋಮೇಶ್ವರ ಸ್ವಾಮಿಯ ಉತ್ಸವ ಜರುಗಲಿದೆ. ಬೆಳಿಗ್ಗೆ 09.30 ಕ್ಕೆ ಉಚಿತ ಸರಳ ಸಾಮೂಹಿಕ ವಿವಾಹ, ಸಂಜೆ 7 ಗಂಟೆಗೆ ಶ್ರೀನಿರ್ಮಲಾನಂದನಾಥವರಿoದ ಜ್ವಾಲಾಪೀಠಾ ರೋಹಣ, ಸಿದ್ಧಸಿಂಹಾಸನ ಪೂಜೆ ನಡೆಯುತ್ತದೆ. ರಾತ್ರಿ 9 ಗಂಟೆಗೆ ಚಂದ್ರ ಮಂಡಲೋತ್ಸವ

ಮಾ.17ರ ಗುರುವಾರ ಬೆಳಿಗ್ಗೆ ಕ್ಷೇತ್ರಾಧಿದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ರಾತ್ರಿ 7ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಮುಷ್ಕರಣಿಯಲ್ಲಿ ತೆಪ್ಪೋತ್ಸವದ ನಂತರ ನಾಟಕ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿದೆ.

ಮಾ.18ರ ಶುಕ್ರವಾರ ಮುಂಜಾನೆ 04 ಗಂಟೆಗೆ ಬಾಹಿ ಮೂಹೂರ್ತದಲ್ಲಿ ಶ್ರೀಗಂಗಾಧರೇಶ್ವರ ಸ್ವಾಮಿಯ ಮಹಾ ರಥೋತ್ಸವ ಹಾಗೂ ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಅಡ್ಡಪಾಲಕಿ ಉತ್ಸವ ಬಹಳ ವಿಜೃಂಭಣೆಯಿAದ ಜರುಗಲಿದ್ದು, ಇದೇ ದಿನ ಸಂಜೆ 6ಗಂಟೆಗೆ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣೆ ನಡೆಯಲಿದೆ. ಬಳಿಕ ಪಾಲಕಿ ಉತ್ಸವ ನಡೆಯಲಿದೆ.

ಮಾ.19ರಶನಿವಾರ ಬೆಳಿಗ್ಗೆ 9ಗಂಟೆಗೆ ಧರ್ಮಧ್ವಜಾವರೋಹಣ, ಸ್ವಾಮೀಜಿಯವರ 9.30 ಕ್ಕೆ ಬಿಂದು ಸರೋವರದಲ್ಲಿ ಅವಧೃತ ಸ್ನಾನ, ಮಹಾಭಿಷೇಕ, ಮತ್ತು ಸಭಾ ಕಾರ್ಯಕ್ರಮದೊಂದಿಗೆ ಒಂಭತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ ಎಂದು ಶ್ರೀಮಠ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ..

ವರದಿ: ಚಂದ್ರಮೌಳಿ ನಾಗಮಂಗಲ

error: