March 26, 2024

Bhavana Tv

Its Your Channel

ನಾಗಮಂಗಲ ಬಿ.ಸಿ.ಎಂ. ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ. ಪ್ರಭಾರ ವಿಸ್ತರಣಾಧಿಕಾರಿಯ ದರ್ಬಾರ್ ನಿಲಯಪಾಲಕರ ಸಾಥ್

ನಾಗಮಂಗಲ:- ರಾಜಕಾರಣವನ್ನೆ ಉಂಡು ಮಲಗುವ ನಾಗಮಂಗಲ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಕೂಪವಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಿತಿಯೇ ಇಲ್ಲದ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿಲ್ಲವೇ ಎಂದು ಶಾಸಕ ಸುರೇಶ್ ಗೌಡರನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಳೆದ 20 ವರ್ಷಗಳಿಂದಲೂ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಬ್ಬ ತಾಲೂಕು ಮಟ್ಟದ ವಿಸ್ತರಣಾಧಿಕಾರಿ ನೇಮಕ ಗೊಳ್ಳದಂತೆ ನೋಡಿಕೊಂಡು ಇಲ್ಲಿನ ಕೆಳಮಟ್ಟದ ಅಧಿಕಾರಿಗಳೆ ಇಲಾಖೆಯನ್ನು ತಮ್ಮ ಕಪಿಮುಷ್ಠಿಯ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. 15 ವರ್ಷದಿಂದಲೂ ಇಲ್ಲಿಯ ನಿಲಯ ಪಾಲಕನೇ ಪ್ರಭಾರ ವಿಸ್ತರಣಾಧಿಕಾರಿಯಾಗಿದ್ದಾರೆ ಎಂದರೆ ನಂಬುತ್ತೀರಾ ಈ ಇಲಾಖೆಯಲ್ಲಿ ಅಂದ ದರ್ಬಾರ್ ನಡೆಸುತ್ತಾ ಬ್ರಷ್ಟಾಚಾರ ಮಾಡುತ್ತಿದ್ದಾರೆ

ಪ್ರಸ್ತುತ ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ 18 ವಸತಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. 12 ಬಾಲಕರ ವಸತಿ ನಿಲಯದಲ್ಲಿ 1010 ಮಕ್ಕಳು ಹಾಗೂ 6 ಬಾಲಕಿಯರ ವಸತಿ ನಿಲಯದಲ್ಲಿ 515 ಮಕ್ಕಳಿದ್ದು ಒಟ್ಟು 1525 ಮಕ್ಕಳಿರುತ್ತಾರೆ ಎಂದು ಸರ್ಕಾರಕ್ಕೆ ಲೆಕ್ಕ ನೀಡಲಾಗುತ್ತಿದೆ ಈ ವಸತಿ ನಿಲಯಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಮಕ್ಕಳು ಯಾಕೆ ಇರುತ್ತಾರೆ
ಇದಲ್ಲದೆ 13 ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಹತ್ತಾರು ವರ್ಷದಿಂದಲೂ ತಿಂಗಳ ಬಾಡಿಗೆ ಎಂದೆ 5.38.350 ರೂಪಾಯಿಗಳನ್ನು ಸರ್ಕಾರದಿಂದ ಜಮಾ ಮಾಡಿಸಲಾಗುತ್ತಿದೆ ಇಲ್ಲಿಯೂ ಕೂಡ ಪ್ರಸ್ತುತ
ಚಾಲ್ತಿಯಲ್ಲಿರುವುದಕ್ಕಿಂತ ಮೂರು ಪಟ್ಟು ಹೆಚ್ಚುವರಿ ಬಾಡಿಗೆ ನೀಡಿ ಭ್ರಷ್ಟಾಚಾರ ನಡೆಸುತ್ತಿದ್ದಾರೆಎಂಬ ಆರೋಪಗಳಿವೆ.

ಇಲ್ಲಿಯ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಇಲ್ಲಿನ ವಾರ್ಡನ್ ಗಳೇ ಹೊರಜಿಲ್ಲೆಯಿಂದ ನೌಕರರನ್ನು ಕರೆತಂದು ನೇಮಕ ಮಾಡಿಕೊಂಡಿದ್ದಾರೆ,
ಇಲಾಖೆಗೆ ನೀಡಿರುವ ಲೆಕ್ಕವೇ ಒಂದು ವಸತಿ ನಿಲಯಗಳಲ್ಲಿ ಇರುವಂತಹ ಮಕ್ಕಳ ಲೆಕ್ಕವೇ ಬೇರೊಂದಾಗಿದೆ, ಅಕ್ಕ ಪಕ್ಕದ ಗ್ರಾಮಗಳ ಮಕ್ಕಳನ್ನು . ರಾತ್ರಿ ಕರೆತಂದು ಹೆಬ್ಬೆಟ್ಟು ಸಹಿ ಪಡೆಯುತ್ತಿದ್ದಾರೆ,
ತಾಲೂಕಿನ ಪ್ರತಿ ವಸತಿ ನಿಲಯಗಳಲ್ಲಿ ಕೂಡ ಸುಳ್ಳು ಲೆಕ್ಕ ನೀಡಿ ಪ್ರತಿ ತಿಂಗಳು ಕೂಡ ಲಕ್ಷಾಂತರ ರೂಪಾಯಿ ಲಪಟಾಯಿಸಿ ಭ್ರಷ್ಟ ಅಧಿಕಾರಿಗಳು ತಮ್ಮ ಜೇಬಿಗೆ ಇಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ

ಇನ್ನು ಬಾಲಕಿಯರ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ರಾತ್ರಿ ಕಾವಲುಗಾರರನ್ನು ಇರಬೇಕಾಗುತ್ತದೆ ದುರಂತವೆAದರೆ ಇಲಾಖೆಯಲ್ಲಿ ಒಬ್ಬನೂ ಕೂಡ ರಾತ್ರಿ ಕಾವಲುಗಾರ ಇರುವುದಿಲ್ಲ ಎನ್ನಲಾಗಿದೆ.

ಪ್ರತಿ ವಸತಿ ನಿಲಯಗಳ ನಾಮಫಲಕದಲ್ಲಿ ಇರುವ ಹೊರಗುತ್ತಿಗೆ ನೌಕರರೇ ಬೇರೆ
ಹಾಸ್ಟೆಲ್ ನಲ್ಲಿ ಕೆಲಸ ಮಾಡುತ್ತಿರುವ ನೌಕರರೇ ಬೇರೆಯಾಗಿದ್ದಾರೆ. ಇಲ್ಲಿ ಅಡುಗೆಯವರು ಮತ್ತು ಸಹಾಯಕ ಅಡಿಗೆಯವರ ಬೆಂಬಲಿಗರೇ ಪ್ರತಿ ಹಾಸ್ಟೆಲ್ ನಲ್ಲಿ. ಬೇನಾಮಿ ಹೆಸರಿನಲ್ಲಿ ದರ್ಬಾರ್ ನಡೆಸುತ್ತಿದ್ದಾರೆ.

ಇನ್ನು ಆಕಸ್ಮಿಕವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಬೆರಳೆಣಿಕೆಯಷ್ಟು ಮಕ್ಕಳ ಸಂಖ್ಯೆಯನ್ನು ನೋಡಬಹುದಾಗಿದೆ. ವಿಚಾರಿಸಿದರೆ ರಜಾ ಹೋಗಿದ್ದಾರೆ ಎಂಬುದು ಸಿದ್ದ ಉತ್ತರ ನೀಡುತ್ತಾರೆ.
ಮತ್ತೆ ಹಾಸ್ಟೆಲ್ ನ ಯುವಕರು ರಾತ್ರಿ 10ರ ನಂತರ ಪಟ್ಟಣದ ಭಾಗಗಳಲ್ಲಿ ತಿರುಗಾಡುತ್ತಾರೆ ಕೇಳಿದರೆ ಊಟಕ್ಕೆ ಬಂದೆವು ಎಂಬ ನೆಪ ಹೇಳುತ್ತಾರೆ

ಹೀಗೆ ಸಾಕಷ್ಟು ಅವ್ಯವಸ್ಥೆಗಳಿರುವ ನಾಗಮಂಗಲ ತಾಲೂಕಿನ ಬಿಸಿಎಂ ವಸತಿ ನಿಲಯಗಳಲ್ಲಿ ಉತ್ತಮ ಆಹಾರ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಇಚ್ಚಾಶಕ್ತಿ ವಹಿಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳು ನೌಕರರು ವಿರುದ್ಧ ಮೇಲಾಧಿಕಾರಿಗಳು ಹಾಗೂ ಇಲ್ಲಿಯ ಶಾಸಕರು ಯಾವ ಕ್ರಮ ವಹಿಸುತ್ತಾರೆ ಎಂದು ಕಾದುನೋಡಬೇಕು.

ವರದಿ: ಚಂದ್ರಮೌಳಿ ನಾಗಮಂಗಲ

error: