March 29, 2024

Bhavana Tv

Its Your Channel

ಶ್ರೀ ಬಸವೇಶ್ವರ ಸ್ವಾಮಿ ಆದಿಶಕ್ತಿ ಮಂಚಮ್ಮ ಹಾಗೂ ಹುಚ್ಚಮ್ಮ ದೇವರ ಜಾತ್ರಾ ಮಹೋತ್ಸವ

ನಾಗಮಂಗಲ. ತಾಲೂಕಿನ ದೇವಲಾಪುರ ಹೋಬಳಿಯ ಶಿಲ್ಪಾಪುರ ಗ್ರಾಮ ದೇವರುಗಳಾದ ಶ್ರೀ ಬಸವೇಶ್ವರ ಸ್ವಾಮಿ ಆದಿಶಕ್ತಿ ಮಂಚಮ್ಮ ಹಾಗೂ ಹುಚ್ಚಮ್ಮ ದೇವರ ಜಾತ್ರಾ ಮಹೋತ್ಸವ ಮತ್ತು ಗ್ರಾಮದೇವತೆ ಹಬ್ಬವನ್ನು ಶಿಲ್ಪಪುರ ಗ್ರಾಮದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು

ಗ್ರಾಮದೇವತಾ ಹಬ್ಬದ ಪ್ರಯುಕ್ತ ಬೆಳಿಗ್ಗೆಯಿಂದಲೇ ಗ್ರಾಮದ ದೇವರುಗಳಿಗೆ ಹೋಮ ಹವನ, ಪೂಜಾ ಕಾರ್ಯಗಳು ಉತ್ಸವ ಮೆರವಣಿಗೆ ಕಾರ್ಯಕ್ರಮ ಭಕ್ತವೃಂದದಿAದ ನೆರವೇರಿತು ಈ ಕಾರ್ಯಕ್ರಮದಲ್ಲಿ ನಡೆದಾಡುವ ದೇವರು ಎಂದೇ ಹೆಸರಾಗಿರುವ ಕವಣಾಪುರ ಬಸವಣ್ಣ ದೇವರು ಹಾಗೂ ಡಾ.ರುದ್ರೇಶ್ ಅವರ ತಂಡದವರಿAದ ವೀರಗಾಸೆ ಕುಣಿತ ಭಕ್ತರ ಕಣ್ಮನ ಸೆಳೆಯಿತು

ಕಳೆದ ಎರಡು ವರ್ಷದಿಂದಲೂ ಕರೋನಾ ಮಹಾಮಾರಿ ವೈರಸ್ ನಿಂದ ತತ್ತರಿಸಿದ್ದ ಗ್ರಾಮಸ್ಥರು ಗ್ರಾಮದೇವತೆ ಹಬ್ಬವನ್ನು ನಿಲ್ಲಿಸಿದ್ದರು ಈ ವರ್ಷ ಗ್ರಾಮ ದೇವತೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಗ್ರಾಮ ವಿದ್ಯುತ್ ಅಲಂಕಾರದಿAದ ಅಲಂಕರಿಸಿ ಕಂಗೊಳಿಸುತ್ತಿತ್ತು ವಿಶೇಷವಾಗಿ ಕವಣಪುರ ಬಸವೇಶ್ವರ ಸ್ವಾಮಿಯವರನ್ನು ಗ್ರಾಮಕ್ಕೆ ಕರೆಸಿ ಗ್ರಾಮ ದೇವತೆಗಳು ಮತ್ತು ವೀರಗಾಸೆ ಕುಣಿತ .ಪಟಕುಣಿತ. ಪಟಾಕಿ ಸಿಡಿತ. ಗ್ರಾಮದ ಮಹಿಳೆಯರಿಂದ ತಂಬಿಟ್ಟು ಆರತಿ ಹೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು ನಂತರ ಗ್ರಾಮದೇವತೆಗೆ ಮಹಾಮಂಗಳಾರತಿ ಸಲ್ಲಿಸಿ ಬಸವೇಶ್ವರ ಸ್ವಾಮಿಯನ್ನು ದರ್ಶನ ಮಾಡಲು ಅವಕಾಶ ನೀಡಲಾಯಿತು

ಇದೇ ಸಂದರ್ಭದಲ್ಲಿ ಗ್ರಾಮದೇವತೆ ಹಬ್ಬಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು

ಗ್ರಾಮ ದೇವತೆ ಹಬ್ಬದಲ್ಲಿ ಗ್ರಾಮದ ಮುಖಂಡರು ಸುತ್ತಮುತ್ತಲ ಗ್ರಾಮಸ್ಥರು ಭಕ್ತರಿಂದ ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: